ಸಚಿವ ಸಂಪುಟ ಸಭೆಯಲ್ಲಿ ಬರ ಘೋಷಣೆ: ಸಚಿವ ದೇಶಪಾಂಡೆ

0
2
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಬರ ಪೀಡಿತ ಜಿಲ್ಲೆ ಘೋಷಿಸಲು ಆ.31 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಜಿಲ್ಲೆಯ ಯಲಬುರ್ಗಾ ಲ್ಲಿ ಭಾನಾಪೂರ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯನ್ನದ್ದೇಶಿಸಿ ಮಾತನಾಡಿದರು.ಈಗಾಗಲೇ ಬೆರೆ ಬೆರೆ ಜಿಲ್ಲೆಗಳಿಗೆ ಹಾಗೂ ಜಿಲ್ಲೆಯ ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ಬರ ಪೀಡಿತ ಪ್ರದೇಶಗಳ ಕುರಿತು ಅಧಿಕಾರಿಗಲ ಹಾಗೂ ರೈತರ ಜೋತೆ ಚರ್ಚೆ ಮಾಡಿ ಬರವನ್ನು ವಿಕ್ಷಣೆ ಮಾಡಲಾಗಿದೆ. ಆದರೆ ಅ.29 ರೊಳಗೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆ ಸಮೀಕ್ಷೆ ಪಾರದರರ್ಸಕವಾಗಿರಲು ದ್ರೋಣ ಕ್ಯಾಮರಾ ಬಳಸಲಾಗುತ್ತಿದೆ. ಇದರಿಂದ ಬಂದ ನೈಜ ಚಿತ್ರಣ ದೊರೆಯಲಿಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಇದರ ಕುರಿತು ಅ.31ರಂದು ಸಂಪುಟ ಸಭೆ ನಡೆಯಲಿದೆ. ಆದರೆ ಇ ಸಭೆಯಲ್ಲಿ ಬರ ಕುರಿತು ಚರ್ಚಿಸಿ ಬರ ಘೋಷಣೆ ಮಾಡಿ ಮುಂದಿನ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸರಕಾರದಲ್ಲಿ ಯಾವುದೇ ಹಣದ ಕೊರತೆಯಿಲ್ಲ. ಆದರೆ ಕುಡಿಯುವ ನೀರು, ಮೇವು ಕೊರತೆಯಾಗದಂತೆ ಅಧಿಕಾರಿಗಳು ಮುಂಜಾಗ್ರತ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ ಎಂದರು.ಡಾ.ಕಸ್ತೂರಿ ರಂಗನ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಸರ್ವಪಕ್ಷಗಳು ಸಹಪತ ವ್ಯಕ್ತಪಡಿಸಬೇಕು. ಪರಿಸರ ಸಂರಕ್ಷಣೆ ಮಾಡಬೇಕು ಎನ್ನುವುದು ಎಲ್ಲರಲ್ಲಿ ಬರಬೇಕು. ಎಂದರು.
ಸಚಿವ ಹೆಚ್.ಡಿ.ರೇವಣ್ಣ ಸಂತ್ರಸ್ಥರಿಗೆ ಬಿಸ್ಕತ್ ಎಸೆದ ವಿಚಾರವಾಗಿ ಕೆಳಿದ ಪ್ರಶ್ನೆಗೆ ಪ್ರತಿಕ್ರೀಯೆಯಿಸಿದ ಅವರು, ಸಚಿವ ರೇವಣ್ಣ ಸಂತ್ರಸ್ತರಿಗೆ ಸಹಾಯ ಮಾಡಲು ಕಾಳಜಿಯಿಂದ ತೆರಳಿದ್ದರು. ಆದರೆ ಬಿಸ್ಕತ್ ಕೊಡುವ ಬದಲಾಗಿ ಎಸೆದಿದ್ದ ವಿಷಯವನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಿಯೋಬ್ಬನಿಂದ ಚಪ್ಪಲಿ ಹಾಕಿಸಿಕೊಳ್ಳುತ್ತಿರುವ ವಿಷಯಕ್ಕೆ ಉತ್ತರಿಸಿದ ಅವರು, ಸಿದ್ದರಾಮಯ್ಯನವರು ಚಪ್ಪಲಿ ತೊಡಿಸುವಂತೆ ಯಾರಿಗೂ ಆದೇಶ ಮಾಡಿಲ್ಲ ಇದನ್ನು ರಂಪ ಮಾಡುವ ವಿಷಯವಲ್ಲ ಎಂದು ಸಮರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಅಮರೇಗೌಡ ಬಯ್ಯಾಪೂರ ಇದ್ದರು.

loading...