ಸದ್ಭಾವನೆಯೊಂದಿಗೆ ಸುಂದರ ಜೀವನ ರೂಪಿಸಿಕೊಳ್ಳಿ: ಸಿದ್ಧೆÃಶ್ವರ ಶ್ರಿÃಗಳು

0
5
loading...

 

ವಿಜಯಪÅರ: ಸದ್ವಿಚಾರ, ಸದ್ಭಾವನೆಯೊಂದಿಗೆ ಸುಂದರ ಜೀವನ ರೂಪಿಸಿಕೊಳ್ಳಬೇಕು ಎಂದು ಜ್ಞಾನಯೋಗಾಶ್ರಮದ ಸಿದ್ಧೆÃಶ್ವರ ಶ್ರಿÃಗಳು ಹೇಳಿದರು.
ನಗರದ ಅಲ್ ಅಮೀನ್ ವೈದ್ಯಕೀಯ ಕಾಲೇಜು ಎದುರು ಅಥಣಿ ರಸ್ತೆಯ ಉತ್ತರ ಭಾಗದಲ್ಲಿರುವ ನೀಲಕಂಠೇಶ್ವರ ಬಡಾವಣೆಯಲ್ಲಿ ಕುರುಹಿನಶೆಟ್ಟಿ ಸಮಾಜ ವತಿಯಿಂದ ನಿರ್ಮಿಸಿರುವ ಶ್ರಿÃ ಗುರು ನೀಲಕಂಠೇಶ್ವರ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.

ನಾವು ನೇಯ್ದ ಬಟ್ಟೆಯಲ್ಲಿ ಒಂದು ಎಳೆ ಕಡಿಮೆಯಾದರೂ ಅದರ ಬೆಲೆ ಕಡಿಮೆಯಾಗುತ್ತದೆ. ಬೆಲೆ ಕಡಿಮೆಯಾಗದಂತೆ ಉತ್ತಮ ಬಟ್ಟೆ ನೇಯ್ದರೆ ಅದು ದೇವರಿಗೆ ಅರ್ಪಿತ ಎಂದು ವಚನಕಾರ ಶಿವದಾಸಿಮಯ್ಯನವರು ಹೇಳಿದ್ದಾರೆ. ನಮ್ಮಲ್ಲಿಯ ವಿಚಾರ ಹಾಗೂ ಭಾವಗಳು ಕೆಟ್ಟರೆ ನಮ್ಮ ಬದುಕಿನ ಬೆಲೆಯೂ ಕಡಿಮೆಯಾಗುತ್ತದೆ. ಎರಡನ್ನು ಶುದ್ಧವಾಗಿಟ್ಟುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ನಾವು ಮತ್ತೊಬ್ಬರ ಬಳಿ ಕೈಯೊಡ್ಡುವಂತರಾಗದೆ ನಾವೇ ಬೇರೆಯವರಿಗೆ ಕೊಡುವಷ್ಟರ ಮಟ್ಟಿಗೆ ಸಮಾಜವನ್ನು ಅಭಿವೃದ್ಧಿಪಡಿಸಬೇಕು ಎಂದರು.
ಸಮುದಾಯ ಭವನ ನಿರ್ಮಾಣ ಕಾರ್ಯವನ್ನು ಶ್ಲಾöಸಿದ ಶ್ರಿÃಗಳು, ಈ ಭವನ ಉತ್ತಮ ಕಾರ್ಯಗಳಿಗೆ ಬಳಕೆಯಾಗಬೇಕು. ಅದನ್ನು ಸ್ವಚ್ಛವಾಗಿಡುವ ಜತೆಗೆ ಅದರ ಸುತ್ತಮುತ್ತ ಹಸಿರು ವಾತಾವರಣ ನಿರ್ಮಿಸಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ ಕಾರ್ಯಗಳಿಂದ ಮಾತ್ರ ಸಮಾಜ ಸಂಘಟನೆ ಸಾಧ್ಯ ಎಂದ ಅವರು, ಸಮುದಾಯ ಭವನ ಅಭಿವೃದ್ಧಿಗೆ ೧೦ ಲಕ್ಷ ರೂ. ಅನುದಾನ ಒದಗಿಸುವ ಭರವಸೆ ನೀಡಿದರು.
ಅಶೋಕ ಟಕ್ಕಳಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯ ಭವನ ನಿರ್ಮಾಣಕ್ಕೆ ಶ್ರಮಿಸಿದ ಹಿರಿಯರನ್ನು, ಸಮಾಜದ ನಿವೃತ್ತ ಯೋಧರು, ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಉಪಾಧ್ಯಕ್ಷ ಈರಣ್ಣ ಶಹಾಪÅರ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮುಂಡಾಸ, ಹುಬ್ಬಳ್ಳಿಯ ನೀಲಕಂಠಮಠದ ಅಧ್ಯಕ್ಷ ಡಂಬಳ, ಹಿರಿಯರಾದ ಎಂ.ವಿ.ಹಂದಿಗನೂರ, ಡಾ.ವಿ.ಜಿ.ತೊರವಿ, ಸಿದ್ರಾಮಪ್ಪ ರಂಜಣಗಿ, ಎಸ್.ಎಂ. ಜಕನೂರ, ರವೀಂದ್ರ ಕರಭಂಟನಾಳ, ಎಸ್.ಎಸ್.ನಂದ್ಯಾಳ, ಸಿದ್ರಾಮಪ್ಪ ಹಿಪ್ಪರಗಿ, ಶ್ರಿÃಶೈಲ ದೇವೂರ, ಮಲ್ಲಿಕಾರ್ಜುನ ಕುರುಹಿನಶೆಟ್ಟಿ ಮತ್ತಿತರರು ಇದ್ದರು.

 

loading...