ಸಮಗ್ರ ಕರ್ನಾಟಕದ ಜೊತೆ ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೋರಾಟ

0
6
loading...

ಆಲಮಟ್ಟಿ: ಅಖಂಡ ಕರ್ನಾಟಕವಿದ್ದು, ಉತ್ತರಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ರಾಜಕಾರಣಿಗಳು ಪೂರಕವಾಗಿ ಸ್ಪಂದಿಸಬೇಕು, ಇಲ್ಲದಿದ್ದರೇ ಹೋರಾಟ ಖಂಡಿತ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಜುನಾಥ ಹಿರೇಮಠ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಇದೇ ಗುರುವಾರ ನಡೆಯುವ ಉತ್ತರಕರ್ನಾಟಕ ಪ್ರತ್ಯೇಕ ಹೋರಾಟಕ್ಕೆ ನಮ್ಮ ಸಂಘಟನೆಯ ಬೆಂಬಲವಿಲ್ಲ, ಆದರೆ ಉತ್ತರಕರ್ನಾಟಕ ಅಭಿವೃದ್ಧಿಗಾಗಿ ಮಾತ್ರ ನಮ್ಮ ಸಂಘಟನೆ ಬೆಂಬಲ ವ್ಯಕ್ತಪಡಿಸಲಿದೆ ಎಂದರು.
ಉತ್ತರಕರ್ನಾಟಕ, ದಕ್ಷಿಣ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಎಂಬ ಪ್ರತ್ಯೇಕ ನೀತಿ ಬೇಡ, ರಾಜಕಾರಣಿಗಳಾದವರು ಇಡೀ ರಾಜ್ಯವನ್ನು ಸಮಗ್ರ ದೃಷ್ಠಿಕೋನದಿಂದ ವಿಶಾಲ ಮನೋಭಾವದಿಂದ ನೋಡಬೇಕು ಎಂದರು.
ನಾನಾ ಇಲಾಖೆಯ ಕಚೇರಿಗಳು ಕೇವಲ ಬೆಂಗಳೂರಿಗೆ ಸೀಮಿತವಾಗಿವೆ, ಅವುಗಳನ್ನು ಕೆಲಸಕ್ಕೆ ಅನುಗುಣವಾಗಿ ಬೇರೆ ಬೇರೆ ಕಡೆ ಸ್ಥಳಾಂತರಗೊಳಿಸಬೇಕು, ಬೆಳಗಾವಿ ವಿಕಾಸ ಸೌಧದಲ್ಲಿಯೂ ಕೆಲ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂದು ಅವರು ಆಗ್ರಹಿಸಿದರು.
ಪರಿಸರಕ್ಕೆ ಪೂರಕವಾಗಿರುವ ಜವಳಿ ಉದ್ಯಮ ಸೇರಿದಂತೆ ನಾನಾ ಕೈಗಾರಿಕೆಗಳನ್ನು ಸ್ಥಾಪಿಸಿ, ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕು ಎಂದರು.
ಕರವೇ ಪದಾಧಿಕಾರಿಗಳಾದ ದೇವರಾಜ ಹಿರೇಮನಿ, ಮುತ್ತು ಕೂಡಗಿ ಇದ್ದರು.

loading...