ಸಮಾನತೆಯಿಂದ ಪ್ರಜಾಪ್ರಭುತ್ವ ಉಳಿವು: ಪ್ರೊ.ಬಿ.ಜಿ.ಪಾಟೀಲ

0
8
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಮಾನತೆ ಇದ್ದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಬಲ್ಲದು ಎಂದು ಎಸ್.ಎಸ್. ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಬಿ.ಜಿ.ಪಾಟೀಲ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ರಾಜನೀತಿಶಾಸ್ತç ವಿಭಾಗದಿಂದ ಆಯೋಜಿಸಿದ್ದ ‘ಏಕರೂಪ ನಾಗರಿಕ ಸಂಹಿತೆ’ ಕುರಿತು ಆಯೋಜಿಸಿದ್ದ ವಿಶೇಷ ಅತಿಥಿ ಉಪನ್ಯಾಸದಲ್ಲಿ ಅವರು ಮಾತನಾಡಿದರು, ಕಾನೂನಿನ ದೃಷ್ಠಿಯಲ್ಲಿ ಎಲ್ಲರೂ ಸರಿಸಮಾನರು, ಯಾವುದೇ ವ್ಯಕ್ತಿಯ ಜೀವ ಮತ್ತು ಸ್ವಾತಂತ್ರö್ಯಕ್ಕೆ ಧಕ್ಕೆಯಾಗಬಾರದು. ಭಾರತ ವೈವಿಧ್ಯತೆ ಹಾಗೂ ಏಕತೆಯನ್ನು ಹೊಂದಿದ ರಾಷ್ಟç. ಆದರೆ ಈ ವೈವಿಧ್ಯತೆಯಲ್ಲಿ ಕೆಲವು ಸೂಕ್ಷö್ಮ ವಿಚಾರಗಳಿಂದ ಸಮಾಜದಲ್ಲಿ ಸಹಜವಾಗಿ ಕಾನೂನಿನ ಉಲ್ಲಂಘನೆಯಾಗುತ್ತಿದೆ.
ರಾಜ್ಯನೀತಿಶಾಸ್ತç ವಿಭಾಗದ ಮುಖ್ಯಸ್ಥ ಡಾ.ಎ.ಎಸ್.ಆನಿಕಿವಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ.ಮಠಪತಿ ಸಮಾಜಶಾಸ್ತç ವಿಭಾಗದ ಮುಖ್ಯಸ್ಥ ಆರತಿ ಯಾರ್ಡಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಸಿದ್ದನಗೌಡ ಪಾಟೀಲ ಉಪಸ್ಥಿತರಿದ್ದರು.
ಪ್ರಸಾದ ಚಿನ್ನಪ್ಪಗೋಳ ಪ್ರಾರ್ಥಿಸಿದರು. ಪ್ರೊ.ಸುನಿತ ಮೂಡಲಗಿ ವಂದಿಸಿದರು. ಅಕ್ಷತಾ ಹಿರೇಮಠ ನಿರೂಪಿಸಿದರು.

loading...