ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಲಿ: ಶಾಸಕ ಬೊಮ್ಮಾಯಿ

0
13
loading...

ಕನ್ನಡಮ್ಮ ಸುದ್ದಿ-ಬಂಕಾಪುರ: ಸಮೀಪದ ಮುನವಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ಕೊಠಡಿಯನ್ನು ಶಾಸಕ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿ ಮೊಳಗಬೇಕಿದೆ. ಆ ನಿಟ್ಟಿನಲ್ಲಿ ತಾಲೂಕಿಮಾದ್ಯಂತ ಎಲ್ಲ ಶಾಲಾ ಕಾಲೇಜುಗಳನ್ನು ಅಭಿವೃದ್ಧಿ ಪಡೆಸಲಾಗುತ್ತಿದೆ. ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲಾಗುತ್ತಿದ್ದು ಸರಕಾರಿ ಶಾಲೆಯಲ್ಲೂ ಕೂಡಾ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಪಾಲಕರು ಹಾಗು ಮಕ್ಕಳು ಪಡೆಯಬೆಕೇಂದು ಹೇಳಿದರು.ಈ ಹಿಂದೆ ಹೆಚ್ಚು ಭೂಮಿ ಇದ್ದವನು ಶ್ರೀಮಂತ ಎಂದೆನೆಸಿಕೊಂಡರೆ ನಂತರದ ದಿನಗಳಲ್ಲಿ ಆಸ್ತಿ ಹಣ ಇದ್ದವರು ಮಾತ್ರ ಈ ದೇಶವನ್ನು ಆಳುವಂತಾಗಿತ್ತು. ಆದರೆ ಇಗ ಬುದ್ಧಿ ಜ್ಞಾನ ಹೊಂದಿದವರು ಮಾತ್ರ ಈ ದೇಶವನ್ನು ಆಳಬಲ್ಲರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ ಬೊಮ್ಮಾಯಿಯವರನ್ನು ಶಾಲೆಯವತಿಯಿಂದ ಸನ್ಮಾನಿಸಲಾಯಿತು. ತಾ.ಪ.ಸದಸ್ಯ ವಿಶ್ವನಾಥ ಹರವಿ, ಯಲ್ಲಪ್ಪ ನರಗುಂದ, ಗ್ರಾ.ಪ.ಅದ್ಯಕ್ಷ ಉಮೇಶ ಅಂಗಡಿ, ಮುಖ್ಯ ಶಿಕ್ಷಕ ಎಫ್.ಸಿ.ಕಾಡಪ್ಪಗೌಡ್ರ, ಎಸ್.ಎನ್.ಮುಗಳಿ, ಎ.ಎಫ್.ಹೊಸಮನಿ, ಮುಖಂಡರಾದ ಗದಿಗಯ್ಯ ಹಿರೇಮಠ, ಮಂಜುನಾಥ ಅಂಗಡಿ, ಬಾಪುಗೌಡ್ರ ಪಾಟೀಲ, ಸತೀಷ ನಾಗನೂರ, ಶಿವಾನಂದ ಸವಣೂರ ಇದ್ದರು.

loading...