ಸಹಕಾರ ಕ್ಷೇತ್ರ ಬೆಳೆದರೆ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ

0
8
loading...

ವಿಜಯಪುರ: ಸಹಕಾರ ಕ್ಷೇತ್ರ ಬೆಳೆದರೆ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ರಾಜ್ಯ ನಿರ್ದೇಶಕ ಸುಭಾಸಗೌಡ ಪಾಟೀಲ ಮನಗೂಳಿ ಹೇಳಿದರು.
ಗುರುವಾರ ನಗರದ ಬಗಳಾಮುಖಿದೇವಿ ಮಹಿಳಾ ಪತ್ತಿನ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದ ನೂತನ ಗಣಕಯಂತ್ರ ಕಛೇರಿಯ ಉದ್ಘಾಟನೆ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಂದು ಸಹಕಾರಿ ಕ್ಷೇತ್ರವು ಸ್ವಯ ಉದ್ಯೋಗ ಹಮ್ಮಿಕೊಳ್ಳಲು ತುಂಬಾ ಸಹಕಾರಿಯಾಗಿದೆ. ನಿರುದ್ಯೋಗ ಯುವಕರಿಗೆ ಉದ್ಯೋಗಕ್ಕೆ ಆರ್ಥಿಕ ನೇರವು ನೀಡುತ್ತಿದೆ. ಇದರಿಂದ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣಾ ಮಾಡಲು ಸಹಕಾರಿ ಕ್ಷೇತ್ರ ಮುಂದಾಗಿದೆ. ಸಹಕಾರ ಕ್ಷೇತ್ರವನ್ನು ಬೆಳೆಸಲು ಸಾರ್ವಜನಿಕರು ಮುಂದೆ ಬರಬೇಕು ಎಂದು ಹೇಳಿದರು.

ಬೀಳಗಿ ಪಟ್ಟಣ ಸಹಕಾರ ಬ್ಯಾಂಕ ನಿರ್ಧೇಶಕ ಚನ್ನಬಸ್ಸಯ್ಯ ಬಸವನ ಬಾಗೇವಾಡಿ, ಸುನೀಲ, ಶ್ರೀಶೈಲಯ್ಯ ವೀರಕ್ತಮಠ, ಶೋಭಾ ನಾಗೂರು, ಸಿಂಡಿಕೇಟ್‌ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ವೇಣು ಚನ್ನಾಬಯಿನಾ, ಬಗಳಾಮುಖಿದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಸಹ ವ್ಯವಸ್ಥಾಪಕಿ ರಾಜೆಶ್ರೀ ಸುರಗಿಮಠ, ಸಂಘದ ಮುಖ್ಯ ಕಾರ್ಯನಿರ್ವಾಕ ಸುರೇಶ ಎಸ್‌ ಬಡಗೇರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

loading...