ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

0
6
loading...

ನರಗುಂದ: ಸ್ವಾತಂತ್ರೋತ್ಸವದ ಪ್ರಯುಕ್ತ ಪಟ್ಟಣದ ಮಾಜಿ ಸೈನಿಕರ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಮಾಜಿ ಸೈನಿಕರ ಮಕ್ಕಳಿಗೆ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೈರನಹಟ್ಟಿಯ ಶಾಂತಲಿಂಗ ಸ್ವಾಮಿಗಳು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಅಶೋಕ ಮೊರಬ, ಬಸವರಾಜ ನೇಸರಗಿ, ಶಿವಾನಂದ ಚಂದನ್ನವರ, ವ್ಹಿ,ಎಸ್,ಡಾಣೆ, ಪರ್ವತಗೌಡ ಮುದ್ದನಗೌಡ್ರ, ಪಂಚಯ್ಯಾ ವಿರಕ್ತಮಠ, ಲಾಲಸಾಬ ಯಲಿಗಾರ, ಮಲ್ಲಪ್ಪ ಕನ್ಯಾಳ, ವ್ಹಿ,ಎಸ್, ಸಾಲಿಗೌಡ್ರ, ಆರ್.ಎಚ್. ವಾಸನ ಇದ್ದರು.

loading...