ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಜೀವನಕ್ಕೆ ಮಾರಕ: ಮಾಜಿ ಸಚಿವ ಲಮಾಣಿ

0
11
loading...

ಕನ್ನಡಮ್ಮ ಸುದ್ದಿ-ರಾಣೇಬೆನ್ನೂರು: ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ತಾವೇ ನಿಯಂತ್ರಣ ಹಾಕಿಕೊಳ್ಳಬೇಕು ಎಂದು ಮಾಜಿ ಸಚಿವ ರುದ್ರಪ್ಪ ಎಮ್ ಲಮಾಣಿ ಹೇಳಿದರು.
ನಗರದ ಬಿಎಜೆಎಸ್‍ಎಸ್ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಯದಲ್ಲಿ 2018-19ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿ ಒಕ್ಕೂಟ, ಎನ್‍ಎಸ್‍ಎಸ್ ಚಟುವಟಿಕೆ ಮತ್ತು ಯುವ ರೆಡ್ ಕ್ರಾಸ್ ಘಟಕ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳÀಲ್ಲಿ ಅಥವಾ ಯಾವುದೇ ವಿಷಯವಾಗಲಿ ಸ್ವಯಂ ಪ್ರೇರಕರಾಗಿ ಪರಿಶೀಲಿಸಿ ಮತ್ತು ಪರಿಶೀಲಿಸದೆ ಇನ್ನೊಬ್ಬರಿಗೆ ಸಂದೇಶ ಕಳುಹಿಸಬೇಡಿ. ಇದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.
ಡಾ. ಆರ್.ಎಮ್ ಕುಬೇರಪ್ಪ ಮಾತನಾಡಿ, ಶಿಕ್ಷಣದ ಹಸಿವು ವಿದ್ಯಾರ್ಥಿಗಳಲ್ಲಿ ಹೆಚ್ಚಾಗಬೇಕು, ಜ್ಞಾನ ತುಂಬಿದ ಕೊಡಗಳಾಗಬೇಕು. ಶಿಕ್ಷಣ ಅಂಕಗಳಿಕೆಯ ಉದ್ದೇಶವಾಗದೆ ಸೃಜನಾತ್ಮಕತೆ ಅಳವಡಿಸಿಕೊಂಡು ಕೌಶಲರಾದಾಗ ಮಾತ್ರ ಶಿಕ್ಷಣಕ್ಕೆ ಅರ್ಥ ಬರುತ್ತದೆ ಎಂದರು.
ವ್ಯಂಗ್ಯ ಚಿತ್ರಕಾರ ನಾಮದೇವ ಕಾಗದಗಾರ ಮಾತನಾಡಿ, ವಿದ್ಯಾರ್ಥಿ ಹಂತದಲ್ಲಿಯೇ ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳುವ ಮೂಲಕ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ರೂಪಗೊಳ್ಳಬೇಕಾಗಿದೆ ಎಂದರು.
ಹೆಚ್.ಎ ಭಿಕ್ಷಾವರ್ತಿಮಠ ಮಾತನಾಡಿದರು.
ಪ್ರಾಂಶುಪಾಲ ಪ್ರಕಾಶ ಬಸಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಮೃತ್ಯುಂಜಯ ಎಂ, ಶ್ರೀಕಾಂತ ಕುಂಚೂರು, ಪ್ರೊ. ಕಾಂತೇಶ ಅಂಬಿಗೇರ, ಎಂ.ಡಿ. ಹೊನ್ನಮ್ಮನವರ, ಪ್ರೊ. ರವೀಂದ್ರಕುಮಾರ ಬಣಕಾರ, ಪ್ರೊ. ಬೀರಪ್ಪ ಜೆ ಕೆ, ಪ್ರೊ. ಎಸ್.ಆರ್ ಚಿಕ್ಕಳ್ಳವರ, ಸುಮನ್ ಎಸ್.ಬಿ, ಕುಮಾರ ಗೋವಿಂದ, ಆಡಳಿತ ಮಂಡಳಿಯ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.
ಪ್ರೊ. ಕೆ.ಕೆ ಹಾವಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರೊ. ಭೀಮಾರತಿ ತೀರ್ಥ ಸಂಘಡಿಗರು ಪ್ರಾರ್ಥಿಸಿದರು. ಪ್ರೊ. ಗಾಯತ್ರಿ ಪಿ.ಎಸ್ ಸ್ವಾಗತಿಸಿದರು, ಕುಮಾರ ಭೀರಪ್ಪ ಮತ್ತು ಸಂದೀಪ ನಿರೂಪಿಸಿದರು. ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿ ಕುಮಾರಗೋವಿಂದ ದ್ಯಾವನಕಟ್ಟಿ ವಂದಿಸಿದರು.

loading...