ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

0
7
loading...

ಹುನಗುಂದ-ಸಾಲಬಾಧೆಯನ್ನು ತಾಳಲಾರದೆ ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಮೀಪದ ಬಿಂಜವಾಡಗಿ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ ಸಕ್ರಪ್ಪ ಹುಬ್ಬಳ್ಳಿ (೨೮) ಮೃತ ರೈತ.ಮೃತರು ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ೫೦ ಸಾವಿರ ಸಾಲವನ್ನು ತಗೆದುಕೊಂಡಿದ್ದ ಇನ್ನು ಖಾಸಗಿಯಾಗಿ ೨ ಲಕ್ಷಕ್ಕಿಂತ ಹೆಚ್ಚು ಸಾಲ ಮಾಡಿದ್ದರು. ಇವರ ಹೆಸರನಲ್ಲಿ ಒಟ್ಟು ನಾಲ್ಕು ಎಕರೆ ಜಮೀನ ಹೊಂದಿದ್ದು.ಮಾಡಿದ ಸಾಲವನ್ನು ತೀರಿಸಲು ಎರಡು ಎಕರೆ ಭೂಮಿಯನ್ನೆÃ ಮಾರಾಟ ಮಾಡಿದ್ದ. ಆದರೂ ಮಾಡಿದ ಸಂಪೂರ್ಣ ಸಾಲವನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಮನನೊಂದು ಶುಕ್ರವಾರ ಸಾಯಂಕಾಲ ೪ ಗಂಟೆಗೆ ನೇಣಿಗೆ ಶರಣಾಗಿದ್ದಾನೆ. ಹುನಗುಂದ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

loading...