ಸಾಹಿತ್ಯ ರಚನೆ ಸೃಜನಶೀಲ ವ್ಯಕ್ತಿಯಿಂದ ಮಾತ್ರ ಸಾಧ್ಯ : ಕೋಟಿ

0
7
ಕನ್ನಡಮ್ಮ ಸುದ್ದಿ-ಹುನಗುಂದ: ಸಾಹಿತ್ಯ ರಚನೆ ಸೃಜನಶೀಲ ಮತ್ತು ರಚನಾತ್ಮಕ ವ್ಯಕ್ತಿಯಿಂದ ಮಾತ್ರ ಸಾಧ್ಯ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸಾಹಿತ್ಯ ಪ್ರತಿಭೆ ಇದ್ದೆ ಇರುತ್ತಿದೆ ಅದನ್ನು ಹೊರ ಹಾಕಲು ನಿರಂತರ ಓದು ಮತ್ತು ಬರವಣೆಗೆಯಿಂದ ಮಾತ್ರ ಸಾಧ್ಯ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ರಾಜ್ಯ ಉಪಾಧ್ಯಕ್ಷ ಎಸ್.ಜಿ.ಕೋಟಿ ಹೇಳಿದರು.
ಅವರು ನಗರದ ವ್ಹಿ.ಎಂ.ಎಸ್.ಆರ್.ವ್ಹಿ.ಮಹಾವಿದ್ಯಾಲಯ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಲೂಕ ಘಟಕ ಸಹಯೋಗದಲ್ಲಿ ನಡೆದ ಉಪನ್ಯಾಸಕ ಜಗದೀಶ ಹಾದಿಮನಿ ವಿರಚಿತ ಮುಗ್ದೆ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿ ಲೋಕಾರ್ಪಣ ಮಾಡಿ ಮಾತನಾಡುತ್ತ ಸಾಹಿತ್ಯ ರಚನೆ ಕಷ್ಟ ಸಾಧ್ಯ ಅದು ಕವಿಯ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಸಾಹಿತ್ಯ ರೂಪವನ್ನು ಕೊಟ್ಟು ಓದುಗರ ಕೈ ತಲುಪಿಸುವುದು ಬಹಳ ಕಷ್ಟವಾದ ಕೆಲಸವಾಗಿದೆ ಅದರಲ್ಲಿ ಮೊಟ್ಟ ಮೊದಲ ಕೃತಿಯನ್ನು ಹೊರ ತರಲು ಶತ ಪ್ರಯತ್ನವನ್ನು ಮಾಡಬೇಕಾಗುವುದು. ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವಾರು ಕನ್ನಡ ಭಾಷೆಯ ಉಳುವಿಗೆ ಸಂಘ ಸಂಸ್ಥೆಗಳು ಹಲವು ಪ್ರಕಾರದ ಸಾಹಿತ್ಯ ರಾಶಿಗಳನ್ನು ಓದುಗರಿಗೆ ನೀಡಲು ಶ್ರಮಿಸುತ್ತಿವೆ. ಬಾಗಲಕೋಟಿ ಜಿಲ್ಲೆಯಲ್ಲಿ ಸಾಹಿತ್ಯಕ್ಕೆ ಹಚ್ಚಿನ ಪ್ರಾದನ್ಯತೆ ನೀಡಿದ ಜಿಲ್ಲೆಯಾಗಿದೆ. ಸಾಹಿತ್ಯದ ಬೆಳವಣೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ೨೦ ಜಿಲ್ಲೆಯಲ್ಲಿ ಕ್ರಿÃಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದರು.

loading...

ಪ್ರೊÃ.ಎಸ್.ಎಸ್.ಮುಡಪಲದಿನ್ನಿ ಕೃತಿ ಪರಿಚಯ ಮಾಡಿ ಮಾತನಾಡುತ್ತ ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿ ಕವನದ ಕೊನೆಗೆ ಗುರು ನಿಂಧನೆ ಸಲ್ಲದು ಎನ್ನು ಮಾತು ನಿಜಕ್ಕೂ ಅರ್ಥಪೂರ್ಣವಾದುದು. ಇತ್ತಿÃಚಗೆ ಗುರು ಶಿಷ್ಯರ ಸಂಬಂಧ ಹಳಸುತ್ತಿದೆ. ಇದನ್ನು ಗಟ್ಟಿಗೊಳ್ಳಿಸಲು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಏನೆಲ್ಲಾ ಕ್ರಮ ಕೈಕೊಳ್ಳಬೇಕು ಎನ್ನುವ ವಿಚಾರ ಮಾಡುವುದು ಇಂದು ಅವಶ್ಯವಾಗಿದೆ ಆದರ್ಶ ಶಿಕ್ಷಕರಿಗೆ ಸದಾಕಾಲ ಗೌರವ ಇದ್ದೆÃ ಇದೆ ಎಂದರು.
ಕೃಷಿ ತಜ್ಞ ಮತ್ತು ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಮಲ್ಲಣ್ಣ ನಾಗರಾಳ ಮತ್ತು ಪ್ರಾಚಾರ್ಯ ಬಿ.ಎಂ ಚಲವಾದಿ,ಲೇಖಕ ಮತ್ತು ಉಪನ್ಯಾಸಕ ಜಗದೀಶ ಹಾದಿಮನಿಯವರು ಮುಗ್ದೆ ಕವನ ಸಂಕಲನದ ಬಗ್ಗೆ ಮಾತನಾಡಿದರು.ಅಧ್ಯಕ್ಷತೆಯನ್ನು ಬಿ.ಎಂ.ಹೊಕ್ರಾಣಿ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಪ್ರೊÃ.ಬಿ.ಬಿ.ಕಡ್ಲಿ,ಡಾ.ನಾಗರಾಜ ನಾಡಗೌಡ್ರ, ಸಂಗಣ್ಣ ಗದ್ದಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯ ಸಿದ್ದಲಿಂಗಪ್ಪ ಬೀಳಗಿ ಇನ್ನು ಅನೇಕರು ಇದ್ದರು.

ಪ್ರೊÃ.ಎಸ್.ಆರ್, ಗೋಲಗುಂಡ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಾಧ್ಯಾಪಕ ಎ.ಎಂ.ಗೌಡರ ಸ್ವಾಗತಿಸಿದರ, ಎಂ.ಡಿ.ಚಿತ್ತರಗಿ ನಿರೂಪಿಸಿದರು. ಆಯ್.ಎಸ್.ದ್ಯಾಮವ್ವನಗುಡಿ ವಂದಿಸಿದರು.

loading...