ಸಿಎಂಸಿ ಚುನಾವಣೆ : ಹೊಸ ಮುಖಗಳಿಗೆ ಮಣೆ ಹಾಕಿದ ಬಿಜೆಪಿ

0
8
loading...

ಶಂಕರಲಿಂಗ ದೇಸಾಯಿ
ಬಾಗಲಕೋಟೆ: ಪ್ರಸಕ್ತ ಹಾಗೂ ಮುಂದಿನ ವರ್ಷ ಚುನಾವಣೆಯ ವರ್ಷಗಳೆಂದರೆ ತಪ್ಪಾಗಲಿಕ್ಕಿಲ್ಲ. ವಿಧಾನಸಭೆ ಚುನಾವಣೆಯ ಕಾವು ತಣ್ಣಗಾಗುತ್ತಿದ್ದಂತೆ ಸ್ಥಳೀಯ ಚುನಾವಣೆಗಳು ಬಂದು ರಾಜಕೀಯಕ್ಕೆ ಹೊಸ ರಂಗು ತಂದುಕೊಟ್ಟಿವೆ.

ಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿರುವ ಸ್ಥಳೀಯ ಚುಣಾವಣೆ ದಿನದಿಂದ ದಿನಕ್ಕೆ ರಂಗೇರ ತೊಡಗಿದೆ. ಜಿಲ್ಲೆಯಾದ್ಯಂತ ನಾಮಪತ್ರ ಸಲ್ಲಿಕೆ ಚುರುಕುಗೊಂಡಂತೆ ಟಿಕೇಟ ವಂಚಿತರ ಆಕ್ರೊÃಶ, ಬಂಡಾಯದ ಬಿಸಿ ಈ ಎಲ್ಲವುಗಳನ್ನು ನಿಭಾಯಿಸುವಲ್ಲಿ ನಾಯಕರು ಪರದಾಡಿದ ಪ್ರಸಂಗ ಕಂಡುಬಂದಿತು. ಕಳೆದ ಬಾರಿ ಬಾಗಲಕೋಟ ನಗರಸಭೆಗೆ ೩೧ ಸದಸ್ಯರಿದ್ದರು. ಈ ಬಾರಿ ನಾಲ್ಕು ಸ್ಥಾನಗಳು ಹೊಸದಾಗಿ ಸೇರ್ಪಡೆಗೊಂಡಿದ್ದರಿಂದ ಸದಸ್ಯರ ಸಂಖ್ಯೆ ೩೫ಕ್ಕೆ ಏರಿದೆ.
ತನ್ನದೇಯಾದ ತತ್ವ ಸಿದ್ದಾಂತಗಳಿಗೆ ಬದ್ದವಾಗಿರುವ ಬಿಜೆಪಿ ಪಕ್ಷ ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವರಿಗೂ ಅವಕಾಶ ದೊರಕಿಸಿ ಕೊಟ್ಟು ಆಡಿದಂತೆ ನಡೆದಿದೆ. ಅದಕ್ಕೆ ಪೂರಕ ಎಂಬಂತೆ ಪಕ್ಷದಲ್ಲಿ ನಿಷ್ಠರಾಗಿ ದುಡಿದು ನಾಮನಿರ್ದೇಶಕ ಶಾಸಕರನ್ನಾಗಿ ನಾರಾಯಸಾ ಭಾಂಡಗೆ ಅವರನ್ನು ಆಯ್ಕೆ ಮಾಡಿ ಸಾಮಾನ್ಯ ಕಾರ್ಯಕರ್ತನೊಬ್ಬ ವಿಧಾನ ಪರಿಷತ್ ಸದಸ್ಯನಾಗಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವಂತೆ ಮಾಡಿತು.

ಈ ಬಾರಿ ಕೇವಲ ಒಬ್ಬರನ್ನು ಹೊರತುಪಡಿಸಿ ಉಳಿದ ೩೪ ಸ್ಥಾನಗಳಿಗೂ ಹೊಸಬರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆÃಸ್ ಕೂಡಾ ಇದಕ್ಕೆ ಹೊರತಾಗಿಲ್ಲ. ಅದು ಕೂಡಾ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಕಳೆದ ಬಾರಿ ಸದಸ್ಯರಾಗಿದ್ದವರಲ್ಲಿ ಕೇವಲ ೪ ಜನರನ್ನು ಮರಳಿ ಚುನಾವಣೆಗೆ ನಿಲ್ಲಿಸಿ ಉಳಿದ ೩೧ ಜನ ಹೊಸಬರಿಗೆ ಅವಕಾಶ ಕಲ್ಪಿಸಿದೆ. ಕಳೆದ ಬಾರಿ ಚುನಾವಣೆ ಅವಲೋಕಿಸಿದಾಗ ಜಿಲ್ಲೆಯಾದ್ಯಂತ ಸ್ಥಳೀಯ ಚುನಾವಣೆಗಳಿಗೆ ಆಕಾಂಕ್ಷಿ ಅಭ್ಯರ್ಥಿಗಳು ಹೆಚ್ಚಾಗಿದ್ದು, ನಾಮಪತ್ರ ಸುರಿಮಳೆ ಜರುಗಿದೆ.
ಹುನಗುಂದ ಪುರಸಭೆಗೆ ೨೩ ವಾರ್ಡಗಳಿಗೆ ೯೬ ನಾಮಪತ್ರ ಸಲ್ಲಿಕೆಯಾಗಿದ್ದು, ಜಮಖಂಡಿ ನಗರಸಭೆಗೆ ೨೩೬ ನಾಮಪತ್ರ ಸಲ್ಲಿಕೆಯಾಗಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಗುಳೇದಗುಟ್ಟ ಪುರಸಭೆಗೆ ೮೪ ನಾಮಪತ್ರ ಸಲ್ಲಿಕೆಯಾಗಿವೆ. ಬಾಗಲಕೋಟ ಬಿಜೆಪಿ ಅಭ್ಯರ್ಥಿಗಳಾಗಿ ವಾ.೧ ಸರಸ್ವತಿ ಕುರಬರ, ೨ ಸುರೇಶ ಲಮಾಣಿ, ೩ ಶಿವಲೀಲಾ ಪಟ್ಟಣಶೆಟ್ಟಿ, ೪ ರೇಖಾ ಕಲಬುರ್ಗಿ, ೫ ಸಾಗರ ಬಂಡಿ, ೬ ಬಸವರಾಜ ತಪಶೆಟ್ಟಿ, ೭ ಶಶಿಕಲಾ ಮಜ್ಜಗಿ, ೮ ರತ್ನಾ ಕೆರೂರ, ೯ ಪ್ರೆÃಮಾ ಅಂಬಿಗೇರ, ೧೦ ಹಿರಾಲಾಲ ಗೌಡಾ, ೧೧ ರಮೇಶ ಕೋಟಿ, ೧೨ ಪ್ರದೀಪ ರಾಯ್ಕರ, ೧೩ ಶ್ರಿÃನಾಥ ಸಜ್ಜನ, ೧೪ ಸ್ಮಿತಾ ಪವಾರ, ೧೫ ಅಂiÀÄ್ಯಪ್ಪ ವಾಲ್ಮಿಕಿ, ೧೬ ಅನಿತಾ ಸರೋದೆ, ೧೭ ಹರಿ ಟಿಕಾರೆ, ೧೮ ಜ್ಯೊÃತಿ ಭಜಂತ್ರಿ, ೧೯ ವೀರಪ್ಪ ಶರಗಣ್ಣವರ, ೨೦ ನಾಗರತ್ನಾ ಹೆಬ್ಬಳ್ಳಿ, ೨೧ ಬಸವರಾಜ ಪಾತ್ರೊÃಟ, ೨೨ ಸೀಮಾ ನದಾಪ್, ೨೩ ಅಂಬಾಜಿ ಜೋಶಿ, ೨೪ ಶಿವಪ್ಪ ಜಾಲಗಾರ, ೨೫ ಬಸವರಾಜ ಅವರಾದಿ, ೨೬ ರವಿ ದಾಮಜಿ, ೨೭ ಶಾಂತಾ ಹನಮಕ್ಕನವರ, ೨೮ ಪ್ರಕಾಶ ಹಂಡಿ, ೨೯ ಶಿವು ಬಳ್ಳಾರಿ, ೩೦ ಚನ್ನಯ್ಯ ಹಿರೇಮಠ, ೩೧ ಸವಿತಾ ಲೆಂಕಣ್ಣವರ, ೩೨ ಭುವನೇಶ್ವರಿ ಕುಪ್ಪಸ್ತ, ೩೩ ಸೋಭಾ ವೆಂಕಟೇಶರಾವ, ೩೪ ಪಾರ್ವತೆವ್ವ ಅಕ್ಕಿಮರಡಿ, ೩೫ ದ್ಯಾಮಪ್ಪ ಸುಳಿಕೇರಿ.

loading...