ಸಿಎಂ ಕುಮಾರಸ್ವಾಮಿ ಬಾಡಿಗೆ ಮನೆ ಮಾರಾಟಕ್ಕೆ?

0
3
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ನಗರದಲ್ಲಿನ ಮಾಯ್ಕರ ಬಡಾವಣೆಯಲ್ಲಿರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಾಡಿಗೆ ಮನೆ ಮಾರಾಟಕ್ಕಿದೆ ಎಂದು ತಿಳಿದು ಬಂದಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ಸಿಎಂ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು. ಆದರೇ ಇದೀಗ ಅದೇ ಮನೆಯನ್ನು ಮನೆ ಮಾಲೀಕರು ಮಾರಾಟಕ್ಕಿಟ್ಟಿದ್ದಾರೆ. ಇದು ಸಿಎಂ ಅವರನ್ನು ಮುಜುಗರಕ್ಕೀಡು ಮಾಡಿದೆ.
ಕುಮಾರಸ್ವಾಮಿ ಸಿಎಂ ಆದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳಿಗೆ ಸಿಲುಕುತ್ತಲೇ ಇದ್ದಾರೆ. ಅಧಿಕಾರ ವಹಿಸಿಕೊಂಡ ಹೊಸತರಲ್ಲಿ ಸಾಲ ಮನ್ನಾ ವಿಚಾರವಾಗಿ ಮುಜುಗರಕ್ಕೀಡಾಗಿದ್ದ ಸಿಎಂ, ನಂತರದಲ್ಲಿ ಉತ್ತರ ಕರ್ನಾಟಕವನ್ನ ಪ್ರತ್ಯೇಕ ರಾಜ್ಯ ವಿವಾದಕ್ಕೆ ಸಿಲುಕಿದ್ದಾರೆ. ಇದೆಲ್ಲದರ ನಡುವೆ ಜೆಡಿಎಸ್ ಮತ್ತು ಕೈ ನಾಯಕರ ನಡುವಿನ ಮುಸುಕಿನ ಗುದ್ದಾಟ. ಹೀಗಿರುವಾಗ ಹುಬ್ಬಳ್ಳಿಯ ಭೈರಿದೇವರ ಕೊಪ್ಪದ ಮಾಯಕಾರ ಕಾಲೋನಿಯಲ್ಲಿರುವ ಕುಮಾರಸ್ವಾಮಿ ಅವರ “ಏಕದಂತ” ಬಾಡಿಗೆ ನಿವಾಸವನ್ನು ಮನೆ ಮಾಲೀಕ ಮಾರಲು ಮುಂದಾಗಿದ್ದಾರೇ .ಉತ್ತರ ಕರ್ನಾಟಕ ಅಭಿವೃದ್ಧಿ ಮಾಡತ್ತೀನಿ ಅಂತ ಮನೆ ಮಾಡಿದ್ದರು ಆದರೆ ಇದು ಕೈ ತಪ್ಪಿ ಹೋಗುತ್ತಿದೆ. ಉತ್ತರ ಕರ್ನಾಟಕವನ್ನ ಅಭಿವೃದ್ಧಿ ಮಾಡುತ್ತೇನೆ, ಪಕ್ಷ ಸಂಘಟನೆ ಮಾಡುತ್ತೇನೆ ಅಂತ ಹೇಳಿಕೊಂಡಿದ್ದರು. ಆದರೆ ಮೂರು ನಾಲ್ಕು ದಿನ ಮನೆಯಲ್ಲಿ ಉಳಿದುಕೊಂಡಿದ್ದು ಬಿಟ್ಟರೆ ಇತ್ತ ಹೆಚ್ಚಾಗಿ ಬಂದಿರಲಿಲ್ಲ.
ಮುಖ್ಯಮಂತ್ರಿಗಳು ವಾಸವಿದ್ದ ಬಾಡಿಗೆ ಮನೆಯನ್ನು ಮಾಲೀಕ ಸುರೇಶ ರಾಯರೆಡ್ಡಿ ಮಾರಾಟ ಮಾಡಲು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ. 10 ಸಾವಿರ ಚದರಡಿಯ 4 ಬೆಡ್ ರೂಮ್, ಪೂಜಾ ಕೋಣೆ, ಜಿಮ್ ಸೇರಿದಂತೆ ಸಕಲ ಸೌಕರ್ಯಗಳಿರುವ ಸುಸಜ್ಜಿತ ಮನೆ ಹಾಗೂ ಅವರ ಖಾಸಗಿ ಕಚೇರಿ ಈಗ ಮಾರಾಟಕ್ಕಿದೆ ಅಂತ ಜಾಹೀರಾತು ಪ್ರಕಟವಾಗಿದೆ. ಕುಮಾರಸ್ವಾಮಿ ಅವರು ಕಳೆದ 2016 ನವೆಂಬರ್‍ನಲ್ಲಿ ನಿವಾಸದ ಅದ್ದೂರಿ ಗೃಹ ಪ್ರವೇಶ ಮಾಡಿದ್ದರು. ಉತ್ತಮ ಕರ್ನಾಟಕ ಭಾಗದಲ್ಲಿ ಮನೆ ಮಾಡಿ. ಆ ಭಾಗದಲ್ಲಿ ಪಕ್ಷ ಸಂಘಟನೆ ಹಾಗೂ ಜನರಿಗೆ ಹತ್ತಿರವಾಗುವ ಯೋಜನೆಯಾಗಿತ್ತು. ಆದರೆ, ಇದೀಗ ಮನೆಯ ಮಾಲೀಕ ಮನೆಯನ್ನು ಮಾರಾಟಕ್ಕಿಟ್ಟಿದ್ದು ಕುಮಾರಸ್ವಾಮಿ ಬಳಕೆ ಮಾಡುತ್ತಿದ್ದ ಕಚೇರಿ ಸಹ ಮಾರಾಟಕ್ಕಿಡಲಾಗಿದೆ. ನನ್ನ ವೈಯಕ್ತಿಕ ಕಾರಣದಿಂದಾಗಿ ಮನೆಯನ್ನು ಮಾರಾಟ ಮಾಡುತ್ತಿದ್ದೇನೆ. ಕುಮಾರಸ್ವಾಮಿ ಅವರಿಗೆ ಯಾವುದನ್ನು ತಿಳಿಸಿಲ್ಲ. ಆದರೇ ಸದ್ಯಕ್ಕೆ ಅದೇ ಮನೆಯಲ್ಲಿ ಕುಮಾರಸ್ವಾಮಿ ಇರಲಿದ್ದಾರೆ.
ನಾನು ಮಾರಾಟ ಮಾಡಿದ ಬಳಿಕ, ಅದು ಖರೀದಿಸಿದವರಿಗೆ ಸೇರುತ್ತೆ ಅಂತಾರೆ ಮನೆ ಮಾಲೀಕ ಸುರೇಶ ರಾಯರೆಡ್ಡಿ. ಕುಮಾರಸ್ವಾಮಿ ಅವರಿಗೆ ಮನೆ ನೀಡಿದ್ದ ಸುರೇಶ ರಾಯರೆಡ್ಡಿ, ಬಾಡಿಗೆ ಪಡೆದಿಲ್ಲವಂತೆ. ಬಾಡಿಗೆಯ ಬದಲಾಗಿ ಮುಖ್ಯಮಂತ್ರಿ ಆದ್ಮೇಲೆ ರೈತರ ಸಾಲ ಮನ್ನಾ ಮಾಡ್ಬೇಕು ಅಂತ ಕಂಡೀಷನ್ ಹಾಕಿದ್ದರಂತೆ. ಇವರ ಕಂಡೀಷನ್ ಪ್ರಕಾರ ಸಿಎಂ ಅಲ್ಪ ಸ್ವಲ್ಪ ಸಾಲ ಮನ್ನಾ ಮಾಡಿದ್ದಾರೆ ಅಂದುಕೊಂಡರೊ, ಇದು ಸುರೇಶ ರಾಯರೆಡ್ಡಿ ಅವರಿಗೆ ತೃಪ್ತಿ ತಂದಿರಲಿಕ್ಕಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಒಟ್ಟಾರೇಯಾಗಿ ಬಿಸಿ ಸುದ್ದಿಯೊಂದು ನಗರದಲ್ಲಿ ಹರಿದಾಡುತ್ತಿದೆ.

loading...