ಸಿದ್ದರಾಮಯ್ಯಗೆ ಸನ್ಮಾನ

0
5
loading...

ಆಲಮಟ್ಟಿ: ಆಲಮಟ್ಟಿಗೆ ಶುಕ್ರವಾರ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾನಮಯ್ಯಗೆ ಹಲವಾರು ಜನರು ಸನ್ಮಾನಿಸಿದರು. ಬೆಳಿಗ್ಗೆಯೇ ಅವರು ಇಳಿದುಕೊಂಡಿದ್ದ ಪ್ರವಾಸಿ ಮಂದಿರದತ್ತ ಜನ ತಂಡೋಪತಂಡವಾಗಿ ಆಗಮಿಸಿದರು. ಅವರೆಲ್ಲಾ ತಮ್ಮ ನೆಚ್ಚಿನ ನಾಯಕನ ಜೊತೆ ನಿಂತು ಫೋಟೋ ಕ್ಲಿಕ್ಕಿಸಿ, ಇನ್ನೂ ಹಲವರು ಸೆಲ್ಫಿ ಕಿಕ್ಕಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಹುರುಪಿನಲ್ಲಿಯೇ ಇದ್ದ ಸಿದ್ಧರಾಮಯ್ಯ ಎಲ್ಲರೊಂದಿಗೆ ಹಸನ್ಮುಖಿಯಾಗಿ ಮಾತನಾಡಿದರು.
ನಿಡಗುಂದಿ ತಾಲ್ಲೂಕು ಹಾಲುಮತ ಸಮಾಜದ ವತಿಯಿಂದ ಸಿದ್ಧರಾಮಯ್ಯ ಅವರಿಗೆ ಮೈಸೂರು ಪೇಟಾ, ಕಂಬಳಿ ಹೊದಿಸಿ ಸನ್ಮಾನಿಸಲಾಯಿತು.

ಸಮಾಜದ ಮುಖಂಡರಾದ ಬಿ.ಟಿ. ಗೌಡರ, ಪರಶುರಾಮ ಕಾರಿ, ಬಿ.ಟಿ. ಗೌಡರ, ಬಸವರಾಜ ಹುಗ್ಗಿ, ಬಸವರಾಜ ಹೆರಕಲ್, ಚನ್ನಪ್ಪ ಹುಗ್ಗಿ, ಚಂದ್ರಪ್ಪ ದಳವಾಯಿ, ಗುಂಡಪ್ಪ ಕುರಜೋಗಿ, ಯಲಗೂರದಪ್ಪ ಮಸೂತಿ, ಬಸಪ್ಪ ಮಣ್ಣೂರ, ಡಿ.ವೈ. ಹುಗ್ಗಿ, ಬಸವರಾಜ ಹಳೇಮನಿ, ಪ್ರವೀಣ ವಾಲೀಕಾರ, ಹನುಮಂತ ಕೊಳ್ಳಾರ ಸೇರಿದಂತೆ ಹಲವಾರು ಜನರು ಇದ್ದರು.
ಸುಮಾರು ೨೦ ಕ್ಕೂ ವಿವಿಧ ಗ್ರಾಮಸ್ಥರು, ಸಂಘಟನೆಗಳು ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು.

loading...