ಸಿದ್ದರಾಮಯ್ಯ ಬಂದರೂ ಮರಿಚಿಕೆಯಾಗಿದೆ ಬಾದಾಮಿ ಅಭಿವೃದ್ಧಿ

0
3
loading...

ಶಂಕರಲಿಂಗ ದೇಸಾಯಿ
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಬಾದಾಮಿ ಚಾಲುಕ್ಯರಾಳಿದ ನಾಡಾಗಿದ್ದು, ಅನೇಕ ನೈಸರ್ಗಿಕ, ಐತಿಹಾಸಿಕ ಪ್ರಸಿದ್ದ ತಾಣವಾಗಿದೆ. ಈ ತಾಲೂಕಿನ ಬಹುತೇಕ ಗ್ರಾಮಗಳಿಗೆ ಇನ್ನು ಮೂಲ ಸೌಕರ್ಯ ದೊರೆತಿಲ್ಲ. ಬಾದಾಮಿ ತಾಲೂಕಿನ ಪ್ರತಿಯೊಂದು ಗ್ರಾಮಗಳು ತಮ್ಮದೇಯಾದ ಇತಿಹಾಸ ಹೊಂದಿವೆ.

ಈ ಎಲ್ಲ ಗ್ರಾಮಗಳ ಬಗ್ಗೆ ಒಂದೇ ಲೇಖನದಲ್ಲಿ ತಿಳಿಸಲಾಗದೇ ಕೆಲವೇ ಕೆಲವು ಗ್ರಾಮಗಳ ಕುಂದುಕೊರತೆಗಳ ಬಗ್ಗೆ ಹಾಗೂ ಅದಕ್ಕೆ ಸಂಬಂಧಿಸಿದ ಇಲಾಖೆ ಎಚ್ಚರಗೊಳಿಸುವ ಕಾರ್ಯ ಕನ್ನಡಮ್ಮ ಮಾಡುತ್ತಿದೆ. ಬಾದಾಮಿಯಲ್ಲಿ ಅನೇಕ ಹಳ್ಳಿಗÀಳಲ್ಲಿ ಅನಂತಗಿರಿ ಒಂದು ಸಾಕ್ಷಾತ್ ವಿಷ್ಣುವಿನ ಹೆಸರಿನಿಂದ ಕಂಗೊಳಿಸುತ್ತಿರುವ ಈ ಗ್ರಾಮ ೨೦೦೦ ಸಾವಿರ ಜನಸಂಖ್ಯೆ ಹೊಂದಿದ್ದು, ಎತ್ತರದ ಪ್ರದೇಶದಲ್ಲಿರುವದರಿಂದ ಇಲ್ಲಿ ಇನ್ನು ಸರಕಾರಿ ಬಸ್, ಕುಡಿಯುವ ನೀರು, ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ. ಯಾರಾದರು ಅನಾರೋಗ್ಯ ಪೀಡಿತರಾದರೆ ಆಸ್ಪತ್ರೆಗೆ ಹೋಗಬೇಕಾದರೆ ಬಾದಾಮಿಗೆ ಬರಬೇಕು. ಅದು ತಮ್ಮ ಸ್ವಂತ ವಾಹನದಲ್ಲಿ ಬರಬೇಕು. ವಿದ್ಯಾರ್ಥಿಗಳು ಹಾಗೂ ಬಾದಾಮಿಗೆ ಬರಬೇಕಾದ ಪ್ರಯಾಣಿಕರು ಸ್ವಲ್ಪ ದೂರ ನಡೆದು ಹೋಗಿ ಬೇರೆ ಊರಿನ ಬಸ್ ಅವಲಂಬಿಸಬೇಕಾಗುತ್ತದೆ.
ಇನ್ನು ಇತ್ತಿÃಚೆಗೆ ಉತ್ತರ ಕರ್ನಾಟಕದಲ್ಲಿ ರೈತರ ಸಮಸ್ಯೆಯನ್ನು ದೇಶಕ್ಕೆ ತಲುಪಿಸಿದ ಮಹಾದಾಯಿ ಮಲಪ್ರಭಾ ನದಿ ಜೋಡನೆಯನ್ನು ೪೦ ವರ್ಷಗಳ ಹಿಂದೆಯೇ ಈ ನದಿ ಜೋಡನೆಗಳ ಬಗ್ಗೆ ರೈತರಲ್ಲಿ ಹಾಗೂ ಸರಕಾರಕ್ಕೆ ಎಚ್ಚರಿಕೆ ಮೂಡಿಸಿದ ಜನಪ್ರಿಯ ಅಂದಿನ ಶಾಸಕ ಬಿ.ಎಂ.ಹೊರಕೇರಿ ಇವರು ಜನಿಸಿದ ಊರಾದ ಡಾನಕ ಶಿರೂರ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಬಾದಾಮಿ ರೋಣ ಹೆದ್ದಾರಿಯ ಪಕ್ಕದಲ್ಲಿ ಕೇವಲ ೩ ಕಿ.ಮೀ ಅಂತರದಲ್ಲಿರುವ ಈ ಗ್ರಾಮಕ್ಕೆ ಮುಂಜಾನೆ ಮತ್ತು ರಾತ್ರಿ ಒಂದು ಬಸ್‌ನ್ನು ಬಿಟ್ಟರೆ ಬೇರೆ ಬಸ್ ಸಂಚಾರ ಇಲ್ಲ. ರಸ್ತೆಗಳಂತೂ ತಗ್ಗು ದಿನ್ನಿನಿಂದ ಕೂಡಿದ್ದು, ಪ್ರತಿಯೊಂದು ಒಂದಿಲ್ಲ ಒಂದು ಅಪಘಾತ ಜರಗುತ್ತಿವೆ. ಕುಡಿಯುವ ನೀರು ವಿದ್ಯುತ್ ಪೂರೈಕೆಯಲ್ಲೂ ಕೂಡಾ ಯಾವ ಸುಧಾರಣೆಗಳು ಇಲ್ಲ.

ಹೆಸರಾಂತ ಶಾಸಕರನ್ನು ಹೊಂದಿದ ಈ ಗ್ರಾಮವನ್ನು ಸುಧಾರಿಸಬೇಕೆಂಬ ಇಚ್ಚಾಶಕ್ತಿ ಇಲ್ಲಿಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಆಗುತ್ತಿಲ್ಲ. ಚುನಾವಣೆಗೆ ಬಂದಾಗ ಮಾತ್ರ ಎಷ್ಟೆÃ ಕಷ್ಠವಾದರೂ ನಿಮಗೆ ಇಂದ್ರ ಚಂದ್ರರನ್ನು ತರಿಸುತ್ತೆÃವೆ ಎಂಬ ಆಶ್ವಾಸನೆಯನ್ನು ನೀಡಿ ಮರಳಿ ನೋಡುವದಿಲ್ಲ. ಇನ್ನು ಬಾದಾಮಿ ತಾಲೂಕಿನಲ್ಲಿ ದೊಡ್ಡ ಪಟ್ಟಣವಾಗಿದ್ದು, ರಾಜ್ಯ ಹಾಗೂ ದೇಶದಲ್ಲಿಯೇ ಪ್ರಮುಖ ಜಾನುವಾರು ಸಂತೆಯನ್ನು ಹೊಂದಿರುವ ಕೆರೂರ ಪಟ್ಟಣ. ಇಲ್ಲಿ ಪ್ರತಿ ಮಂಗಳವಾರ ಸಂತೆ ದಿನವಾಗಿದ್ದು, ಜಿಲ್ಲೆಯಾದ್ಯಂತ ಗ್ರಾಮಗಳ ಕುರಿ, ಮೇಕೆ ಹಾಗೂ ಜಾನುವಾರು ಸಂತೆ ಜರುಗುತ್ತಿದ್ದು, ಇಲ್ಲಿಯ ಜಾನುವಾರುಗಳ ಖರೀದಿಗೆ ಆಗಮಿಸುತ್ತಿರುವ ಹೊರ ರಾಜ್ಯದ ದಲ್ಲಾಲಿಗಳ ಉಪಟಳದಿಂದಾಗಿ ಸ್ಥಳೀಯ ರೈತರು ಅವರು ಮಾಡುವ ಮೋಸಕ್ಕೆ ಒಳಗಾಗುತ್ತಾರೆ. ಇದಕ್ಕೆ ನಿರ್ಬಂದನೆ ಇಲ್ಲ. ಸಾವಿರಾರು ಜಾನುವಾರುಗಳು, ಕುರಿ ಮೇಕೆಗಳು ಸೇರುತ್ತಿರುವದರಿಂದ ಸಮರ್ಪಕವಾದ ಜಾನುವಾರುಗಳಿಗೆ ಲಸಿಕೆ ಹಾಕುವ ಪಶು ಆಸ್ಪತ್ರೆಯ ವ್ಯವಸ್ಥೆÃ ಅಷ್ಟಕಷ್ಟೆÃ.
ಇಲ್ಲಿ ಕುರಿ, ಮೇಕೆಗಳನ್ನು ಹೊರ ರಾಜ್ಯದ ಕಳ್ಳರು ಹೊಲಗಳಲ್ಲಿ ಹಾಗೂ ನಿರ್ಜನ ಪ್ರದೇಶದಲ್ಲಿ ಟಿಕಾನೆ ಹೂಡಿದ ಕುರಿಗಾರರ ಕುರಿಗಳನ್ನು ಕಳುವು ಮಾಡುವದಲ್ಲದೇ ಅವರ ಮೇಲೆ ಮಾರನಾಂತಿಕ ದಾಳಿ ಮಾಡಿ ಅಂತಹ ಕುರಿ ಮೇಕೆಗಳನ್ನು ಇದೇ ಸಂತೆಯಲ್ಲಿ ರಾಜಾರೋಷವಾಗಿ ಮಾರುತ್ತಾರೆ. ಈ ಕುರಿಗಳು ಹಾಗೂ ಮೇಕೆಗಳು ಎಲ್ಲಿಂದ ಬಂದವು ಯಾರು ಇದರ ಮಾಲಿಕರು ಎಂಬುದೇ ತಿಳಿಯಲಾರದೇ ಕೇವಲ ೨ ಗಂಟೆ ಸಂತೆಯಲ್ಲಿ ಆ ಕುರಿ ಮತ್ತು ಮೇಕೆ ಬೇರೆ ರಾಜ್ಯಕ್ಕೆ ಕಳುಹಿಸಲ್ಪಟ್ಟಿರುತ್ತವೆ. ಸಂತೆ ದಿನ ದಲ್ಲಾಲರು ರೈತರಿಗೆ ಮಾಡುವ ಮೋಸದ ಬಗ್ಗೆ ಪೊಲೀಸ್ ಇಲಾಖೆಯಾಗಲಿ ಕೃಷಿ ಹಾಗೂ ಪಶು ಇಲಾಖೆಯಾಗಲಿ ಸೂಕ್ತ ಕ್ರಮಕೈಗೊಂಡಿಲ್ಲ. ಇಂತಹ ಇನ್ನು ಅನೇಕ ಹಳ್ಳಿಗಳು ಬಾದಾಮಿ ತಾಲೂಕಿನಲ್ಲಿದ್ದು, ಈ ಎಲ್ಲ ಹಳ್ಳಿಗಳ ಅಭಿವೃದ್ದಿಯಾಗುತ್ತದೆ. ಏಕೆಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಾಗಿದ್ದಾರೆ. ಇನ್ನು ಮುಂದೆ ಬಾದಾಮಿ ಸುಧಾರಣೆಯತ್ತ ಸಾಗುತ್ತದೆ ಎಂಬ ಇಲ್ಲಿನ ಸ್ಥಳೀಯರ ನಂಬಿಕೆ ಹುಸಿಯಾಗಿದೆ. ಸಂಸದ ಪಿ.ಸಿಗದ್ದಿಗೌಡರ ಅವರ ಶ್ರಮದಿಂದಾಗಿ ಅಮೃತ ಯೋಜನೆ ಇತ್ತಿÃಚೆಗೆ ಬಾದಾಮಿ ಪಟ್ಟಣ ಸುಧಾರಿಸುವಂತೆ ಮಾಡುತ್ತಿದೆ ಯಾದರೂ ತಾಲೂಕಿನ ಗ್ರಾಮಗಳಿಗೆ ಇಂತಹದೇ ಅಭಿವೃದ್ದಿ ಕಾರ್ಯಗಳು ಆಗಬೇಕಾಗಿದೆ. ಈಗಾಗಲೇ ಸಿದ್ದರಾಮಯ್ಯನವರು ಅನೇಕ ಬಾರಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಕೇವಲ ಪತ್ರ ಬರೆಯುವದರ ಮೂಲಕ ಅಭಿವೃದ್ದಿ ಬಯಸುತ್ತಾರೆ. ಈ ಪತ್ರ ಬರೆಯುವ ವ್ಯವಹಾರವನ್ನು ಬಿಟ್ಟು, ಬಾದಾಮಿ ತಾಲೂಕಿನ ಸಮಗ್ರ ಅಭಿವೃದ್ದಿಗಾಗಿ ಸಿದ್ದರಾಮಯ್ಯ ಪಣತೊಡಬೇಕಾಗಿದೆ. ಅಂದಾಗ ಮಾತ್ರ ಇಲ್ಲಿಯ ಮತದಾರರು ಅವರನ್ನು ಆಯ್ಕೆ ಮಾಡಿದಕ್ಕೆ ಸಾರ್ಥಕವಾಗುತ್ತದೆ.

loading...