ಸುತಗುಂಡಾರದಲ್ಲಿ ಉಚಿತ ಆರೋಗ್ಯ ಶಿಬಿರ

0
7
loading...

ಬಾಗಲಕೋಟೆ: ನಗರದ ಬರಗಿ ಆಸ್ಪತ್ರೆಯ ಸಹಯೋಗದಲ್ಲಿ ಸುತಗುಂಡಾರ ಗ್ರಾಮದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಕ್ಕೂ ಹೆಚ್ಚು ರೋಗಿಗಳು ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು.
ಸಿದ್ಧಾರೂಢರ ಮಠದ ಶ್ರಾವಣ ಮಾಸದ ನಿಮಿತ್ಯ ದಿ. ಸೋಮಪ್ಪ ದ್ಯಾವಣ್ಣವರ, ದಿ. ಕಸ್ತೂರಿಬಾಯಿ ಬಸನಗೌಡ ಪಾಟೀಲ ಅವರ ಸ್ಮರಣಾರ್ಥವಾಗಿ ಬರಗಿ ಆಸ್ಪತ್ರೆಯ ಸಹಯೋಗದಲ್ಲಿ ಸುತಗುಂಡಾರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಬಿರದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ನೂರಕ್ಕೂ ಹೆಚ್ಚು ರೋಗಿಗಳು ಪಾಲ್ಗೊಂಡು ಉಚಿತ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಂಡರು. ಶಿಬಿರದ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ಡಾ. ಸುನೀಲ ಬರಗಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳನ್ನು ಏರ್ಪಡಿಸುವ ಮೂಲಕ ಬಡ ರೋಗಿಗಳಿಗೆ ನೆರವಾಗುವ ಉದ್ದೆೀಶ ಈ ಶಿಬಿರದ್ದಾಗಿದೆ ಎಂದು ವಿವರಿಸಿದರು.
ಶಿಬಿರದಲ್ಲಿ ಡಾ. ಜಿ.ಎಸ್‌. ಬರಗಿ, ಡಾ. ಸ್ಮಿತಾ ಬರಗಿ, ಡಾ. ಚೇತನ ಬರಗಿ, ಡಾ. ಎಂ.ಬಿ. ಮೂಲಿಮನಿ, ಡಾ. ಶ್ರೀನಿವಾಸ ಓದುಗೌಡರ, ಡಾ. ಕೃಷ್ಣಮೂರ್ತಿ ಜಾಲಿಹಾಳ, ಡಾ. ಮಹಾಂತೇಶ ಮಠ ಮತ್ತಿತರರು ಶಿಬಿರವನ್ನು ನಡೆಸಿಕೊಟ್ಟರು. ಡಾ. ಆರ್‌.ಜಿ. ಅಂಗಡಿ, ಶೇಖಪ್ಪ ಬಸವನಾಳ, ಅಶೋಕ ಗೌಡರ, ಅವರುಗಳು ಶಿಬಿರದ ನೇತೃತ್ವ ವಹಿಸಿದ್ದರು.

loading...