ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಇಂದಿರಾ ಬ್ಯಾನರ್ಜಿ ಆಯ್ಕೆ

0
28
loading...

ನವದೆಹಲಿ: ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಮೂರ್ತಿಯಾಗಿ ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನು ನೇಮಕ ಮಾಡಲಾಗಿದ್ದು, ಈ ಮೂಲಕ ಸುಪ್ರೀಂಕೋರ್ಟ್ನ ಇತಿಹಾಸದಲ್ಲಿ ಮೂರು ನ್ಯಾಯಾಧೀಶೆಯರಿರುವುದು ಇದೇ ಮೊದಲ ಬಾರಿ ಎನ್ನುವುದು ವಿಶೇಷ.

ಸುಪ್ರಿಂಕೋರ್ಟ್ಗೆ ನ್ಯಾಯಮೂರ್ತಿಯಾಗಿ ನೇಮಕವಾದ 8ನೇ ನ್ಯಾಯಾಧೀಶೆ ಇಂದಿರಾ ಅವರಾಗಿದ್ದಾರೆ. ಪ್ರಸ್ತುತ ಸುಪ್ರೀಂನ ಮಹಿಳಾ ನ್ಯಾಯಾಧೀಶರಾಗಿ ಆರ್. ಭಾನುಮತಿ ಹಾಗೂ ಇಂಧು ಮಲ್ಹೋತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋಲ್ಕತ್ತಾ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುವ ಇವರು, 2002ರಲ್ಲಿ ಮದ್ರಾಸ್ ಹೈಕೋರ್ಟ್ ಜಸ್ಟೀಸ್ ಆಗಿ ಹಾಗೂ ಕಳೆದ ವರ್ಷ ಅಲ್ಲಿಯೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ಕೊಲಿಜಿಯಂ ಶಿಫಾರಿಸಿನ ಮೇರೆಗೆ ಕೇಂದ್ರ ಸರ್ಕಾರ ಇವರನ್ನು ಸುಪ್ರೀಂಕೋರ್ಟ್ ಜಸ್ಟಿಸ್ ಆಗಿ ನೇಮಕಮಾಡಿದೆ.

ಇದರ ಜೊತೆಯಲ್ಲಿಯೇ ಒಡಿಶಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿನೀತ್ ಸರನ್ ಹಾಗೂ ಉತ್ತರಾಖಂಡ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರ ನೇಮಕದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ಮಾಹಿತಿ ಹೊರಹಾಕಿದೆ.

ವಿನೀತ್ ಸರನ್ ಅವರು 1980ರಲ್ಲಿ ಅಲಹಾಬಾದ್ ಹೈಕೋರ್ಟ್ನಿಂದ ವೃತ್ತಿ ಜೀವನ ಆರಂಭಿಸಿ, ಉತ್ತರ ಪ್ರದೇಶದ ಕಾನೂನು ಅಧಿಕಾರಿಯಾಗಿ, 2016ರಲ್ಲಿ ಒಡಿಶಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಉತ್ತರಾಖಂಡ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರ ಹೆಸರನ್ನು ಕೊಲಿಜಿಯಂ ಎರಡನೇ ಬಾರಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದರಿಂದ ಕೇಂದ್ರ ಸರ್ಕಾರ ಅಂಗೀಕಾರ ಮಾಡಿದೆ.

loading...