ಸೂಪ್ತ ಪ್ರತಿಭೆಗಳ ಗುರುತಿಸಿ ಪ್ರೊÃತ್ಸಾಹ ನೀಡುವದು ಅವಶ್ಯ: ಶ್ರಿÃಗಳು

0
6
loading...

ಬಸವನಬಾಗೇವಾಡಿ: ಪ್ರತಿಯೊಬ್ಬ ಮಕ್ಕಳಲ್ಲಿ ಪ್ರತಿಭೆ ಅಡಗಿದ್ದು ಪ್ರಾಥಮಿಕ ಹಂತದಲ್ಲಿ ಅದನ್ನು ಗುರುತಿಸಿ ಪ್ರೊÃತ್ಸಾಹಿಸುವ ಕಾರ್ಯವೂ ಅತೀ ಅವಶ್ಯಕವಾಗಿದೆ ಎಂದು ಯರನಾಳ ವಿರಕ್ತಮಠದ ಗುರು ಸಂಗನಬಸವ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಮಣ್ಣೂರ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮುತ್ತಗಿ ಕ್ಲಸ್ಟರ್ ಮಟ್ಟದ “ಪ್ರತಿಭಾ ಕಾರಂಜಿ” ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಅವರು ಮಕ್ಕಳಲ್ಲಿನ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಸರಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದಲ್ಲೂ ಕೈಗೆತ್ತಿಗೊಂಡಿದ್ದು ಶ್ಲಾಘನೀಯವಾಗಿದ್ದು ಪ್ರತಿಭೆಗಳಿಗೆ ಪೂರಕವಾದ ವಾತಾವರಣ ನಿರ್ಮಿಸಬೇಕೆಂದು ಹೇಳಿದರು.

ಮಣ್ಣೂರ ಗ್ರಾಮದ ರಾಚೋಟೇಶ್ವರ ಸ್ವಾಮೀಜಿ ಸಮ್ಮುಖವಹಿಸಿದ್ದರು, ಜಿಪಂ ಸದಸ್ಯ ಜೈಸಿಂಗ ನಾಯಕ, ಗ್ರಾಪಂ ಅಧ್ಯಕ್ಷ ಮಹೇಶ ಮುಳವಾಡ, ಪಿಎಸ್‌ಐ ಶರಣಗೌಡ ಗೌಡರ, ಪಿಡಿಒ ಹಾವರಗಿ, ಗ್ರಾಪಂ ಸದಸ್ಯರಾದ ಶಂಕ್ರೆಪ್ಪ ಜುಗತಿ, ರೇಣುಕಾ ಕಲಬುರ್ಕಿ, ತಿಪ್ಪವ್ವ ಮಾದರ, ಥಾವರು ಚವ್ಹಾಣ, ಎಸ್‌ಡಿಎಂಸಿ ಅಧ್ಯಕ್ಷ ರಾಜಕುಮಾರ ಮೂಲಿಮನಿ, ಗೌರಮ್ಮ ಜುಗತಿ, ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಮಾದರ, ಕಾರ್ಯದರ್ಶಿ ಎಂ.ಎ.ಹಳ್ಳೂರ, ಮುಖ್ಯ ಗುರುಗಳು ಜಿ.ಎಂ.ಶಿವಮತ ಸ್ವಾಗತಿಸಿದರು, ಶಿವು ಮಡಿಕೇಶ್ವರ ನಿರೂಪಿಸಿದರು, ಕೆ.ಎನ್.ಕಂಡೇಕರ ವಂದಿಸಿದರು, ಇದೇ ಸಂದರ್ಭದಲ್ಲಿ ವಿವಿಧ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು.

loading...