ಸೆ.3ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಲಂಡನ್ ಪ್ರವಾಸ ನಾನು ಹೇಳಿದ್ದರಲ್ಲಿ ತಪ್ಪೇನು?

0
6
loading...

ಬೆಂಗಳೂರು:ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ನಗರದ ರಮ್ಯ ಹೋಟೆಲ್‍ನಲ್ಲಿ ಸ್ನೇಹಿತರ ಜೊತೆ ತಿಂಡಿ ತಿಂದ ಬಳಿಕ ಮಾತನಾಡಿದ ಅವರು,ನಾನು ಮತ್ತೆ ಸಿಎಂ ಆಗುತ್ತೇನೆ ಎಂಬ ಹೇಳಿಕೆಯ ಅರ್ಥವನ್ನ ನೀವು ಹೇಗೆ ಬೇಕಾದರೂ ಕಲ್ಪಿಸಿಕೊಳ್ಳಿ. ನಿನ್ನೆ ಹಾಸನದ ಹೊಳೆ ನರಸೀಪುರದಲ್ಲಿ ದೇವಸ್ಥಾನದ ಕಾರ್ಯಕ್ರಮದಲ್ಲಿ ಜನರು ಕೆಲವೊಂದು ಬೇಡಿಕೆಗಳನ್ನ ಇಟ್ಟರು. ಜನರ ಬೇಡಿಕೆಗಳನ್ನ ಈಡೇರಿಸುವುದಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ್ದೇನೆ.ಮುಂದಿನ ಚುನಾವಣೆಯಲ್ಲಿ ಮತ್ತೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ನೀವು ಹೇಳಿದ ಕೆಲಸವನ್ನ ಮಾಡೋಣ ಎಂದು ಹೇಳಿದ್ದೇನೆ ಅದರಲ್ಲಿ ತಪ್ಪೇನು?ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.
ಕೇಂದ್ರ ಸರ್ಕಾರ ಕೂಡಲೇ ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.ಕೊಡಗಿನಲ್ಲಿ ದೊಡ್ಡ ಅನಾಹುತವಾಗಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅನಾಹುತವಾಗಿದೆ.ಅಲ್ಲಿನ ಜನರು ಸಾಕಷ್ಟು ಕಷ್ಟಗಳನ್ನ ಅನುಭವಿಸು ತ್ತಿದ್ದಾರೆ. ನಾನು ಸಹ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ ಎಂದರು.
ಇನ್ನೂ ಕೇಂದ್ರಸರ್ಕಾರದ ಸಚಿವರು ಕೊಡಗಿಗೆ ಭೇಟಿ ನೀಡಿದ್ದರು.ಆದರೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಸ್ಥಳೀಯ ಸಂಸದರು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಅದನ್ನು ಬಿಟ್ಟು ಬರೀ ಭಾಷಣ ಹೊಡಿತಾರೆ. ಕೇವಲ ಭಾಷಣ ಮಾಡುವುದಕ್ಕಾ ಸಂಸದರರಿವುದು ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವರು ಕೊಡಗಿಗೆ ಬರುವ ಮೊದಲೇ ಪ್ರಧಾನಿ ಜೊತ ಮಾತುಕತೆ ಮಾಡಿಕೊಂಡು ಬರಬೇಕಿತ್ತು. ಆದರೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡಲಿ. ಕೇರಳಕ್ಕೂ ಕೊಟ್ಟಿರುವ ಹಣ ಸಾಲುವುದಿಲ್ಲ. ಅಲ್ಲಿಯೂ ಸಹ ದೊಡ್ಡ ಅನಾಹುತವಾಗಿದೆ. ರಾಜ್ಯದಲ್ಲಿ ಸಮಿಶ್ರ ಸರ್ಕಾರವಿರುವುದರಿಂದ ಕೇಂದ್ರ ಸರ್ಕಾರ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೇಂದ್ರ ಸರ್ಕಾರ ಬಹಳ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಲಂಡನ್‍ನಲ್ಲಿ ನನ್ನ ಸ್ನೇಹಿತನಿದ್ದಾನೆ.ನಾನು ಮುಖ್ಯಮಂತ್ರಿಯಾದಾಗಿನಿಂದಲೂ ಲಂಡನ್‍ಗೆ ಬರುವಂತೆ ಒತ್ತಡ ಹಾಕುತ್ತಿದ್ದ. ಹೀಗಾಗಿ ಸೆ.3ರಂದು ನನ್ನ ಮಗ ಡಾ.ಯತೀಂದ್ರ, ಸಚಿವರಾದ ಕೆ.ಜೆ ಜಾರ್ಜ್,ಆರ್.ವಿ.ದೇಶಪಾಂಡೆ ಮತ್ತು ವಿಧಾನ ಪರಿಷತ್ ಸದಸ್ಯ ಗೋವಿಂದ್ ರಾಜು ಅವರೊಂದಿಗೆ ಲಂಡನ್‍ಗೆ ತೆರಳುತ್ತಿದ್ದೇನೆ ಎಂದರು.

loading...