ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ: ಪೋಲಿಸ್ ಪಾಟೀಲ್

0
5
loading...

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಮುಂಬರುವ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಲು ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂದೇಹ ಬೇಡ ಎಂದು ಬಿಜೆಪಿ ಮುಖಂಡ ಸಿ.ಎಚ್.ಪೋಲಿಸ್ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಪಪಂ ಚುನಾವಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಯಲಬುರ್ಗಾ ಪಟ್ಟಣವನ್ನು ಆಳಿದ ಕಾಂಗ್ರೆಸ್ ಅಭಿವೃದ್ದಿ ಪಡಿಸುವಲ್ಲಿ ಸಂಪೂರ್ಣ ವಿಫಲರಾದ ಹಿನ್ನೆಲೆಯಲ್ಲಿ ಆಡಳಿತ ವಿರೋಧಿ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಕಲಿಸಿದ ಸೋಲಿನ ರುಚಿ ಯಲಬುರ್ಗಾ ಪಟ್ಟಣದ ಸಾರ್ವಜನಿಕರು ಮತ್ತೆ ಸೋಲಿಸುತ್ತಾರೆಂಬ ವಿಶ್ವಾಸವಿದ್ದು, ಈ ನಿಟ್ಟಿನಲ್ಲಿ ಪಟ್ಟಣದ ಸಮಗ್ರ ಅಬಿವೃದ್ಧಿಯಾಗಿ ಮತ್ತು ಶಾಸಕ ಹಾಲಪ್ಪ ಆಚಾರ್ ಅವರ ಕೈಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ 15 ವಾರ್ಡುಗಳ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸುವಂತೆ ಸಲಹೆ ನೀಡಿದರು.
ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ, ಶಿವನಗೌಡ ಬನಪ್ಪಗೌಡ್ರ, ವೀರಣ್ಣ ಹುಬ್ಬಳ್ಳಿ, ತಾಪಂ ಸದಸ್ಯ ಶರಣಪ್ಪ ಈಳಗೇರ ಮಾತನಾಡಿದರು. ಸಮಾರಂಭದಲ್ಲಿ ಪ್ರಭುರಾಜ ಕಲಬುರ್ಗಿ, ವಸಂತ ಭಾವಿಮನಿ, ಷಣ್ಮುಖಪ್ಪ ರಾಂಪೂರು, ಈರಪ್ಪ ಬಣಕಾರ, ಶಿವನಂದ ಬಣಕಾರ ಇದ್ದರು.

loading...