ಸ್ಮಾರ್ಟ್ ಸಿಟಿಯಲ್ಲಿ ದಕ್ಷಿಣ ಕ್ಷೇತ್ರಕ್ಕೆ ತಾರತಮ್ಯ: ಶಾಸಕ ಅಭಯ ಪಾಟೀಲ

0
26
loading...

ಕನ್ನಡಮ್ಮಸುದ್ದಿ- ಬೆಳಗಾವಿ: ಸ್ಮಾರ್ಟ್ ಸಿಟಿ ಯಲ್ಲಿ‌ ದಕ್ಷಿಣ ಕ್ಷೇತ್ರಕ್ಕೆ ತಾರತಮ್ಯವಾಗಿದೆ. ಯೋಜನೆಗಳಲ್ಲಿ ಬದಲಾವಣೆ ಮಾಡುವ ಮೂಲಕ ದಕ್ಷಿಣ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕೆಂದು ಶಾಸಕ ಅಭಯ ಪಾಟೀಲ ಆಕ್ಷೇಪ ವ್ಯಕ್ತ ಪಡಿಸಿದರು‌.

ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಮಾರ್ಟ್ ಟಿಯ ಸಲಹಾ ಸಮಿತಿಯಲ್ಲಿ ವಿಷಾದ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿಯಲ್ಲಿ ಉತ್ತರ ಕ್ಷೇತ್ರಕ್ಕೆ 80% ಹಾಗೂ ದಕ್ಷಿಣ ಕ್ಷೇತ್ರದಲ್ಲಿ 20 ಯೋಜನೆಗಳನ್ನು ನೀಡಿ ಕ್ಷೇತ್ರದ ತಾರತಮ್ಯವಾಗಿದೆ. ಆದ್ದರಿಂದ ಯೋಜನೆಗಳಲ್ಲಿ ಬದಲಾವಣೆ ಮಾಡಿ ಕ್ಷೇತ್ರದ ಅಬಿವೃದ್ಧಿ ಪಡಿಸಬೇಕೆಂದರು. ಅಲ್ಲದೆ
ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡುತ್ತಿರುವುದು ಎಲ್ಲಿಯೂ ಸಹ ಯಶಸ್ವಿಯಾಗಿಲ್ಲ ಆದ್ದರಿಂದ ಅದನ್ನು ಕೈ ಬೀಟ್ಟು ಅದೇ ಹಣದಲ್ಲಿ ರಸ್ತೆಗಳ ಅಭಿವೃದ್ಧಿ ಪಡಿಸಬೇಕೆಂದು ಸಲಹೆ‌ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಸುರೇಶ ಅಂಗಡಿ, ಶಾಸಕರಾದ  ಯಮಕನಮರಡಿಯ ಸತೀಶ ಜಾರಕಿಹೊಳಿ, ಉತ್ತರ ಕ್ಷೇತ್ರದ ಅನಿಲ ಬೆನಕೆ,ಗ್ರಾಮಿಣ ಕ್ಷೇತ್ರದ ಲಕ್ಷ್ಮೀ ಹೆಬ್ಬಾಳಕರ, ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಸ್ಮಾರ್ಟ್ ಸಿಟಿಯ ಎಂಡಿ ಶಶಿಧರ ಕುರೇರ,ಪಾಲಿಕೆ ಮೇಯರ ಬಸಪ್ಪಾ ಚಿಕ್ಕಲದಿನ್ನಿ ಹಾಜರಿದ್ದರು.

loading...