ಸ್ವಾತಂತ್ರö್ಯ ದಿನಾಚರಣೆ: ಅಧಿಕಾರಿಗಳಿಂದ ಪರಿಶೀಲನೆ

0
6
loading...

Àಬಕವಿ-ಬನಹಟ್ಟಿ,: ರಬಕವಿ-ಬನಹಟ್ಟಿ ತಾಲೂಕು ನಿರ್ಮಾಣವಾದ ನಂತರ ಪ್ರಥಮ ಸ್ವಾತಂತ್ರö್ಯ ದಿನಾಚರಣೆ ಕಾರ್ಯಕ್ರಮವನ್ನು ಸ್ಥಳೀಯ ಎಸ್‌ಆರ್‌ಎ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು ಪೂರ್ವಭಾವಿಯಾಗಿ ಸೋಮವಾರ ಅಧಿಕಾರಿಗಳ ಸಮ್ಮುಖದಲ್ಲಿ ವಿವಿಧ ಶಾಲೆಯ ನೂರಾರೂ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು.
ತಾಲೂಕಿನ ರಬಕವಿ, ಬನಹಟ್ಟಿ, ರಾಮಪುರ ಮತ್ತು ಹೊಸೂರ ಗ್ರಾಮದ ವಿವಿಧ ಶಾಲೆಗಳ ಅಂದಾಜು ಮೂರು ಸಾವಿರದಷ್ಟು ವಿದ್ಯಾರ್ಥಿಗಳು ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅದೇ ರೀತಿಯಾಗಿ ಪಥ ಸಂಚಲನದಲ್ಲಿ ಪೊಲೀಸ್ ಇಲಾಖೆ ಮತ್ತು ಗೃಹರಕ್ಷಕ ದಳದವರು ಭಾಗವಹಿಸುವರು.

ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರವೀಣ ಜೈನ್, ಸಿಪಿಐ ಬಿ. ಎಸ್. ಮಂಟೂರ, ಪಿಎಸ್‌ಐ ಎಸ್. ಎಂ. ಅವಜಿ, ಎಎಸ್‌ಐ ಎಂ. ಕೆ. ಕಣಗಾರ ಮತ್ತು ಬಿ. ಎಸ್. ಪಾಟೀಲ ಹಾಗೂ ವಿವಿಧ ಶಾಲೆಯ ಶಿಕ್ಷಕರು, ದೈಹಿಕ ನಿರ್ದೇಶಕರು ಸ್ವಾತಂತ್ರö್ಯ ದಿನಾಚರಣೆಯ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.

loading...