ಹಬ್ಬಗಳ ಹೆಬ್ಬಾಗಿಲು ಶ್ರಾವಣ ಮಾಸ

0
6
loading...

ರಬಕವಿ-ಬನಹಟ್ಟಿ: ಶ್ರಾವಣ ಮಾಸವನ್ನು ಹಬ್ಬಗಳ ಹೆಬ್ಬಾಗಿಲು ಮತ್ತು ಹಬ್ಬಗಳ ತಾಯಿ ಎಂದು ಕರೆಯುತ್ತಾರೆ. ಹಿಂದೂಗಳಿಗೆ ಶ್ರಾವಣ ಪವಿತ್ರವಾದ ಮಾಸವಾಗಿದೆ. ಈ ಸಂದರ್ಭದಲ್ಲಿ ಧರ್ಮ ಮತ್ತು ಒಳ್ಳೆಯ ವಿಚಾರಗಳ ಕುರಿತು ಚಿಂತನೆ ಅಗತ್ಯವಾಗಿದೆ ಎಂದು ರಬಕವಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೆÃಶ್ವರ ಸ್ವಾಮೀಜಿ ನುಡಿದರು.
ಅವರು ರಬಕವಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಶ್ರಾವಣ ಮಾಸದ ನಿಮಿತ್ತವಾಗಿ ಹಮ್ಮಿಕೊಂಡ ಸದ್ಗುರು ಸಿದ್ಧಾರೂಢರ ಚರಿತಾಮೃತ ಕುರಿತು ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸದ್ಗುರು ಬ್ರಹ್ಮಾನಂದರು ಶ್ರಾವಣ ಮಾಸದ ಸಂದರ್ಭದಲ್ಲಿ ಪ್ರವಚನದ ಮೂಲಕ e್ಞÁನ ದಾಸೋಹ ನಂತರ ಮುಕ್ತಾಯದ ಸಂದರ್ಭದಲ್ಲಿ ಅನ್ನ ದಾಸೋಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಸಮಾಜವನ್ನು ಮಾನಸಿಕವಾಗಿ ಸಶಕ್ತ ಮಾಡುವ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುವ ಕಾರ್ಯವನ್ನು ಪ್ರವಚನ ಮಾಡುತ್ತದೆ.
ನಗರದ ಗಣ್ಯರಾದ ಬುದ್ದಪ್ಪ ಕುಂದಗೋಳ, ಮಹಾದೇವ ಹಿರೇಮಠ, ಗಿರೀಶ ಮುತ್ತೂರ, ರಾಮಣ್ಣ ಕುಲಗೋಡ, ಮುರಿಗೆಪ್ಪ ಮಿರ್ಜಿ ಸಿದ್ಧಾರೂಢರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡುವುದರ ಮೂಲಕ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೀರೂಪಾಕ್ಷಯ್ಯ ಹಿರೇಮಠದ ಕಾರ್ಯಕ್ರಮ ನಡೆಸಿಕೊಟ್ಟರು.

loading...