ಹಸಿವು ನಿವಾರಣೆಗೆ ತವನಿಧಿ: ಬಸವರಾಜ ಶ್ರಿÃಗಳು

0
5
loading...

 

ಗುಳೇದಗುಡ್ಡ: ಹಸಿವು ಒಂದು ದೊಡ್ಡ ರೋಗ, ಅಶಕ್ತರು, ಅಲಕ್ಷಿತರು, ನಿರ್ಗತಿಕರು ಇದಕ್ಕೆ ಬಲಿಯಾಗುತ್ತಾರೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ, ಸಮಾಜದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೆÃಶದಿಂದ ಶ್ರಿÃಮಠದಿಂದ ದಾಸೋಹಿಗಳ ನೆರವಿನಿಂದ ತವನಿಧಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಕಡುಬಡವರು, ಅಲಕ್ಷಿತರು ಇಲ್ಲಿನ ದಾಸೋಹದಲ್ಲಿನ ಪ್ರಸಾದ ಸೇವಿಸಿ ಮನಸ್ಸು, ಬುದ್ದಿಯನ್ನು ಪ್ರಸನ್ನಗೊಳಿಸಿಕೊಳ್ಳಬೇಕು. ತಮ್ಮ ವೃದ್ದಾಪ್ಯದ ಅಲಕ್ಷತೆಯನ್ನು ದೂರ ಮಾಡಿಕೊಳ್ಳಬೇಕು ಎಂದು ಇಲ್ಲಿನ ಜಗದ್ಗುರು ಗುರುಸಿದ್ದೆÃಶ್ವರ ಬೃಹನ್ಮಠದ ಶ್ರಿÃ.ಜ. ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಸ್ಥಳೀಯ ಜಗದ್ಗುರು ಗುರುಸಿದ್ದೆÃಶ್ವರ ಬೃಹನ್ಮಠದಲ್ಲಿ ನಡೆಯುತ್ತಿರುವ ತವನಿಧಿ ದಾಸೋಹ ಯೋಜನೆಯ ಮೂರನೇ ವರ್ಷದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಸಿದವರಿಗೆ ಅನ್ನ ನೀಡುವುದು ಪುಣ್ಯ ಹಾಗೂ ಪವಿತ್ರದ ಕಾಯಕವಾಗಿದೆ ಎಂದರು. ರವೀಂದ್ರ ಕಲಬುರ್ಗಿ ಮಾತನಾಡಿ, ಇಲ್ಲಿನ ಗುರುಸಿದ್ದೆÃಶ್ವರ ಬೃಹನ್ಮಠವು ಸಮಾಜದಲ್ಲಿನ ನಿರ್ಗತಿಕ, ಅಂಧ, ಅನಾಥ, ಕಡುಬಡತನದಲ್ಲಿ ಬಳಲುತ್ತಿರುವ ನಿರ್ಲಕ್ಷಿತ ಜನರ ಹೊಟ್ಟೆ ತುಂಬಿಸುವ ಈ ತವನಿಧಿಯ ಅನ್ನದಾಸೋಹ ಸೇವೆ ನಿರಂತರವಾಗಿ ನಡೆಯಲಿ. ಸಮಾಜದ ಪ್ರತಿಯೊಬ್ಬರೂ ಇಂತಹ ಅನ್ನ ದಾಸೋಹದ ಪವಿತ್ರ ಕಾರ್ಯಕ್ಕೆ ಸದಾ ಸಹಾಯ, ಸಹಕಾರ ನೀಡಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಎಸ್.ಎಸ್.ನಾಯನೇಗಲಿ ಮಾತನಾಡಿ, ತವನಿಧಿಯ ಮೂಲಕ ಬಡವರ, ನಿರ್ಗತಿರು, ತುಳಿತಕ್ಕೆ ಒಳಗಾದವರಿಗೆ ಹಸಿವು ನೀಗಿಸುತ್ತಿರುವ ಗುರುಸಿದ್ದೆÃಶ್ವರ ಮಠದ ಕಾರ್ಯ ಶ್ಲಾಘನೀಯ. ಹಸಿದ ವೃದ್ಧ, ಅನಾಥ ಜನರು ಶ್ರಿÃಮಠದಲ್ಲಿನ ಈ ತವನಿಧಿಯ ಪ್ರಸಾದ ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ತವನಿಧಿ ದಾಸೋಹ ಯೋಜನೆಯ ಅಧ್ಯಕ್ಷ ಸಂಗನಬಸಪ್ಪ ಚಿಂದಿ, ಸಂಗಪ್ಪ ಜವಳಿ, ಬಿ.ಎ. ತೆಲಸಂಗ, ಎಸ್.ಎಸ್. ಕಲ್ಯಾಣಿ, ಆನಂದ ತಿಪ್ಪಾ, ಸಿದ್ದಬಸಪ್ಪ ಕೆಲೂಡಿ, ಚಂದ್ರಶೇಖರ ತಿಪ್ಪಾಗೌಡ್ರ, ಈರಣ್ಣ ಶೇಖಾ, ಶೇಖಣ್ಣ ಅರೂಟಗಿ, ರಮೇಶ ಲಾಳ, ಸೋಮು ಕಲಬುರ್ಗಿ, ಸರಿತಾ ಚಂದನ್ನವರ ಮತ್ತಿತರರು ಇದ್ದರು.

loading...