ಹಾಸನದಲ್ಲಿ ಸಿಎಂ ಕುಮಾರಸ್ವಾಮಿ ಟೆಂಪಲ್ ರನ್

0
7
loading...

ಬೆಂಗಳೂರು: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕುಟುಂಬ ಸಮೇತರಾಗಿ ತವರು ಜಿಲ್ಲೆ ಹಾಸನಕ್ಕೆ ಸಿಎಂ ಕುಮಾರಸ್ವಾಮಿ ಆಗಮಿಸಿದ್ದು, ಹುಟ್ಟೂರಿನ ಈಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶೃಂಗೇರಿಯಿಂದ ಬಂದ ಏಳುಮಂದಿ ಪುರೋಹಿತರುಗಳಿಂದ ಈ ವಿಶೇಷ ಪೂಜೆ ನಡೆಯುತ್ತಿದ್ದು ಸಿಎಂ ಕುಟುಂಬ ಸಮೇತರಾಗಿ ಭಾಗಿಯಾಗಿದ್ದಾರೆ. ಈ ವಿಶೇಷ ಪೂಜೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಪತ್ನಿ ಚನ್ನಮ್ಮ ದೇವೇಗೌಡ, ಸಹೋದರ ರೇವಣ್ಣ, ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ ಕೂಡಾ ಉಪಸ್ಥಿತರಿದ್ದರು.
ಇತ್ತ ತವರಿಗೆ ಬಂದ ಕುಮಾರಸ್ವಾಮಿಯನ್ನು ನೋಡಲು ಜಿಟಿ ಜಿಟಿ ಮಳೆಯ ನಡುವೆಯೇ ಅಭಿಮಾನಿಗಳು ಆಗಮಿಸಿದ್ದರು. ಇದೇ ವೇಳೆ ಬಾಗೂರು ನವಿಲೆ ಸುರಂಗ ಹೋರಾಟಗಾರರರು ಸ್ಥಳಕ್ಕೆ ಆಗಮಿಸಿದ್ದು, ರಕ್ತದಲ್ಲಿ ಬರೆದಿರುವ ಪತ್ರವನ್ನು ಕುಮಾರಸ್ವಾಮಿಗೆ ನೀಡಲು ಕಾಯುತ್ತಿದ್ದಾರೆ. ಅಲ್ಲದೆ, ಜಿಟಿ ಜಿಟಿ ಮಳೆಯಲ್ಲಿ ನಾಡಿನ ದೊರೆ ಹೆಚ್.ಡಿ ಕುಮಾರಸ್ವಾಮಿ ಅವರನ್ನ ನೋಡಲು ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ.
ಇನ್ನು ಹೊಳೆ ನರಸೀಪುರದ ಲಕ್ಷ್ಮೀನರಸಿಂಹ ದೇಗುಲಕ್ಕೆ ಭೇಟಿ ನೀಡಿ ಅಲ್ಲಿಯೂ ಪೂಜೆ ಸಲ್ಲಿಸಿರುವ ಸಿಎಂಹೆಚ್.ಡಿ ಕುಮಾರಸ್ವಾಮಿ ಮಧ್ಯಾಹ್ನ ನಂತರ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

loading...