ಹುನಗುಂದ ಪುರಸಭೆ 75.87% ಶಾಂತಿಯುತ ಮತದಾನ

0
0
loading...

ಹುನಗುಂದ; ಪಟ್ಟಣದ ಪುರಸಭೆಯ 23 ವಾರ್ಡಗಳಲ್ಲಿ ಶುಕ್ರವಾರ ನಡೆದ ಚುನಾವಣೆ ಶಾಂತಿಯುತ ಶೇ. 75.87% ಮತದಾನ ನಡೆಯಿತು ಎಂದು ಚುನಾವಣೆ ಅಧಿಕಾರಿ ಸುಭಾಸ ಸಂಪಗಾವಿ ತಿಳಿಸಿದ್ದಾರೆ.
ಪುರಸಭೆಯ 23 ವಾರ್ಡಗಳ 60 ಅಭ್ಯರ್ಥಿಗಳ ಭವಿಷ್ಯವು ಮತಯಂತ್ರದಲ್ಲಿ ಭದ್ರವಾಗಿದ್ದು. ಇದರ ಸ್ಪಷ್ಟ ಚಿತ್ರಣ ಸೋಮವಾರ ತಿಳಿಯಲಿದೆ. ಮತದಾನದಲ್ಲಿ ವೃದ್ಧರು ಮಹಿಳೆಯರು,ಅಂಗವಿಕಲರು ವೀಲ್‌ ಚೇರನಲ್ಲಿ ಉತ್ಸುಕತೆಯಿಂದ ಮತಗಟ್ಟೆಗೆ ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು. ಬೆಳಿಗ್ಗೆಯಿಂದ ಮತಗಟ್ಟೆ ಬಳಿ ಅಭ್ಯರ್ಥಿಗಳು ಕೈ ಮುಗಿದು ಮತಯಾಚಿಸುವ ದೃಶ್ಯ ಕಂಡು ಬಂದಿತು. ಸಣ್ಣ ಪುಟ್ಟ ಗಲಾಟೆ ಹೊರತು ಪಡಿಸಿ ವಿದ್ಯಾನಗರ,ಕೇಂದ್ರ ಶಾಲೆ,ಕೆಇಬಿ, ತಾಲ್ಲೂಕ ಪಂಚಾಯಿತಿ, ಬಿ.ಆರ್‌.ಸಿ ಕೇಂದ್ರ, ವಿ.ಮ.ಪ್ರೌಢ ಶಾಲೆ,ಬಾಬು ಜಗಜೀವನರಾಮ್‌ ನಗರ, ಸೇರಿದಂತೆ ಎಲ್ಲಾ ವಾರ್ಡಗಳಲ್ಲಿ ಶಾಂತಿಯುತ ಮತದಾನ ನಡೆಯಿತು.

loading...