ಹುಲಕುಂದ ಗ್ರಾ.ಪಂ ಪಿಡಿಓ ನೇಮಕ ಮಾಡುವಂತೆ ಒತ್ತಾಯಿಸಿ ಮನವಿ

0
5
loading...

ಹುಲಕುಂದ ಗ್ರಾ.ಪಂ ಪಿಡಿಓ ನೇಮಕ ಮಾಡುವಂತೆ ಒತ್ತಾಯಿಸಿ ಮನವಿ
ಕನ್ನಡಮ್ಮ ಸುದ್ದಿ-ರಾಮದುರ್ಗಃ ಹುಲಕುಂದ ಗ್ರಾಮ ಪಂಚಾಯತ ಮೂರು ವರ್ಷಗಳಿಂದ ಪಂಚಾಯತ ಅಭಿವೃದ್ದಿ ಅಧಿಕಾರಿ ಇಲ್ಲದ ಕಾರಣ ಗ್ರಾಮದ ಅಭಿವೃದ್ದಿ ಕೆಲಸ ಕಾರ್ಯಗಳಿಗೆ ತುಂಬಾ ತೊಂದರೆಯಾಗುತ್ತಿದೆ ಆದ್ದರಿಂದ ತಾಲೂಕಾ ಅಭಿವೃದ್ದಿ ಆಧಿಕಾರಿ ಪಿಡಿಓ ನೇಮಕ ಮಾಡಿಕೊಡಬೇಕು ಆಗ್ರಹಿಸಿ ಗ್ರಾಮ ಪಂಚಾಯತ ಸದಸ್ಯರು ಮನವಿ ಸಲ್ಲಿಸಿದರು.
ತಾಲೂಕಿನ ಹುಲಕುಂದ ಗ್ರಾಮ ಪಂಚಾಯತಿಯಲ್ಲಿ ಪಿಡಿಓ ನೇಮಕ ಮಾಡಬೇಕು ಕಳೆದ ಮೂರು ವರ್ಷಗಳಿಂದ ಅಭಿವೃದ್ದಿ ಅಧಿಕಾರಿ ಸರಿಯಾಗಿ ಬರುತ್ತಿಲ್ಲ ಒಬ್ಬ ಪಿಡಿಓ ಎರಡು ಪಂಚಾಯತ ಕಾರ್ಯನಿರ್ವಹಿಸುತ್ತಿದ್ದು ಹುಲುಕುಂದ ಗ್ರಾಮ ಪಂಚಾಯತಿಗೆ ಸರಿಯಾಗಿ ಬರುತ್ತಿಲ್ಲಿ. ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗೆ ಅನೇಕ ಬಾರಿ ತಿಳಿಸಿದರು ಪಿಡಿಓ ಅವರನ್ನು ನೇಮಕಮಾಡುತ್ತಿಲ್ಲ. ನಮಗೆ ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದು ಆರೋಪಿಸಿದರು
ಗ್ರಾಮದ ಅಭಿವೃದ್ದಿಗೆ ಸರಿಯಾಗಿ ಅನುದಾನ ಬಳಕೆ ಯಾಗದ ಕಾರಣ ಗ್ರಾಮದ ಅಭಿವೃದ್ದಿಗೆ ತುಂಬಾ ತೊಂದರೆ ಯಾಗುತ್ತಿದೆ ಶೀಘ್ರವಾಗಿ ಹುಲಕುಂದ ಗ್ರಾಮ ಪಂಚಾಯತಿಗೆ ಪೂರ್ಣ ಪ್ರಮಾಣ ಇರುವಂತೆ ಪಿಡಿಓ ನೇಮಕ ಮಾಡಿ ಕೊಡಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ. ಆಗ್ರಹಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಶಾಂತವ್ವ ನಿಗಂರಡ್ಡಿ,ಉಪಾಧ್ಯಕ್ಷ ರಮೇಶ ಮೊಶನ್ನವರ,ವೆಂಕಟೇಶ ಪಾಟೀಲ,ಸುರೇಶ ಹ, ಹೊಸೂರ, ಬಾಗಪ್ಪ ಪುಲಗಡ್ಡಿ, ಪುಷ್ಪಾವತಿ ವಿ.ಬಾರ್ಕಿ,ಮಹಾದೇವಿ ಬೆಳ್ಳೆವರಿ, ಬಸವ್ವಾ ಮೇತ್ರಿ, ರಾಮವ್ವ ಗುದಗೊಳ,ಪದ್ಮವ್ವ ಬೂದಿ ಸೇರಿದಂತೆ ಮುಂತಾದವರು ಪುಸ್ಥಿತರಿದ್ದರು.

loading...