ಹೆಚ್ಚುವರಿ ಶಿಕ್ಷಕರ ಪಟ್ಟಿ ಲೋಪ-ದೋಷ ಸರಿಪಡಿಸಲು ಆಗ್ರಹಿಸಿ ಮನವಿ

0
8
loading...

ಬಸವನಬಾಗೇವಾಡಿ: 2018-19ನೇ ಸಾಲಿನ ಹೆಚ್ಚುವರಿ ಪ್ರಾಥಮಿಕ ಶಾಲಾ ಶಿಕ್ಷಕರ ಪಟ್ಟಿಯಲ್ಲಿನ ಲೋಪ-ದೋಷಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಸರಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಬಿಇಓ ಮಂಜುನಾಥ ಗುಳೇದಗುಡ್ಡ ಅವರಿಗೆ ಮನವಿ ಸಲ್ಲಿಸಿದರು.
ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿ ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ ಪಟ್ಟಿಯನ್ನು ಸಿದ್ದಪಡಿಸುತ್ತಿದ್ದು ಇಲಾಖೆ ಆದೇಶ ಪ್ರಕಾರ ಶಿಕ್ಷಕರ ಸಂಘದ ಚುನಾಯಿತ ಪ್ರತಿನಿಧಿಗಳು ಹಾಗೂ ವಿಧವೆ, ಕುಮಾರಿಯರನ್ನು ಹೆಚ್ಚುವರಿ ಶಿಕ್ಷಕರ ಪಟ್ಟಿಯಿಂದ ಕೈಬಿಡಬೇಕೆಂದು ನಿರ್ದೇಶನವಿದ್ದರೂ ಆದರೇ ಹೆಚ್ಚುವರಿ ಶಿಕ್ಷಕರ ಪಟ್ಟಿ ಸಿದ್ದಪಡಿಸಲಾಗಿದೆ, ಸಂಘಕ್ಕೆ ನಾಮನಿರ್ದೆಶನಗೊಂಡ ಶಿಕ್ಷಕರನ್ನು ಸೇರಿಸುತ್ತಿದ್ದರೆ ಎಲ್ಲ ಸಂಘಟನೆಗಳನ್ನು ಒಳಪಡಿಸಲಿ ಆದರೇ ಒಂದೇ ಸಂಘಕ್ಕೆ ಸಿಮೀತಪಡಿಸಬಾರದು ಎಂದು ಆಗ್ರಹಿಸಿದರು.
ಹೆಚ್ಚುವರಿ ಶಿಕ್ಷಕರ ಪಟ್ಟಿ ಸಿದ್ದಪಡಿಸಿದ್ದು ಆದರೇ ಖಾಲಿ ಇರುವ ಸ್ಥಳಗಳನ್ನು ವಿವರಣೆ ಮಾಡಿಲ್ಲ ಹಾಗೂ ಆಕ್ಷೇಪಣೆ ಸಲ್ಲಿಕೆ ಕೇಲವೆ ಗಂಟೆಗಳನ್ನು ನಿಗಧಿಪಡಿಸಿದ್ದು ಆಕ್ಷೇಪಣೆ ಸಲ್ಲಿಸಿದ ಶಿಕ್ಷಕರಿಗೆ ಸಮಂಜಸವಾದ ಮಾಹಿತಿಯ ಉತ್ತರ ನೀಡದೇ ಇರುವದು ಸರಿಯಾದ ಕ್ರಮವಲ್ಲ ಅಲ್ಲದೆ ಭಾನುವಾರ ರಜೆ ದಿನವೇ ಕೌನ್ಸಲಿಂಗ ನಿಗಧಿಪಡಿಸಿದ್ದು ಸೂಕ್ತವಲ್ಲ ಅಧಿಕಾರಿಗಳು ಇಲಾಖೆಗಳ ನಿರ್ದೇಶನಗಳನ್ನು ಮರೆತು ಚುನಾಯಿತ ಶಿಕ್ಷಕ ಸಂಘಟನೆ ಪದಾಧಿಕಾರಿಗಳನ್ನು ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದು ಸೇರಿದಂತೆ ಹೆಚ್ಚುವರಿ ಶಿಕ್ಷಕರ ಪಟ್ಟಿ ಸಮಂಜಸವಾಗಿಲ್ಲ ಕೂಡಲೇ ಲೋಪದೋಷಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೊನ್ನಪ್ಪ ಗೊಳಸಂಗಿ, ಎಚ್‌.ಬಿ.ಬಾರಿಕಾಯಿ, ಉಮೇಶ ಕೌಲಗಿ, ರಫೀಕ್‌ ಬಾಗವಾನ, ಎಚ್‌.ಬಿ.ಗೋಡೆ, ಡಿ.ಡಿ.ಪಾಟೀಲ, ಬಿ.ಎಸ್‌.ಮುತ್ತಗಿ, ಚಿದಾನಂದ ಹೂಗಾರ, ಸಿದ್ದು ಉಕ್ಕಲಿ, ಪಿ.ಎಸ್‌.ಬಿರಾದಾರ ಸೇರಿದಂತೆ ಶಿಕ್ಷಕರ ಸಂಘಟನೆ ಪದಾಧಿಕಾರಿಗಳು ಇದ್ದರು.

loading...