ಹೈದ್ರ್ರಾಬಾದ್‌ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ

0
11
loading...

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಹೈದ್ರ್ರಾಬಾದ್‌ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಗುರುವಾರ ಕರ್ನಾಟಕ ಜನಕಲ್ಯಾಣ ವೇದಿಕೆಯ ಪದಾಧಿಕಾರಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಬಳಿಕ ತಹಸೀಲ ಕಚೇರಿಗೆ ತೆರಳಿ ತಹಸೀಲ್ದಾರ ರಮೇಶ ಅಳವಂಡಿಕರ್‌ ಮೂಲಕ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ಜನಕಲ್ಯಾಣ ವೇದಿಕೆಯ ರಾಜ್ಯ ಯುವ ಘಟಕಾಧ್ಯಕ್ಷ ಸಶರಣಪ್ಪ ಪಾಟೀಲ್‌ ಮಾತನಾಡಿ, ಮೈಸೂರ ಕರ್ನಾಟಕ ಮತ್ತು ಉತ್ತರ ಕನಾಟಕಗಳು ಸಾಕಷ್ಟು ಅಭಿವೃದ್ದಿ ಹೊಂದಿದ್ದರು ಆ ಭಾಗಗಳಿಗೆ ಜನಪ್ರತಿನಿಧಿಗಳು ಮತ್ತು ನಮ್ಮನ್ನು ಆಳುವ ಸರಕಾರಗಳು ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿದ್ದಾರ. ಹೈದ್ರಾಬಾದ್‌ ಕರ್ನಾಟಕ ಪ್ರದೇಶವನ್ನು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಾ ಬರಲಾಗಿದೆ. ಈ ವಿರೋಧ ನೀತಿಯ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಕೂಡಲೇ ರಾಜ್ಯ ಸರಕಾರ ಹೈದ್ರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಜನಕಲ್ಯಾಣ ವೇದಿಕೆಯಿಂದ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುÀದು ಎಂದು ಎಚ್ಚರಿಸಿದರು.
ರಾಜ್ಯ ಜನಕಲ್ಯಾಣ ವೇದಿಕೆಯ ಸಂಘಟನಾ ಕಾರ್ಯದರ್ಶಿ ಸರಣಬಸಪ್ಪ ದಾನಕೈ, ಕೊಪ್ಪಳ ಜಿಲ್ಲಾಧ್ಯಕ್ಷ ದೇವಪ್ಪ ಮೆಣಸಗಿ, ಶಿವಕುಮಾರ ನಿಡಗುಂದಿ, ಮಹಾಂತಪ್ಪ ಗುತ್ತೂರ, ರಂಗನಾಥ ಕಮ್ಮಾರ, ಚನ್ನಬಸಪ್ಪ ಇಟಗಿ, ಉಮೇಶ ಕುಕನೂರ, ರವಿ ಭಜಂತ್ರಿ, ನಾಗರಾಜ ಎಸ್‌, ಶರಣಪ್ಪ ಎಮ್ಮಿ, ಸುನೀಲ, ವೀರಪಯ್ಯ ವಣಗೇರಿ, ಹುಸೇನ ಚೆನ್ನಿಹಾಳ, ಬಸಯ್ಯ ಮೆತಗಲ್‌, ಗೋವಿಂದಪ್ಪ ಕಟಗಿ, ಹನಮಂತ ತಳವಾರ ಇದ್ದರು.

loading...