೨೩ ವಾರ್ಡ್ಗೆ ೧೨೪ ನಾಮಪತ್ರ ಸಲ್ಲಿಕೆ

0
7
loading...

ಕನ್ನಡಮ್ಮ ಸುದ್ದಿ-ತೇರದಾಳ: ತೇರದಾಳ ಪುರಸಭೆಯ ೨೩ ವಾರ್ಡ್ಗಳಿಗೆ ಸ್ಪರ್ಧಿಸಲು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೆÃತರರು ಪುರಸಭೆಯಲ್ಲಿ ಕೊನೆಯ ದಿನವಾದ ಶನಿವಾರ ಸರದಿಯಲ್ಲಿ ನಿಂತು ನಾಮಪತ್ರ ಸಲ್ಲಿಸಿದರು.
೨೩ ವಾರ್ಡ್ಗಳಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಹಾಗೂ ಪಕ್ಷೆÃತರರು ಸೇರಿ ಒಟ್ಟು ೧೨೪ ನಾಮಪತ್ರ ಸಲ್ಲಿಕೆಯಾದವು. ಪಟ್ಟಣದಲ್ಲಿ ಮೊದಲ ಬಾರಿಗೆ ಇಷ್ಟೊಂದು ನಾಮಪತ್ರ ಸಲ್ಲಿಕೆ ಆಗುವ ಮೂಲಕ ಹೊಸದೊಂದು ಇತಿಹಾಸ ಬರೆಯುವ ಚುನಾವಣೆಯಾಯಿತು. ನಾಮಪತ್ರ ಸಲ್ಲಿಸಲು ಅಂತಿಮ ದಿನ ಆಗಿದ್ದರಿಂದ ಚುನಾವಣಾಧಿಕಾರಿಗಳು ಪುರಸಭೆಗೆ ಆಗಮಿಸುವ ಮೊದಲೇ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಪುರಸಭೆ ಆವರಣದಲ್ಲಿ ಬೀಡು ಬಿಟ್ಟಿದ್ದರು. ಅಧಿಕಾರಿಗಳು ಆಗಮಿಸುತ್ತಿದ್ದಂತೆ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಕ್ಯೂ ನಲ್ಲಿ ನಿಂತು ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಕುತೂಹಲಕಾರಿ ದಿನ-ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಪರವಾಗಿ ಸ್ಪರ್ಧಿಸಲು ತಯಾರಾಗಿದ್ದ ಅಭ್ಯರ್ಥಿಗಳು ಸಾಕಷ್ಟು ಸಮಯ ಆಗಿದ್ದರು ಕೂಡ ಪಕ್ಷದ ಬಿ-ಪಾರಂ ನೀಡಿರಲಿಲ್ಲ. ಇದರಿಂದ ಸಾಕಷ್ಟು ಕುತೂಹಲದಲ್ಲಿ ತೊಡಗಿದ್ದ ಆಕಾಂಕ್ಷಿಗಳ ಎದೆಯಲ್ಲಿ ಢವ ಢವ ಶುರುವಾಗಿತ್ತು.
ಪ್ರತಿ ವಾರ್ಡ್ಗೆ ನಾಲ್ಕೆöÊದು ಆಕಾಂಕ್ಷಿಗಳು ಇದ್ದಿದ್ದರಿಂದ ಯಾರಿಗೆ ಬಿ-ಪಾರಂ ನೀಡಬೇಕು ಎನ್ನುವ ಗೊಂದಲ ಆಯಾ ಪಕ್ಷಗಳ ಮುಖಂಡರಲ್ಲಿ ತೊಡಗಿತ್ತು. ಅಚ್ಚರಿ ಮೂಡಿಸಿದ ಉಮಾಶ್ರಿÃ ಭೇಟಿ-ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮಾಜಿ ಸಚಿವೆ ಉಮಾಶ್ರಿÃ ಖುದ್ದು ಅವರೇ ಆಗಮಿಸಿ ಚುನಾವಣಾಧಿಕಾರಿಗಳಿಗೆ ಆಯಾ ವಾರ್ಡ್ಗಳ ಅಭ್ಯರ್ಥಿಗಳ ಬಿ-ಪಾರಂ ನೀಡುವ ಮೂಲಕ ಅಚ್ಚರಿ ಮೂಡಿಸಿದರು. ಕಾಂಗ್ರೆಸ್‌ನಲ್ಲಿಯೂ ಕೂಡ ಬಿ-ಪಾರಂಗಾಗಿ ಸಾಕಷ್ಟು ಲಾಬಿ ನಡೆಸಿದ್ದರು ಕೂಡ ಉಮಾಶ್ರಿÃ ಅವರ ಸೂಚನೆ ಮುಂದೆ ಯಾವುದು ಭಿನ್ನಾಭಿಪ್ರಾಯದ ಮಾತುಗಳು ಕೇಳಿ ಬರಲಿಲ್ಲ.

ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ವಾಧ್ಯಮೇಳಗಳೊಂದಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಇನ್ನು ಕೆಲವರು ದೇವರ ಮೊರೆ ಹೋಗಿ ಪೂಜೆ ನೆರವೇರಿಸಿ ಬಂದರೆ, ಇನ್ನು ಕೆಲವರು ಶುಭ ಗಳಿಗೆ ನೋಡಿಕೊಂಡು ನಾಮಪತ್ರ ಸಲ್ಲಿಸಲು ಬಂದಿದ್ದರು. ಬೆಳಗ್ಗೆಯಿಂದ ಸಂಜೆ ತನಕ ಪುರಸಭೆ ಆವರಣ ಹಾಗೂ ಪಕ್ಕದ ಬಸ್ ನಿಲ್ದಾಣ ಜನ ಜಂಗುಳಿಂಯಿಂದ ಕೂಡಿತ್ತು. ಮುಂಜಾಗ್ರತವಾಗಿ ಪೊಲೀಸ್ ಸಿಬ್ಬಂದಿ ಅಗತ್ಯ ಬಂದೋಬಸ್ತ್ ಕೈಗೊಂಡಿದ್ದರು.

loading...