15 ದಿನಗಳಲ್ಲಿ ಮೈತ್ರಿ ಸರಕಾರ ಪಲ್ಟಿ: ಸಂಸದ ಅಂಗಡಿ ಭವಿಷ್ಯ

0
45
loading...

15 ದಿನಗಳಲ್ಲಿ ಮೈತ್ರಿ ಸರಕಾರ ಪಲ್ಟಿ: ಸಂಸದ ಅಂಗಡಿ ಭವಿಷ್ಯ

ಕನ್ನಡಮ್ಮ ಸುದ್ದಿ ಬೆಳಗಾವಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒತ್ತಡಕ್ಕೆ ಮದುವೆಯಾಗಿವೆ ಬಹಳ ದಿನ ಈ ಸರಕಾರ ಉಳಿಯುದಿಲ್ಲ ಈಗಾಗಲೇ ಎರಡು ಪಕ್ಷಗಳ ನಡುವೆ ಹಗ್ಗಜಗಾಟ್ಟ ನಡೆದಿದೆ. ಇನ್ನೂ 15 ದಿನಗಳಲ್ಲಿ ಮೈತ್ರಿ ಸರಕಾರ ಉರುಳುತ್ತೆ ಎಂದು ಸಂಸದ ಸುರೇಶ ಅಂಗಡಿ ಭವಿಷ್ಯ ನೀಡಿದ್ದಾರೆ.
ಸ್ಥಳೀಯ ರಾಣಿ ಚನ್ನಮ್ಮ ವೃತ್ತದ ಬಳಿಯಲ್ಲಿ ದಿ.ಆಟಲ್ ಬಿಹಾರಿ ವಾಜಪೇಯಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ನೆರವೆರಿಸಿ ಮಾತನಾಡಿದ ಅವರು.
ಸಿದ್ದರಾಮಯ್ಯ ಕುಮಾರಸ್ವಾಮಿ ಒತ್ತಡಕ್ಕೆ ಮದುವೆಯಾದರಿಂದ ರಾಜ್ಯದಲ್ಲಿ ಯಾವ ಕೆಲಸ ಆಗುತ್ತಿಲ್ಲ .ಸೀತಾರಾಮ ಅವರು ಎಸ್ ಸಿ ಒಬ್ಬ ದಲಿತ ನಾಯಕರು ಅವರಿಗೆ ಸಹ ಪಕ್ಷದ ಅಧ್ಯಕ್ಷ ಸ್ಥಾನ ನೀಡಿದ ಸರಕಾರ ದೇವೇಗೌಡರಿಗೂ ಮೋಸ ಮಾಡಿದ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡಲ್ಲ ಕಾಂಗ್ರೆಸನಲ್ಲಿ ಸಿದ್ಧರಾಮಯ್ಯನವರು ಚಾಪೆಯನ್ನು ಜಗ್ಗುವ ಕೆಲಸ ಮಾಡುತ್ತಿದ್ದಾರೆ ಎಂದರು.

loading...