15 ವರ್ಷ ಗತಿಸಿದರು ನಿರ್ಮಾಣವಾಗದ ವೀರಯೋಧ ಮಹ್ಮದ ಶಬ್ಬೀರ ಅಂಗಡಿ ಸ್ಮಾರಕ

0
17
loading...

ಎ.ಎಚ್.ಖಾಜಿ
ಶಿರಹಟ್ಟಿ: ಪ್ರಾಣ ಮುಡಿಪಾಗಿಟ್ಟು ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಯೋಧನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ದೇಶಕ್ಕಾಗಿ ಹೋರಾಡಿ ಮಡಿದ ಶಿರಹಟ್ಟಿ ಪಟ್ಟಣದ ವೀರಯೋಧ ಮಹ್ಮದಶಬ್ಬೀರ ಅಂಗಡಿ ರವರ ಸ್ಮಾರಕ ನಿರ್ಮಿಸಲು ಜಿಲ್ಲಾಡಳಿತಕ್ಕೆ ಸಮಯ-ಪರಿವೆಯೇ ಇಲ್ಲ. ಜೊತೆಗೆ ನಿರ್ಲಕ್ಷ್ಯ ಮನೆಮಾಡಿದೆ ಎಂಬುದಕ್ಕೆ ವೀರಯೋಧ ಮಹ್ಮದಶಬ್ಬೀರ ಅಂಗಡಿ ರವರ ಕುಟುಂಬದವರ ಹಿಂದಿನ ಮನಕಲಕುವ ಕಥೆಯಿದು.

ಅ. 2002 ರಲ್ಲಿ ಓರಿಸ್ಸಾ ರಾಜ್ಯದ ರಾಯಘಡ ಜಿಲ್ಲೆಯ ಗಥಾಲಪಧರ ಗ್ರಾಮದ ಬಳಿ ದೇಶ ರಕ್ಷಣೆಯ ಕಾರ್ಯದಲ್ಲಿ ನಿರತರಾಗಿದ್ದಾಗ ಶಂಕಿತ ನಕ್ಸಲಿಯರ ನೆಲಬಾಂಬ ಸ್ಪೋಟಕ್ಕೆ ಬಲಿಯಾಗಿದ್ದ,
ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ತಿರುಗಿ ನೋಡಿಲ್ಲ. ವೀರಯೋಧ ಮಗನನ್ನು ಕಳೆದುಕೊಂಡ ತಂದೆ-ತಾಯಿಯವರಿಗೆ ಸೇನಾ ಇಲಾಖೆಯಿಂದ ಮಗನಿಗೆ ಬರಬೇಕಾದ ಎಲ್ಲ ಹಣ ಬಂದು ತಲುಪಿ ವರ್ಷಗಳೇ ಗತಿಸಿದರು ಮಹ್ಮದ ಶಬ್ಬೀರ ಮೃತನಾದಾಗ ಪಟ್ಟಣದ ಅವರ ಮನೆಯವರಿಗೆ ಭರವಸೆಗಳ ಸುರಿಮಳೆಯನ್ನೇ ನೀಡಿದ್ದ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಮತ್ತೇ ಆ ವಿಷಯದ ಬಗ್ಗೆ ಇಂದಿನವರೆಗೂ ಚಕಾರವೆತ್ತಿಲ್ಲ. ಗದಗ ಜಿಲ್ಲೆಯ ವೀರಪುತ್ರ ದೇಶ ರಕ್ಷಣೆಯ ಕಾರ್ಯದಲ್ಲಿ ನಿರತರಾಗಿದ್ದಾಗ ಶಂಕಿತ ನಕ್ಸಲಿಯರ ನೆಲಬಾಂಬ ಸ್ಪೋಟಕ್ಕೆ ಸಾವನ್ನಪ್ಪುವ ಮೂಲಕ ದೇಶ ಹಾಗೂ ಜಿಲ್ಲೆಗೆ ಗೌರವ ತಂದಿದ್ದಾನೆಂಬುದನ್ನು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಮೆರತಂತಿದೆ. ಆತನ ಕುಟುಂಬವನ್ನೇ ಅಲ್ಲದೆ ವೀರಯೋಧನನ್ನು ಮರೆತಿದ್ದು, ಯೋಧನ ಸ್ಮಾರಕ ನಿರ್ಮಾಣಕ್ಕೆ ದಿವ್ಯ ನಿರ್ಲಕ್ಷ್ಯ ತಾಳಿವೆ.

ಹುಸಿ ಭರವಸೆಗಳು-ಶಿರಹಟ್ಟಿ ತಾಲೂಕಿನ ಎಲ್ಲ ಜನಪ್ರತಿನಿಧಿಗಳು ವೀರಯೋಧನ ಕಳೇಬರ ಶಿರಹಟ್ಟಿ ಪಟ್ಟಣಕ್ಕೆ ಬಂದಾಗ ಭರವಸೇ ನೀಡಿದ್ದೇ ಬಂತು ಮತ್ತೇ ಅತ್ತ ಹೊರಳಿ ನೋಡಿಲ್ಲ. ಯಾವೊಬ್ಬ ಜನಪ್ರತಿನಿಧಿಗಳಿಂದಾಗಲಿ ಇಲ್ಲವೇ ಜಿಲ್ಲಾಡಳಿತ, ತಾಲೂಕಾಡಳಿತದಿಂದ ನೆರವು ಹರಿದು ಬಂದಿಲ್ಲ ಎಂಬುದು ಕುಟುಂಬದ ಅಳಲು.
ವೀರಯೋಧ ಮಹ್ಮದ ಶಬ್ಬೀರ ಕುಟುಂಬಕ್ಕೆ ಸರಕಾರ ವತಿಯಿಂದ ಎರಡು ಎಕರೆ ಭೂಮಿ ನೀಡಿರುವುದು ಹಾಗೂ ನಾಮಫಲಕ ಬಿಟ್ಟರೇ ಬೇರೆನಿಲ್ಲ. ವೀರಯೋಧ ಮಹ್ಮದ ಶಬ್ಬೀರ ಕುಟುಂಬಕ್ಕೆ ಸರಕಾರದ ವತಿಯಿಂದ ಎರಡು ಎಕರೆ ಭೂಮಿ ಹಾಗೂ ಆತನ ಗೆಳೆಯರ ಬಳಗದವರೆಲ್ಲ ಸೇರಿ ಪಟ್ಟಣದಲ್ಲಿ ಆತನ ಕುಟುಂಬದವರು ವಾಸಿಸುವ ಬಡಾವಣೆಗೆ ಮಹ್ಮದ್ ಶಬ್ಬೀರ ನಗರ ಎಂದು ನಾಮಕರಣ ಮಾಡಿ ಮುಖ್ಯ ಸಂಚಾರ ರಸ್ತೆಗೆ ಹೊಂದಿಕೊಂಡಂತೆ ಒಂದು ನಾಮಫಲಕ ನಿಲ್ಲಿಸಿ ಬೇರೆಡೆಯಿಂದ ಪಟ್ಟಣಕ್ಕಾಗಮಿಸುವ ಸಾರ್ವಜನಿಕರ ಗಮನಕ್ಕಾದರೂ ಬರಲಿ ಎಂಬ ಸದುದ್ದೇಶದಿಂದ ಫಲಕದಲ್ಲಿ ಅಮರ ವೀರಯೋಧ ಮಹ್ಮದ್ ಶಬ್ಬೀರ ನಗರ ಎಂಬ ಹೆಸರು ಕಾಣಿಸುವುದು ಬಿಟ್ಟರೇ ಆತನ ಗುರ್ತಿಗೆ ಬೇರೆ ಯಾವ ಸಂಕೇತಗಳು ಕಾಣ ಸಿಗುವುದಿಲ್ಲ. ಆದರೆ ಪ್ರತಿವರ್ಷ ಬರುವ ಹುತಾತ್ಮರ ದಿನಾಚರಣೆ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಮಾತ್ರ ವೀರ ಯೋಧನನ್ನು ನೆನಪಿಸಿ ಸೌಜನ್ಯಕ್ಕೆ ಆತನ ತಂದೆ-ತಾಯಿಗಳನ್ನು ಗೌರವಿಸುವ ವಾಡಿಕೆ ತಪ್ಪಿಲ್ಲ.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿರವರು ಸರಕಾರದಿಂದ ವೀರಯೋಧನ ಕುಟುಂಬಕ್ಕೆ ಎರಡು ಎಕರೆ ಭೂಮಿ ದೊರಕಿಸಿದಂತೆ ಈಗಿನ ಶಾಸಕ ರಾಮಣ್ಣ ಲಮಾಣಿ ಹಾಗೂ ಸ್ಥಳೀಯ ಸಂಸ್ಥೆ ಪ.ಪಂ.ಜನಪ್ರತಿನಿಧಿಗಳು ಇಚ್ಚಾಶಕ್ತಿ ತೋರಿ ಅದೇ ಶಬ್ಬೀರ ನಗರದ ಯಾವುದೋ ಸ್ಥಳದಲ್ಲಿ ಇಲ್ಲವೇ ನಿವೇಶನವುಳ್ಳ ಹೃದಯ ಶ್ರೀಮಂತಿಕೆ ದಾನಿಗಳ ಮೊರೆಹೊಕ್ಕು ವೀರಯೋಧನ ಸ್ಮಾರಕ ನಿರ್ಮಾಣಕ್ಕೆ ಮುಂದಾಗಬೇಕೆಂಬುದೇ ಪಟ್ಟಣದ ಜನತೆಯ ಕಳಕಳಿ.
ಮಗನ ನೆನಪು ಚಿರಾಯುವಾಗಲಿ. ಜಿಲ್ಲೆಗೆ ಕೀರ್ತಿ ತಂದು ಕೊಟ್ಟ ತಮ್ಮ ಮಗ ವೀರಯೋಧ ಮಹ್ಮದ ಶಬ್ಬೀರ ಈಗಿಲ್ಲ. ಆತನ ನೆನಪು ಚಿರಕಾಲ ಉಳಿಯಬೇಕಾದರೆ ಈಗಲಾದರೂ ಜಿಲ್ಲಾಡಳಿತ, ತಾಲೂಕಾಡಳಿತ ಎಚ್ಚೆತ್ತು ಅವನ ನೆನಪಿಗಾಗಿ ಸ್ಮಾರಕ ನಿರ್ಮಿಸಿದರೆ ಆತನ ನೆನಪು ಚಿರಕಾಲ ಉಳಿಯಲಿದೆ ಎಂಬುದು ವೀರಯೋಧ ಮಹ್ಮದ ಶಬ್ಬೀರನ ತಂದೆ ಗೂಡುಸಾಬ ಹಾಗೂ ತಾಯಿ ಜೈಬುನಿಸಾರವರ ವಿನಂತಿ ಪೂರ್ವಕ ಅಳಲು.

loading...