19ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದ ಬಂಗಾರದ ಬೆಲೆ

0
58
loading...

ನವದೆಹಲಿ/ಬೆಂಗಳೂರು:ಕಳೆದ 19ತಿಂಗಳಲ್ಲೇ ಬಂಗಾರದ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದಿದೆ.ಗುರುವಾರ ಬೆಳಗ್ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯಲ್ಲಿ ಸುಮಾರು 338 ರೂ.ಇಳಿಕೆ ಕಂಡು ಬಂದಿದೆ.
10 ಗ್ರಾಂ ಬಂಗಾರದ ಬೆಲೆಯಲ್ಲಿ 1.4ರಷ್ಟು ಇಳಿಕೆ ಕಂಡಿದ್ದು,10ಗ್ರಾಂ ಚಿನ್ನದ ಬೆಲೆ 29,397ರೂ.ಆಗಿದೆ.ಹಾಗೆ ಬೆಳ್ಳಿ ಬೆಲೆ ಸಹ ಭಾರಿ ಕುಸಿತ ಕಂಡು ಬಂದಿದೆ. ಕೆಜಿ ಬೆಳ್ಳಿಗೆ 1078 ರೂ.ಕಡಿಮೆ ಆಗಿದ್ದು, 36,721ಕ್ಕೆ ನಿಗದಿಯಾಗಿದೆ.
ಇದು ಬಂಗಾರದ ಖರೀದಿದಾರರಿಗೆ ಸಂತಸ ನೀಡಿದರೆ, ವ್ಯವಹಾರ ಮಾಡುವವರಿಗೆ ದೊಡ್ಡ ಹೊಡೆತ ನೀಡಿದೆ.ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಕುಸಿತ ಹಾಗೂ ಟರ್ಕಿಯಲ್ಲಿ ಆರ್ಥಿಕ ತಲ್ಲಣದಿಂದ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.ಚೀನಾ- ಅಮೆರಿಕ ನಡುವಣ ವ್ಯಾಪಾರ ಯುದ್ಧ ಮುಂದುವರೆದಿರುವುದು ಈ ಇಳಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

loading...