26 ರಂದು ಎಲ್ ಎಸ್.ಶಾಸ್ತ್ರಿ ಅವರ ಅಮೃತ ಮಹೋತ್ಸವ

0
15
loading...

26 ರಂದು ಎಲ್ ಎಸ್.ಶಾಸ್ತ್ರಿ ಅವರ ಅಮೃತ ಮಹೋತ್ಸವ
ಕನ್ನಡಮ್ಮ ಸುದ್ದಿ-ಬೆಳಗಾವಿ: ಸಂಸ್ಕೃತಿ ಸಾಹಿತ್ಯ,ಪತ್ರಿಕೆ, ಕಲೆ, ಸಂಘಟನಾ ನಿರಂತರ ಐವತ್ತೈದು ವರ್ಷಗಳಿಂದ ಚಟುವಟಿಕೆ ನಡೆಸುತ್ತ ಬಂದ ಹಿರಿಯ ಸಾಹಿತಿ,ಪತ್ರಕರ್ತ ಎಲ್ , ಎಸ್ ಶಾಸ್ತ್ರಿ ಅವರ 75 ನೇ ವರ್ಷದ ನಿಮಿತ್ತ ಅಮೃತ ಮಹೋತ್ಸವ ಅಭಿನಂದನ ಸಮಾರಂಭವನ್ನು ರವಿವಾರ 26 ರಂದು ಬೆಳಗಾವಿ ಹೊಸಕೋರ್ಟ ಆವರಣದ ನ್ಯಾಯಾವಾದಿಗಳ ಸಭಾಗೃಹದಲ್ಲಿ ಬೆ.10.30. ಆಯೋಜಿಸಲಾಗಿದೆ ಎಂದು ಡಾ.ಬಸವರಾಜ ಜಗಜಂಪಿ ಹೇಳಿದರು.
ಪತ್ರಿಗೋಷ್ಠಿಯಲ್ಲಿ ಮಾತನಾಡಿದ ಅವರು
ಒಂದು ದಿನದ ವರೆಗೆ ಈ ಕಾರ್ಯಕ್ರಮ ಜರುಗುವದು ಸಾಹಿತಿಗಳು , ಪೂಜ್ಯ ಮಹಾಸ್ವಾಮಿಗಳು,ಹಿರಿಯ ಪತ್ರಕರ್ತರು ಭಾಗವಹಿಸುವರು ಮತ್ತು ಹಿರಿಯ ಸಾಹಿತಿ ಶಾ.ಮಂ ಕೃಷ್ಣ ರಾಯರು ಸ್ಮರಣ ಸಂಚಿಕೆ ಶೃಂಗಾರ ಬಿಡುಗಡೆಗೊಳಿಸಲಿದ್ದಾರೆ.
ರಾಣಿ ಚನ್ನಮ್ಮ ಕುಲಪತಿ ಶಿವಾನಂದ ಹೊಸಮನಿ ಅವರು ಎಲ್ ಎಸ್ ಶಾಸ್ತ್ರಿಯವರ ” ಥೈ-ಲ್ಯಾಂಡ್ ಆಫ್ ಸ್ಮೈಲ್ಸ” ಮತ್ತು ” ಪುರೋಹಿತ ” ಕನ್ನಡ ಕೃತಿಯನ್ಮು ಬಿಡುಗಡೆ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ,ಪ್ರೊ ಎಂ.ಎಸ್.ಇಂಚಲ, ವಿ.ಎನ್ ಜೋಶಿ, ದೀಪಿಕಾ ಚಾಟೆ ಹಾಗೂ ಉಪಸ್ಥಿತರಿದ್ದರು.

loading...