374 ಅಭ್ಯರ್ಥಿಗಳು ಹಣೆಬರಹ ಮತಪೆಟ್ಟಿಗೆಯೊಳಗೆ ಭದ್ರ

0
0
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿಯ ನಾಲ್ಕು ಸ್ಥಳೀಯ ಸಂಸ್ಥೆಗಳ 103 ಸ್ಥಾನಗಳಿಗಾಗಿ ಶುಕ್ರವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ಶೇ. 70.06 ರಷ್ಟು ಮತದಾನವಾಗಿದೆ.
103ಸ್ಥಾನಗಳಿಗೆ 3784 ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಯೊಳಗೆ ಭದ್ರವಾಗಿದ್ದು, ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳ ಪೈಕಿ ವಾರ್ಡ್‌ ಸಂಖ್ಯೆ 19 ರಲ್ಲಿ ಕೇವಲ ಒಬ್ಬ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಈ ವಾರ್ಡ್‌ಗೆ ಅವಿರೋಧ ಆಯ್ಕೆಯಾಗಿದೆ. ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಶೇ. 66. 45, ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ- ಶೇ.67.62, ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಶೇ. 68.74, ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ- ಶೇ.77.44 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ಯಲಬುರ್ಗಾ ಪ.ಪಂ. ವ್ಯಾಪ್ತಿಯಲ್ಲಿ ಆಗಿದ್ದರೆ, ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಅತಿ ಕಡಿಮೆ ಮತದಾನವಾಗಿದೆ.
ಬೆಳಗ್ಗೆ 7 ಗಂಟೆಯಿಂದಲೇ ಪ್ರಾರಂಭಗೊಂಡ ಮತದಾನ, ಆರಂಭದಲ್ಲಿ ಮಂದಗತಿಯಿಂದ ಪ್ರಾರಂಭವಾದರೂ, ನಂತರದಲ್ಲಿ ವೇಗವನ್ನು ಪಡೆದುಕೊಂಡಿತು. ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣದಿಂದ, ಬೀಸುತ್ತಿದ್ದ ತಂಗಾಳಿ, ಮತದಾರರ ಮತದಾನದ ಉತ್ಸಾಹಕ್ಕೆ ಉತ್ತೇಜನ ನೀಡುವಂತಿತ್ತು. ಹವಾಗುಣ ಮತದಾನಕ್ಕೆ ಆಹ್ಲಾದಕರ ವಾತಾವರಣ ಸೃಷ್ಟಿಸಿತ್ತು. ಮತದಾರರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವ ದೃಶ್ಯ ಜಿಲ್ಲೆಯ ಹಲವು ಮತಗಟ್ಟೆಗಳಲ್ಲಿ ಸಾಮಾನ್ಯವಾಗಿತ್ತು. ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗಿಂತ ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದಲೇ ಮತದಾನ ಪ್ರಮಾಣ ಉತ್ತಮವಾಗಿತ್ತು. ಮಧ್ಯಾಹ್ನ 01 ಗಂಟೆಯ ವೇಳೆಗೆ ಶೇ. 52. 63 ರಷ್ಟು ಮತದಾನವಾಗಿದ್ದು ಕಂಡುಬಂದಿತು. ಗಂಗಾವತಿ ನಗರಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಮತದಾನಕ್ಕೆ ಸರತಿ ಸಾಲು ಉದ್ದವಾಗಿತ್ತು.
ಸÀಂಜೆಯ ವೇಳೆಗೆ ಜಿಲ್ಲೆಯಲ್ಲಿ ಮತದಾನ ಇನ್ನಷ್ಟು ಬಿರುಸಿನಿಂದ ಸಾಗಿತು. ಕಳೆದ 2013 ರಲ್ಲಿ ನಡೆದ, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ. 72.74 ರಷ್ಟು ಮತದಾನವಾಗಿತ್ತು. ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಶೇ.70.19 , ಗಂಗಾವತಿ ನಗರಸಭೆ- ಶೇ.69.42 , ಕುಷ್ಟಗಿ ಪುರಸಭೆ- ಶೇ.71.33, ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಶೇ.78 ರಷ್ಟು ಮತದಾನವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾದ ಮತದಾನ ಪ್ರಕ್ರಿಯೆಯು ಸಂಜೆ 05 ಗಂಟೆಯವರೆಗೆ ಶಾಂತಿಯುತವಾಗಿ ಜರುಗಿತ್ತು, ಯಾವುದೇ ಅಹಿತಕರ ಘಟನೆಗಳು ಜರುಗಿದ ಬಗ್ಗೆ ವರದಿಯಾಗಿಲ್ಲ, ಮತಗಳ ಎಣಿಕೆಯು ಆಯಾ ತಾಲೂಕು ಕೇಂದ್ರದಲ್ಲಿ ಸೆ. 03 ರಂದು ನಡೆಯಲಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು,. ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ಅವರು ತಿಳಿಸಿದ್ದಾರೆ.ವಿವಿಧ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗಿನ ಶೇಕಡಾವಾರು ಮತದಾನ ಪ್ರಮಾಣ ವಿವರ ಇಂತಿದೆ. ಬೆಳಗ್ಗೆ 9 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ. 10. 64 ಮತದಾನವಾಗಿತ್ತು. ಕೊಪ್ಪಳ ನಗರಸಭೆ- ಶೇ. 9.28, ಗಂಗಾವತಿ- ಶೇ. 11.42, ಕುಷ್ಟಗಿ ಪುರಸಭೆ-ಶೇ. 11. 26 ಹಾಗೂ ಯಲಬುರ್ಗಾ ಪ.ಪಂ.- ಶೇ. 10. 60 ರಷ್ಟು ಮತದಾನವಾಗಿತ್ತು.
ಬೆಳಗ್ಗೆ- 11 ಗಂಟೆಗೆ ಜಿಲ್ಲೆಯಲ್ಲಿ ಶೇ. 27. 74 ಮತದಾನವಾಗಿತ್ತು. ಕೊಪ್ಪಳ ನಗರಸಭೆ ಶೇ. 23.84, ಗಂಗಾವತಿ- ಶೇ. 26.26, ಕುಷ್ಟಗಿ ಪುರಸಭೆ-ಶೇ. 28.28 ಹಾಗೂ ಯಲಬುರ್ಗಾ ಪ.ಪಂ.- ಶೇ. 32.52 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 01 ಗಂಟೆಯ ಹೊತ್ತಿಗೆ ಜಿಲ್ಲೆಯಲ್ಲಿ ಶೇ. 45.34 ಮತದಾನವಾಗಿತ್ತು. ಕೊಪ್ಪಳ ನಗರಸಭೆ- ಶೇ. 40.51, ಗಂಗಾವತಿ- ಶೇ. 43.01, ಕುಷ್ಟಗಿ ಪುರಸಭೆ-ಶೇ. 45.20 ಹಾಗೂ ಯಲಬುರ್ಗಾ ಪ.ಪಂ.- ಶೇ. 52.63 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ. 56.83 ಮತದಾನವಾಗಿತ್ತು. ಕೊಪ್ಪಳ ನಗರಸಭೆ- ಶೇ. 51.71, ಗಂಗಾವತಿ- ಶೇ. 53.06, ಕುಷ್ಟಗಿ ಪುರಸಭೆ-ಶೇ. 56.33 ಹಾಗೂ ಯಲಬುರ್ಗಾ ಪ.ಪಂ.- ಶೇ. 66.22 ರಷ್ಟು ಮತದಾನವಾಗಿತ್ತು.

loading...