4ದಿನಗಳ ಕಾಲ ಆದ್ಧೂರಿ ಬಸವೇಶ್ವರ ಜಾತ್ರಾ ಮಹೋತ್ಸವ

0
27
loading...

ಬಸವನಬಾಗೇವಾಡಿ: ಪಟ್ಟಣದ ಆರಾಧ್ಯ ದೇವರು ಮೂಲನಂದೀಶ್ವರ, ಬಸವೇಶ್ವರ ಜಾತ್ರಾ ಮಹೋತ್ಸವವು ಬಸವೇಶ್ವರ ಜಾತ್ರಾ ಉತ್ಸವ ಸಮಿತಿ, ರಾಷ್ಟ್ರೀಯ ಬಸವಸೈನ್ಯ ಹಾಗೂ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಮಂಡಳಿ ಸಹಯೋಗದಲ್ಲಿ ಇದೇ ಆ.27ರಿಂದ ಆ.30ರವರಗೆ 4ದಿನಗಳ ಕಾಲ ಆದ್ಧೂರಿಯಿಂದ ಜರುಗಲಿದೆ ಎಂದು ಹಿರಿಯ ಮುಖಂಡ ಈರಣ್ಣ ಪಟ್ಟಣಶೆಟ್ಟಿ ಹಾಗೂ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಶೇಖರ ಗೊಳಸಂಗಿ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಗಷ್ಟ 12ರಿಂದ ಪ್ರಾರಂಭವಾದ ಮುಂಡರಗಿ ಶಾಖಾವ್ಮಠದ ಜಗದ್ಗುರು ತೋಂಟದಾರ್ಯ ನಿಜಗುಣಪ್ರಭು ಮಹಾಸ್ವಾಮಿಜೀಯವರ ಅಕ್ಕನ ದಿವ್ಯ ದರ್ಶನ ಪ್ರವಚನ ಪಟ್ಟಣದ ಜನತೆಗೆ ಹೆಚ್ಚಿನ ವಿಚಾರಗಳನ್ನು ತಿಳಿಸಿಕೊಂಡುತ್ತಿದ್ದಾರೆ, ಅಣ್ಣ ಬಸವಣ್ಣನವರ ಆರ್ಶಿವಾದದಿಂದ ಬಸವೇಶ್ವರ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧಾರಿಸಲಾಗಿದೆ, ಆ.25ರಂದು ಬೆಳಗ್ಗೆ 10ಗಂಟೆಗೆ ಸುಮಂಗಲೇಯರಿಂದ 1001 ಕುಂಭಮೇಳ ಹಾಗೂ ಡೊಳ್ಳು ವಿವಿಧ ವಾದ್ಯವೈಭವಗಳೊಂದಿಗೆ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ವಚನ ಗ್ರಂಥ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ ಎಂದು ಹೇಳಿದರು.
ಆ.27ರಂದು ಬೆಳಗ್ಗೆ 9ಗಂಟೆಗೆ ಬಸವೇಶ್ವರ ದೇವಾಲಯದಿಂದ ಸಕಲ ವಾದ್ಯವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವವು ಹೊರಿಮಟ್ಟಿ ಗುಡ್ಡಕ್ಕೆ ತಲುಪಲಿದ್ದು, ಮಧ್ಯಾಹ್ನ ನುಡಿಗಳನ್ನು ಹೇಳುವುದು, ಸಂಜೆ 7ಗಂಟೆಗೆ ವಿವಿಧ ಜಾನಪದ ಕಲಾತಂಡಗಳಿಂದ ಪಟ್ಟಣದ ಕಂಬಿ ಕಟ್ಟಿಗೆ ಪಲ್ಲಕ್ಕಿಯನ್ನು ಆದ್ದೂರಿಯಿಂದ ಸ್ವಾಗತಿಸುವುದು, ಆನೆ ಅಂಬಾರಿ ಮೇಲೆ ಬಸವೇಶ್ವರರ ಭಾವಚಿತ್ರ ಮೆರವಣಿಗೆ ನಂತರ ಬಸವೇಶ್ವರ ಸಿಬಿಎಸ್‌ಸಿ ಶಾಲಾ ಅವರಣದಲ್ಲಿ ಆಕರ್ಷಕ ಮದ್ದು ಸುಡುಲಾಗುವುದು ಎಂದು ಹೇಳಿದರು.
ಆ.28ರಂದು ಬೆಳಗ್ಗೆ 9ಗಂಟೆಗೆ ಡೊಳ್ಳಿನ ಹಾಗೂ ಗೀಗೀ ಪದಗಳು, ಸಾಯಂಕಾಲ 3ಗಂಟೆಗೆ ಜಂಗೀ ಕುಸ್ತಿಗಳು, ಸಂಜೆ 6ಗಂಟೆಗೆ ಮೂಡಲಗಿಯ ಶಬ್ಬೀರ ಡಾಂಗೆ ತಂಡದವರಿಂದ ರಸಮಂಜರಿ, ರಾತ್ರಿ 10-30ಕ್ಕೆ ಬಸವೇಶ್ವರ ಬಯಲಾಟ ಸಂಘದವರಿಂದ ದೀಪಾವಳಿ ಎಂಬ ಸಾಮಾಜಿಕ ನಾಟಕ ಜರುಗುವುದು, ಆ.29ರಂದು ಬೆಳಗ್ಗೆ 9ಗಂಟೆಗೆ ಭಾರ ಎತ್ತುವ ಹಾಗೂ ಇನ್ನಿತರ ಕಸರತ್ತಿನ ಕಾರ್ಯಕ್ರಮಗಳು ಜರುಗುವವು, ಸಂಜೆ 4ಗಂಟೆಗೆ ರಾಜ್ಯ ಹ್ರೆರರಾಜ್ಯಗಳಿಂದ ಆಗಮಿಸಿದ ಪೈಲವಾನರಿಂದ ಜಂಗೀ ಕುಸ್ತಿ, ಸಂಜೆ 6ಗಂಟೆಗೆ ಭದ್ರಾವತಿ ಬಿಡ್ಸ್‌ ಅವರಿಂದ ರಸಮಂಜರಿ ಕಾರ್ಯಕ್ರಮ, ರಾತ್ರಿ 10-30ಕ್ಕೆ ಬಸವೇಶ್ವರ ನಾಟ್ಯ ಸಂಘದವರಿಂದ ಗುರು ಶಿಷ್ಯರ ಮಹಿಮೆ ನಾಟಕ ಜರುಗಲಿದ್ದು, ಆ.30ರಂದು ಬೆಳಗ್ಗೆ 10-30ಕ್ಕೆ ಬಸವೇಶ್ವರ ಸಿಬಿಎಸ್‌ಸಿ ಶಾಲಾ ಅವರಣದಲ್ಲಿ ಖ್ಯಾತ ಜಾನಪದ ಕಲಾ ತಂಡವರಿಂದ ಗೌರಿಶಂಕರ ಮೋಡಕಾರ ಆಟ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಹಾರಿವಾಳ, ವೈ.ಡಿ.ನಾಯ್ಕೋಡಿ, ಲ.ರು.ಗೊಳಸಂಗಿ, ಸುಭಾಸ ಚಿಕ್ಕೊಂಡ, ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ, ಉಮೇಶ ಹಾರಿವಾಳ, ಜಟ್ಟೇಂಗರಾಯ ಮಾಲಗಾರ, ಸುಭಾಸ ಗಾಯಕವಾಡ ಇದ್ದರು.

loading...