5 ಕೋಟಿ ವೆಚ್ಚದಲ್ಲಿ ಆಯುಷ್ ಔಷಧಿ ತಯಾರಿಕಾ ಕೇಂದ್ರ: ಶಾಸಕ ಅಭಯ

0
8
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ನಗರದಲ್ಲಿ ಲಸಿಕಾ ಸಂಸ್ಥೆಯ ಆವರಣದಲ್ಲಿ ಸು.5ಕೋಟಿ ರೂಪಾಯಿ ಅನುದಾನದಲ್ಲಿ ಆಯುಷ್ ಔಷಧಿ ತಯಾರಿಕಾ ಕೇಂದ್ರವನ್ನು ಸ್ಥಾಪಿಸಲು ಸನ್ 2017-18 ಸಾಲಿನ ಅಯುವ್ಯಯದಲ್ಲಿ ಘೋಷಣೆಯಾಗಿದೆ ಎಂದು ಶಾಸಕ ಅಭಯ ಪಾಟೀಲ‌ ಮಾಹಿತಿ ನೀಡಿದರು.

ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗಾವಿ ನಗರದ ಲಸಿಕಾ ಸಂಸ್ಥೆ ಯು‌ಸು.156 ಎಕರೆಯಷ್ಟು ವಿಶಾಲವಾದ ಜಾಗೆಯನ್ನು ಹೊಂದಿದ್ದು,ಸು.456 ತರಹದ ವಿವಿಧ ಗಿಡಮೂಲಿಕೆಗಳನ್ನು ಹೊಂದಿರುವ‌ ಏಕೈಕ ವಿಶಿಷ್ಟ ತೆಯನ್ನು ಹೊಂದಿರುವ‌ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಆಯುಷ್ ಔಷಧ ತಯಾರಿಕಾ ಘಟಕವನ್ನು ಸ್ಥಾಪಿಸುವುದು ಅತೀ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಕಟ್ಟಡ ಕಾಮಗಾರಿ ಯನ್ನು ಮೊದಲ ಹಂತದಲ್ಲಿ 454 ಲಕ್ಷ ರೂ.ಅಂದಾಜು ಮೊತ್ತದ ಪ್ರಸ್ತಾವನೆಯು ಸಲ್ಲಿಕೆಯಾಗಿದೆ. ಈ ಘಟಕವನ್ನು ಹಂತ ಹಂತವಾಗಿ ವಿಸ್ತರಣೆ ಮಾಡಲಾಗುತ್ತದೆ ಎಂಉ ತಿಳಿಸಿದರು.

ಈ ಸಂದರ್ಭದಲ್ಲಿ ದೊಂಡಿಬಾ ಸೇರಿದಂತೆ ಇತರರು ಇದ್ದರು.

loading...