ಅಂತರರಾಜ್ಯ ಗಾಂಜಾ ಸಾಗಣೆದಾರರ ಬಂಧನ

0
19
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಅಂತರರಾಜ್ಯ ಗಾಂಜಾ ಕಳ್ಳ ಸಾಗಣೆದಾರರನ್ನು ಬಂಧಿಸುವಲ್ಲಿ ಹುಬ್ಬಳ್ಳಿ- ಬೆಂಡಿಗೇರೆ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಹು-ಧಾ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಮಾಹಿತಿ ನೀಡಿದ್ದಾರೆ. ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಆಂಧ್ರಪ್ರದೇಶದ ವಿಶಾಖಪಟ್ಟಣ ಮೂಲದ ಆರೋಪಿಗಳಾದ ನರೇಶ್​ ಪಾಂಗಿ(22), ನಾಗೇಶ್​ ಕಿಲ್ಲೋ (19), ಮತ್ಯಾರಾಜು ಕೊರ್ರಾ (25) ಎಂಬುವರನ್ನು ಹುಬ್ಬಳ್ಳಿ ಮಂಟೂರು ರಸ್ತೆ ಮ್ಯಾಂಗನೀಜ್ ಫ್ಲಾಂಟ್​ನಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತರಿಂದ 2 ಲಕ್ಷ ಮೌಲ್ಯದ ಒಟ್ಟು 19.8 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಎಸಿಪಿ ಎನ್.ಬಿ. ಸಕ್ರಿ, ಡಿಸಿಪಿ ಬಿ.ಎಸ್. ನೇಮಗೌಡ, ಬೆಂಡಿಗೇರಿ ಠಾಣಾ ಇನ್ಸ್​​ಪೆಕ್ಟರ್ ಸಂತೋಷ್ ಕುಮಾರ್ ಸೇರಿದಂತೆ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಅಕ್ರಮ ಗಾಂಜಾ ಮಾರಾಟ, ಸಾಗಣೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಎಸಿಪಿಗಳಾದ ಎನ್.ಬಿ. ಸಕ್ರಿ, ಎಚ್.ಕೆ. ಪಠಾಣ ನೇತೃತ್ವದ ವಿಶೇಷ ತನಿಖಾ ತಂಡ ರಚಿಸಲಾಗಿದೆ. ತಂಡದಲ್ಲಿ ಇನ್ಸ್​ಪೆಕ್ಟರ್​ಗಳಾದ ಡಿ. ಸಂತೋಷಕುಮಾರ್, ಸಿಸಿಬಿ ಇನ್ಸ್​ಪೆಕ್ಟರ್ ಅರುಣಕುಮಾರ ಸೋಳುಂಕೆ, ವಿನೋದ ಮುಕ್ತೇದಾರ್ ಇದ್ದಾರೆ. ಗಾಂಜಾ ಮಾರಾಟಗಾರರ ವಿರುದ್ಧ ರೌಡಿಶೀಟ್ ತೆರೆಯಲಾಗುವುದು. ಅಗತ್ಯವಿದ್ದಲ್ಲಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಸಾರ್ವಜನಿಕ ಬೀಟ್ ಮಾಹಿತಿದಾರರಿಂದ ಮೂರು ಗಾಂಜಾ ಪ್ರಕರಣಗಳು ಪತ್ತೆಯಾಗಿವೆ. ಸಾರ್ವಜನಿಕರು ಅಕ್ರಮ ಗಾಂಜಾ, ಡ್ರಗ್ಸ್ ಮಾರಾಟದ ಕುರಿತು ಮಾಹಿತಿ ನೀಡಬೇಕು. ಅಂಥವರಿಗೆ ರಕ್ಷಣೆ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದರು.

loading...