ಅಧಿಕಾರಿಗಳ ಬೇಜಾವಬ್ದಾರಿತನ ಸಹಿಸಲು ಸಾಧ್ಯವಿಲ್ಲ: ಸಚಿವ ಶಂಕರ್

0
0
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಜಿಲ್ಲೆಯಲ್ಲಿ ಆವರಿಸಿರುವ ಬರಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವುದು, ಯಾವುದೇ ಸಮಸ್ಯೆಗಳು ತಲೆದೂರದಂತೆ ಮುಂಜಾಗ್ರತವಾಗಿ ಕ್ರಮಗಳನ್ನು ಕೈಗೊಳ್ಳುವದಕ್ಕೆ ಸರ್ಕಾರದ ಬದ್ಧವಾಗಿದೆ ಎಂದು ಅರಣ್ಯ, ಜೀವ ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಆರ್. ಶಂಕರ್ ಹೇಳಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವಾರದ ನಂತರ ಮೊದಲನೇ ತ್ರೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಜಿಲ್ಲೆಯಲ್ಲಿ ಕೈಗೊಂಡ ವಿವಿಧ ಅಭಿವೃದ್ದಿ ಯೋಜನೆಗಳ ಪ್ರಗತಿ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಅವರು ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಬೆಳೆ ಹಾನಿ ಜಂಟಿ ಸಮೀಕ್ಷೆ, ಬಾಕಿ ಉಳಿದುಕೊಂಡಿರುವ ಬೆಳೆ ವಿಮೆ ಹಣ ಬಿಡುಗಡೆಗೆ ಕ್ರಮಕೈಗೊಳ್ಳಲಾಗುವದೆಂದರು. ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಶೇ 90 ರಷ್ಟು ಬೆಳೆಗಳು ಹಾಳಾಗಿರುವುದರಿಂದ ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿರುವುದರಿಂದ ನಷ್ಟದ ಅಂದಾಜು ಸಲ್ಲಿಸಲು ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಬೆಳೆ ಸಮೀಕ್ಷೆ ಕೈಗೊಂಡು ವರದಿ ನೀಡಬೇಕೆಂದು ಸೂಚನೆ ನೀಡಿದರು. ಮುಂಗಾರು ವಿಫಲತೆಯಿಂದ ಸಂಪೂರ್ಣವಾಗಿ ಬೆಳೆ ಹಾನಿಯಾಗಿದ್ದು ಜಂಟಿ ಸಮೀಕ್ಷೆಯನ್ನು ಕೈಗೊಳ್ಳುವುಂತೆ ಹೇಳಿದ ಶಾಸಕ ಅಮರೇಗೌಡ ಬಯ್ಯಾಪೂರ ಅವರು ಹಿಂಗಾರು ಬಿತ್ತನೆಗೆ ಬೇಕಾದ ಸಿದ್ಧತೆಗಳನ್ನು ಕೃಷಿ ಅಧಿಕಾರಿಗಳು ತೆಗೆದುಕೊಳ್ಳವುಂತೆ ಹೇಳಿದರು, ಇದಕ್ಕೆ ಧ್ವನಿಗೂಡಿಸಿದ ಸಂಸದ ಸಂಗಣ್ಣ ಕರಡಿಯವರು 2016-17ನೇ ಸಾಲಿನ ಬೆಳೆವಿಮೆ ಬಾಕಿ ಮೊತ್ತ ಬಂದಿಲ್ಲ, ಇದಕ್ಕೆ ಇರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಹಣ ಬಿಡುಗಡೆಗೆ ಒತ್ತಾಯಿಸಿದರು. ಮುಂಗಾರು ವಿಫಲವಾಗಿರುವದರಿಂದ 20 ದಿನದದೊಳಗಾಗಿ ಜಂಟಿ ಸಮೀಕ್ಷೆಯನ್ನು ಪೂರ್ಣಗೊಳಿಸುವುಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸಚಿವ ಆರ್. ಶಂಕರ್ ಅವುರು ವಿಮೆ ಕಂಪನಿಗಳಿಂದ ಬಾಕಿ ಉಳಿದುಕೊಂಡಿರುವ ರೂ. 40 ಕೋಟಿ ಮೊತ್ತದ ಬಿಡುಗಡೆಗೆ ಬೆಂಗಳೂರಲ್ಲಿ ಸಭೆ ಕರೆದು ಸಮಸ್ಯೆ ಪರಿಹರಿಸುವ ಭರವಸೆಯನ್ನು ನೀಡಿದರು. ಸಭೆಯಲ್ಲಿ ಜಿಲ್ಲೆಯಲ್ಲಿನ ಬರನಿರ್ವಹಣೆ ಅದರಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ, ಜಾನುವಾರುಗಳಿಗೆ ಮೇವು ಸಂಗ್ರಹಣೆ, ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಣೆಯಲ್ಲಿ ದೋಷ, ಅಧಿಕಾರಿಗಳ ಸ್ಫದನೆ ಇಲ್ಲದಿರುವ ಬಗ್ಗೆ ಗಂಭಿರ ಚರ್ಚೆಗಳು ನಡೆದವು, ಪಕ್ಷಬೇದ ಮರೆತು ಸಂಸದ ಸಂಗಣ್ಣ ಕರಡಿ, ಶಾಸಕ ಅಮರೇಗೌಡ ಬಯ್ಯಾಪೂರ, ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ಬಸವರಾಜ ದಡೆಸ್ಗೂರ ಮಾತನಾಡಿ, ಬರ ಪರಿಸ್ಥಿತಿ ಎದುರಿಸಲು ಮುಂಜಾಗೃತ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಿದರು.
ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನೆ ವೇಳೆ ಸಂಸದ ಸಂಗಣ್ಣ ಕರಡಿ ಮಾತನಾಡಿ, ಆರ್ಥಿಕ ವರ್ಷದ ಅರ್ಧವಾರ್ಷಿಕ ಅವಧಿ ಮುಗಿಯುತ್ತಿದ್ದು, ಇನ್ನೂ ಕೆಲ ಇಲಾಖೆಗಳ ಯೋಜನೆ, ಕಾಮಗಾರಿಗಳು ಆರಂಭವಾಗಿಲ್ಲ, ಸುಮಾರು ವರ್ಷಗಳಿಂದ ಕುಡಿಯುವ ನೀರಿನ ಯೋಜನೆಗಳು ಮುಕ್ತಾಯವಾಗಿಲ್ಲವೆಂದರು. ಇದಕ್ಕೆ ಉತ್ತರಿಸಿದ ಜಿ.ಪಂ. ಸಿಇಒ ವೆಂಕಟ್ ರಾಜ ಅವರು ಕೆಲ ತಾಂತ್ರಿಕ ಕಾರಣಗಳಿಂದ ಯೋಜನೆಗಳ ಅನುಷ್ಠಾನದಲ್ಲಿ ವಿಳಂಭವಾಗಿದ್ದು ತ್ವರಿತವಾಗಿ ಕ್ರಮ ಜರುಗಿಸಲಾಗುವದೆಂದರು. ರಾಜಶೇಖರ್ ಹಿಟ್ನಾಳ, ಲಕ್ಷ್ಮವ್ವ ನಿರಲೋಟಿ, ರೇಣುಕಾ ಸುಕುಮಾರ, ಅಕ್ಷಯ ಇದ್ದರು.

loading...