ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

0
0
loading...

ಗುಳೇದಗುಡ್ಡ: ಸಮೀಪದ ಕೋಟಿಕಲ್ಲ ಗ್ರಾಮದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಹಾಗುಂಡಪ್ಪ ಸುಂಕದ ಹಾಗೂ ಉಪಾಧ್ಯಕ್ಷರಾಗಿ ಪರಶುರಾಮ ಜೋಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶನಿವಾರ 12 ಸದಸ್ಯರನ್ನು ಹೊಂದಿರುವ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹಾಗುಂಡಪ್ಪ ಸುಂಕದ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಶುರಾಮ ಜೋಗಿನ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಐದು ವರ್ಷದ ಅವಧಿ ಹೊಂದಿರುತ್ತಾರೆ. ಆಯ್ಕೆ ಸಮಯದಲ್ಲಿ ಎಲ್ಲ 12 ಸದಸ್ಯರು ಉಪಸ್ಥಿತರಿದ್ದರು ಎಂದು ರಿಟರ್ನಿಂಗ್‌ ಅಧಿಕಾರಿ ಎಂ.ಎಸ್‌.ಚಂದಾವರಿ ಹಾಗೂ ಸಹಾಯಕ ಅಧಿಕಾರಿ ಆರ್‌.ಎನ್‌. ಘಂಟಿ ತಿಳಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನವಾಗಿ ಆಯ್ಕೆಗೊಂಡ ನೀಲಪ್ಪ ಅಬಕಾರಿ, ನಾಗಪ್ಪ ಮುರಗೋಡ, ಸಂಗಪ್ಪ ಹಡಪದ, ಮೇಘಪ್ಪ ಲಮಾಣಿ, ಯಲಗುರ್ದಪ್ಪ ತೊಗಲಂಗಿ, ಬಸಪ್ಪ ಗೌಡ್ರ, ರಾಘವೇಂದ್ರ ಬಳಿಗೇರ, ಗಂಗಮ್ಮ ಮಂತ್ರಿ, ಯಮನವ್ವ ರಗಟಿ, ಸಂಗಪ್ಪ ಚಟ್ಟೇರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ, ಮಹೇಶ ಬಿಜಾಪೂರ, ಲಕ್ಷ್ಮಣ ಹಾಲನ್ನವರ, ಉಮೇಶ ಹುನಗುಂದ, ಮಂಜುನಾಥ ತಿಪ್ಪಾ, ತಮ್ಮಣ್ಣೆಪ್ಪ ಬೆನಕಟ್ಟಿ, ಮುಪ್ಪಣ್ಣ ಶೀಲವಂತ, ಅನ್ವರಖಾನ ಪಠಾಣ, ಸಂತೋಷ ನಾಯನೇಗಲಿ, ಎಚ್‌.ಎಲ್‌. ಚವ್ಹಾಣ, ಭೀಮಪ್ಪ ಡೆಂಗಿ, ಬಸವರಾಜ ಚಿಲ್ಲಾಪೂರ, ಶಿವಾನಂದ ವಾಲೀಕಾರ, ಸೋಮು ರಾಠೋಡ, ಶೇಖರ ರಾಠೋಡ, ಮ್ಯಾನೇಜರ ಹರಿಶಗೌಡರ ಮತ್ತಿತರರು ಇದ್ದರು.

loading...