ಅಪಘಾತ: ವ್ಯಕ್ತಿ ಸಾವು

0
0
loading...

 

ಇಳಕಲ್: ರಾಷ್ತಿçÃಯ ಹೆದ್ದಾರಿ ನಂ. ೫೦ ರ ಮೇಲೆ ಚಿತ್ರದುರ್ಗದಿಂದ ವಿಜಯಪುರ ಕಡೆಗೆ ಅಡಿಗೆ ಎಣ್ಣೆಯನ್ನು ತುಂಬಿಕೊಂಡಿದ್ದ ಟ್ಯಾಂಕರ್ ಒಂದು ಕೆಟ್ಟು ನಿಂತಿದ್ದ ಲಾರಿಗೆ ಇಂದು ಬೆಳ್ಳಿಗ್ಗೆ ಸುಮಾರು ೭ ಘಂಟೆಗೆ ಡಿಕ್ಕಿ ಹೊಡದಿದ್ದರ ಪರಿಣಾಮವಾಗಿ ಟ್ಯಾಂಕರ್ ಚಾಲಕ ಸ್ಥಳದಲ್ಲಿಯೆ ಸಾವನ್ನಪ್ಪಿರುವ ಘಟನೆಯೊಂದು ಹುನಗುಂದ ಡಿಪ್ಲೊÃಮಾ ಕಾಲೇಜಿನ ಕತ್ತಿರದ ಕಾಡಗಿಹಳ್ಳದ ರಾಯಚೂರ ಕ್ರಾಸ್‌ಬಳಿ ವರದಿಯಾಗಿದೆ. ಚಳ್ಳಕೇರಿಯಲ್ಲಿ ಪಾಮ್ ಅಡಿಗೆಯ ಎಣ್ಣೆಯನ್ನು ತುಂಬಿಕೊಂಡು ಕೆ.ಎ. ೩೦/೭೭೨೯ ನಂಬರಿನ ಟ್ಯಾಂಕರ್ ರಾತ್ರಿಯಲ್ಲಾ ಸಂಚರಿಸಿ ನಿದ್ರೆಯ ಮಂಪರದಲ್ಲಿ ಕೆಟ್ಟು ನಿಂತಲಾರಿ ರಾಜಸ್ಥಾನದ ಆರ್.ಜೆ.೦೯/ಜಿಬಿ.೨೧೪೮ ಈ ನಂಬರಿನ ಲಾರಿಗೆ ಡಿಕ್ಕಿ ಹೊಡಿದ ಪರಿಣಾಮವಾಗಿ ಟ್ಯಾಂಕರ್‌ನ ಚಾಲಕ ರಾಜಸ್ಥಾನದ ಪಪ್ಪುರಾಜ ತಂದೆ ಕೃಷ್ಣಪ್ಪ (೨೪) ಸಾವನ್ನಪ್ಪಿರುವ ವ್ಯಕ್ತಿ ಎಂದು ಗುರಿತಿಸಲಾಗಿದೆ. ಇದರಿಂದಾಗಿ ಅಂದಾಜು ಮೂರು ಲಕ್ಷಕ್ಕೂ ಅಧಿಕ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಈ ಘಟನೆಯಿಂದ ಚಾಲಕ ಸಾವು ಬದಿಕಿನ ಮಧ್ಯೆ ನರಳಾಡುತ್ತಿದ್ದಾಗ ಜನರೆಲ್ಲಾ ಆತನನ್ನು ಉಳಿಸುವದನ್ನು ಬಿಟ್ಟು ಬಿದ್ದ ಎಣ್ಣೆಯನ್ನು ಬಕಿಟ್ಟು, ಚಂಬು, ಕ್ಯಾನ್, ನೀರಿನ ಬಾಟಲ್ಲಿ, ಕೊಡ ಇನ್ನಿತರ ಸಾಮಗ್ರಿಗಳಿಂದ ಕಸಬಳೆಯುವ ರೀತಿಯಲ್ಲಿ ಮಹಿಳೆಯರು ಮತ್ತು ಪುರುಷರು ರಸ್ತೆಯಲ್ಲಿ ನಿಂತು ತುಂಬಿಕೊಳ್ಳಲು ಮುಗಿದು ಬಿದಿದ್ದರು. ಇಳಕಲ್ ಗ್ರಾಮೀಣ ಪೊಲೀಸರು ಬಂದು ಹರಸಾಹಸ ಮಾಡಿ ಯಂತ್ರಗಳ ಮೂಲಕ ಎರಡು ಲಾರಿಗಳನ್ನು ರಸ್ತೆಯ ಬದಿಗೆ ಹಚ್ಚಿ ಸಂಚಾರಕ್ಕೆ ಸುಗಮ ದಾರಿ ಮಾಡಿಕೊಟ್ಟರು. ಇಳಕಲ್ ಗ್ರಾಮೀಣ ಪಿಎಸ್‌ಐ ಎಸ್.ಎಮ್.ಶಿರಗುಂಪಿ ಪ್ರಕರಣವನ್ನು ದಾಖಲು ಮಾಡಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

loading...