ಅಪ್ಘಾನ್ ಆಟಕ್ಕೆ ಕ್ರಿಕೆಟ್ ಜಗತ್ತೆ ನಿಬ್ಬೆರಗು,

0
0
loading...

ದುಬೈ: ಮಂಗಳವಾರ ಆರಂಭವಾಗಿದ್ದ ಕ್ರಿಕೆಟ್ ಪಂದ್ಯ ಬುಧುವಾರ ರೋಚಕಯತೆಲ್ಲಿ ಅಂತ್ಯವಾಗಿದೆ. ಕಳೆದ ರಾತ್ರಿ ಅಕ್ಷರಶಃ, ಟೀಮ್ ಇಂಡಿಯಾ ಅಭಿಮಾನಿಗಳ ನಿದ್ದೆ ಮಾಯವಾಗಿತ್ತು. ಅತ್ತ ದುಬೈನಲ್ಲಿ ಆಫ್ಘಾನ್ ಬೌಲರ್ ಗಳು ಶಿಸ್ತುಬದ್ಧ ದಾಳಿ ನಡೆಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ರೆ, ಇತ್ತ ಭಾರತದ ಅಭಿಮಾನಿಗಳು ದೇವರ ಮೊರೆ ಹೋಗಿದ್ರು. ಸೂಪರ್ ಫೋರ್ ನಲ್ಲಿ ಅಫ್ಘಾನಿಸ್ತಾನ ತಂಡ ಆಡಿದ ಧಾಟಿಗೆ ಜಗತ್ತೇ ಸಲಾಂ ಎಂದಿದೆ.

ಹೌದು….ಪಂದ್ಯದ ಕೊನೆಯ ಓವರ್ ವರೆಗೂ ವಿಜಯಲಕ್ಷ್ಮಿ ಚಂಚಲೆಯಾಗಿದ್ದಳು. ಒಂದು ಬಾರಿ ವಿಜಯಲಕ್ಷ್ಮಿ ಟೀಮ್ ಇಂಡಿಯಾ ಪರ ವಾಲಿದರೆ, ಇನ್ನೊಮ್ಮೆ ಅಫ್ಘಾನಿಸ್ತಾನ ತಂಡದ ಪರ ವಾಲುತ್ತಿದ್ದಳು. ನಿಶ್ಚಿತವಾಗಿ ಮೈದಾನದಲ್ಲಿ ಕುಳಿತು ಪಂದ್ಯ ವೀಕ್ಷಣೆ ಮಾಡಿದ ಅಭಿಮಾನಿಗಳು ಕುರ್ಚಿಯ ತುದಿಯಲ್ಲಿ ಕುಳಿತು, ಬೆರಳುಗಳನ್ನು ತಳಕು ಹಾಕಿಕೊಂಡು, ದೇವರಲ್ಲಿ ಪ್ರಾರ್ಥನೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.

ಕೊನೆ ಓವರ್ ನಲ್ಲಿ ಗೆಲುವಿಗೆ ಬೇಕಿತ್ತು 7 ರನ್. ಟೀಮ್ ಇಂಡಿಯಾ ಬಳಿ ಇತ್ತು ಕೇವಲ ಒಂದು ವಿಕೆಟ್. ಅಫ್ಘಾನಿಸ್ತಾನ ತಂಡದ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಬೌಲ್ ಮಾಡಲು ಸಿದ್ಧರಾದ್ರು. ಇತ್ತ ಟೀಮ್ ಇಂಡಿಯಾದ ಭರವಸೆಯ ಆಟಗಾರ ರವೀಂದ್ರ ಜಡೇಜಾ ಅಬ್ಬರಿಸಲು ರೆಡಿ. ಕೊನೆಯ ಓವರ್ ನ ಎರಡನೇ ಎಸೆತದಲ್ಲಿ ಜಡ್ಡು ಬೌಂಡರಿ ಬಾರಿಸಿದ್ರು. ಪಂದ್ಯದ ರೋಚಕತೆ ಹೆಚ್ಚಾಗಿತ್ತು.

ರೋಚಕ ಪಂದ್ಯ ನೋಡಿದ ಅಭಿಮಾನಿಗಳು ಫುಲ್ ಖುಷ್. 2 ಬೌಲ್ 1 ರನ್ ಅವಶ್ಯಕವಿದ್ದಾಗ ಜಡೇಜಾ ಇಲ್ಲದ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದ್ರು. ಟೀಮ್ ಇಂಡಿಯಾ ಗೆಲ್ಲಬಹುದಾದ ಪಂದ್ಯವನ್ನು ಟೈ ಮಾಡಿಕೊಂಡಿತು. ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 36ನೇ ಟೈ ಆದ ಪಂದ್ಯ ಎಂಬ ಹೆಗ್ಗಳಿಕೆ ಈ ಪಂದ್ಯಕ್ಕೆ ಲಭಿಸಿತು.

loading...