ಆತ್ಮಹತ್ಯೆ ರೋಗಕ್ಕೆ ಮಾನಸಿಕ ದೃಢತೆಯೊಂದೆ ಪರಿಹಾರ: ಹೊಸಮನಿ

0
0
loading...

ಕನ್ನಡಮ್ಮ ಸುದ್ದಿ-ಧಾರವಾಡ: ಅಬಾಲವೃದ್ಧರೆನ್ನದೇ ಸಾಮಾನ್ಯವಾಗಿ ಕಂಡುಬರುವ ಆತ್ಮಹತ್ಯೆ ಎಂಬ ರೋಗಕ್ಕೆ ಮಾನಸಿಕ ಸದೃಢತೆಯೊಂದೆ ಪರಿಹಾರ ಎಂದು ಪ್ರಭಾರ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಹೊಸಮನಿ ಸಿದ್ದಪ್ಪ.ಎಚ್ ಹೇಳಿದರು.
ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ(ಡಿಮ್ಹಾನ್ಸ್)ಯ ಸಭಾಂಗಣದಲ್ಲಿ, ಜಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಡಿಮ್ಹಾನ್ಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೆಡ್‍ಕ್ರಾಸ್ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ನಿಮಿತ್ಯ ಆಯೋಜಿಸಿದ್ದ “ಆತ್ಮಹತ್ಯೆ ತಡೆಗಟ್ಟಲು ಒಟ್ಟಾಗಿ ಶ್ರಮಿಸೋಣ” ಕಾನೂನು ಅರಿವು ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆತ್ಮಹತ್ಯೆ ಬಹು ದೊಡ್ಡ ಅಪರಾಧ ಅದು ಶಿಕ್ಷಾರ್ಹ ಅಪರಾಧವೂ ಹೌದು ಎಂದರು. ಸಮಾಜ ಮತ್ತು ಸಂಸಾರದ ಗೊಂದಲ, ಅಪನಂಬಿಕೆ, ಸಂಶಯ, ಖಿನ್ನತೆಗಳ ಕಾರಣದಿಂದ ಆತ್ಮಹತ್ಯೆಗಳು ಸಂಭವಿಸುತ್ತವೆ. ಜೀವನದಲ್ಲಿ ಅಂತಹ ಸಂದರ್ಭಗಳು ಬಂದಾಗ ವ್ಯಕ್ತಿಯು ಸಹನೆ ಮತ್ತು ಹೊಂದಾಣಿಕೆ ಮನೋಭಾವದಿಂದ ವರ್ತಿಸಿ, ಪ್ರಭುದ್ಧತೆಯಿಂದ ಪಾರಾಗಬೇಕು. ಮನುಕುಲದ ಜೀವ ಅಮೂಲ್ಯವಾದದ್ದು. ಕೆಟ್ಟ ವಿಚಾರ, ಸಿಟ್ಟಿಗೆ ಒಳಗಾಗಿ ಜೀವ ಕಳೆದುಕೊಂಡರೆ ಮರಳಿ ಬರದು. ಧೈರ್ಯವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ, ಮುನ್ನಡೆಯಬೇಕು ಎಂದು ಹೇಳಿದರು. ಆತ್ಮಹತ್ಯೆ ಕಾನೂನು ದೃಷ್ಟಿಯಲ್ಲಿ ದಂಡನಾರ್ಹವಾದ ಅಪರಾಧ. ಅದು ಬದುಕಿಗೆ ಹೆದರಿ ಕೈಗಳ್ಳುವ ಹೀನ ಕೃತ್ಯ ಅದಕ್ಕೆ ಸ್ವಲ್ಪ ಮಟ್ಟಿನ ಮರುಕವಿದ್ದರೂ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಇತರರಲ್ಲಿ ಕೀಳರಿಮೆ ಮೂಡುತ್ತದೆ. ಆದ್ದರಿಂದ ಅದನ್ನು ಗೆದ್ದು ಬಾಳುವ ಆತ್ಮಸ್ಥೈರ್ಯ ಎಲ್ಲರಲ್ಲೂ ಬರಬೇಕು. ದೇಶದ ಶ್ರೀಮಂತ ಪರಂಪರೆ, ಸಂಸ್ಕøತಿ, ಐಕ್ಯತೆ ಭದ್ರತೆ ಮತ್ತು ಅಭಿವೃದ್ಧಿಗೆ ಪೂರವಾಗಿ ನಾವು ಬದುಕೋಣ ಎಂದು ಹೇಳಿದರು. ಡಿಮ್ಹಾನ್ಸ್‍ನ ಪ್ರಭಾರ ನಿರ್ದೇಶಕ ಡಾ. ಮಹೇಶ ದೇಸಾಯಿ ಅಧ್ಯಕ್ಷತೆವಹಿಸಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣಾಧಿಕಾರಿ ಡಾ. ಆರ್.ಎಂ.ದೊಡ್ಡಮನಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಆರ್.ಯು.ಬೆಳ್ಳಕ್ಕಿ, ಡಿಮ್ಹಾನ್ಸ್‍ನ ವೈದ್ಯಕೀಯ ಅಧೀಕ್ಷಕ ಡಾ. ಶ್ರೀನಿವಾಸ ಕೊಸಗಿ ಉಪಸ್ಥಿತರಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಿಣ್ಣನ್ನವರ ಆರ್.ಎಸ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಹನುಮಂತ ಮದೆವ್ವಗೊಳ ನಿರೂಪಿಸಿದರು.ಡಾ. ಶಶಿ ಪಾಟೀಲ ವಂದಿಸಿದರು. ಜಿಲ್ಲಾ ನ್ಯಾಯಾಧೀಶ ಹೊಸಮನಿ ಸಿದ್ದಪ್ಪ ಅವರು ಆತ್ಮಹತ್ಯೆ ನಿರಾಕರಣೆ ಕುರಿತು ಸಭಿಕರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.

loading...