ಆಧುನಿಕ ಯುಗದಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ: ಶಾಸಕ ಅಭಯ ಪಾಟೀಲ

0
1
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ಭಾರತೀಯ ಸಂಸ್ಕೃತಿಯ ಉಳಿಸಿ, ಇಂದಿನ ಯುವ ಜನಾಂಗಕ್ಕೆ ಆಟದೊಂದಿದೆ ಸಂಸ್ಕೃತಿ ಬಗ್ಗೆ ತಿಳಿಸುವ ಉದ್ದೇಶದಿಂದ ಕಳೆಸ ಎಂಟು ವರ್ಷಗಳಿಂದ ಕೆಸರು ಗದ್ದೆ ಕ್ರೀಡೆಯನ್ನು ನಡೆಸಿಕೊಂಡು ಬರುತ್ತಿದ್ದೆನೆ ಎಂದು ಹೇಳಿದರು.

ಅವರು ರವಿವಾರ ನಗರದ ಹಳೇ ಪಿ. ಬಿ. ರೋಡ ಹತ್ತಿರ ಇರುವ ಪಾಟೀಲ ಪಾರ್ಮಹೌಸ್ ನಲ್ಲಿ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ಹಮ್ಮಿಕೊಂಡ ಕೇಸರು ಗದ್ದೆ ಕ್ರೀಡೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ಯುವ ಜನಾಂಗ ಸಂಸ್ಕೃತಿ ಯನ್ನು ಮರೆತು,ಬರಿ ಕ್ರಿಕೆಟ್ ಸೇರಿದಂತೆ ಇತರ ಕ್ರಿಡೆಗಳಿಗೆ ಹೆಚ್ಚು ಒತ್ತು ಕೊಡುವ ಮೂಲಕ ಗ್ರಾಮೀಣ ಕ್ರೀಡೆಯನ್ನು ಮರೆಯುತ್ತಿದ್ದಾರೆ .ಆದ್ದರಿಂದ ಸಂಸ್ಕೃತಿ ಹಾಗೂ ಗ್ರಾಮೀಣ ಕ್ರೀಡೆಯನ್ನು ಉಳಿಸಿ,ಯುವ ಜನಾಂಗಕ್ಕೆ ತಿಳಿಸುವ ಉದ್ದೇಶವಾಗಿದೆ ಎಂದರು.
ಕಳೆದ ಎಂಟು ವರ್ಷ ಗಳಿಂದ ಈ ಕ್ರೀಡೆಯನ್ನು ನಡೆಸುಕೊಂಡು ಬಂದಿದ್ದೇನೆ. ಪ್ರತಿ ವರ್ಷಕ್ಕಿಂತ ಈ ಬಾರಿ ಯುವಕರು ಹೆಚ್ಚು ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ.
ಕೆಸರು ಗದ್ದೆ ಓಟ 100 ಮೀ,50 ಮೀ ಇದ್ದು ಎಂಟು ಟೀಮ್ ಗಳು , ಹಗ್ಗಜಗ್ಗಾಟ ಒಂದು ಟಿಮ್ ನಲ್ಲಿ 9 ಮಂದಿ ಇರುವ 11 ತಂಡ, ಗಡಿಗೆ ಒಡೆಯುವ ಸ್ಪರ್ಧೆ ಎಂಟು ತಂಡಗಳ
ಭಾಗವಹಿಸಿದ್ದಾರೆ ಎಂದರು.

ಬೆಳಿಗ್ಗೆ ೯ ಗಂಟೆಗೆ ಕೆಸರು ಗದ್ದೆ ಕ್ರೀಡೆಗಳು ಪ್ರಾರಂಭವಾದವು, ಸ್ಪರ್ಧೆಯಲ್ಲಿ ಬಾಲಕಿಯರು ಸಹ ಭಾಗವಹಿಸಿದ್ದರು.

ಈ ಸಂದರ್ಭ ಸಂಜಯ ಸವಾಶೇರಿ ನಗರ ಸೇವಕ,ಗಿರೀಶ ದೊಂಗಡಿ,ಸಂಜು ಜನ ಗೌಡಾ, ಶಶಿಕಾಂತ ಪಾಟೀಲ, ಸಾರಿಖಾ ಪಾಟೀಲ,ಪ್ರದೀಪ ಶೆಟ್ಟಿ ಸೇರಿದಂತೆ ಇತರರ ಇದ್ದರು.

loading...