ಆಸ್ತಿ ವಿಚಾರ : ಚೂರಿ ಇರಿತ

0
0
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಉಜ್ವಲ ನಗರದಲ್ಲಿ ಎರಡು ಗುಂಪುಗಳ ನಡುವೆ ಆಸ್ತಿಯ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿ ಚೂರಿ ಇರಿದ ಘಟನೆ ಇಂದು ಸಂಜೆ ನಡೆದಿದೆ.
ಒಂದೇ ಧರ್ಮದ ಎರಡು ಕುಂಟುಂಬಗಳು ಆಸ್ತಿಯ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಮಾಜಿ ನಗರ ಸೇವಕನ ಅಡ್ಡೆಯ ಹತ್ತಿರ ಈ ಘರ್ಷಣೆ ನಡೆದಿದ್ದು, ಘರ್ಷಣೆಯಲ್ಲಿ ಮಾಜಿ ನಗರಸೇವಕ ಗಾಯಗೊಂಡಿದ್ದು, ಅವರನ್ನು ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಾಳ ಮಾರುತಿ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ತಿಳಿದು ಬಂದಿದೆ.

loading...