ಇತಿಹಾಸದ ಅರಿವು ಅಗತ್ಯ: ಪಾಟೀಲ

0
0
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಯಾವುದೇ ಒಂದು ಐತಿಹಾಸಿಕ ಸ್ಥಳಕ್ಕೆ ಪ್ರವಾಸ ಕೈಗೂಳ್ಳಲು ಅದರ ಬಗೆಗಿನ. ಜಾಗೃತಿ ಇತಿಹಾಸ ಪ್ರಜ್ಞೆ ಹಾಗೂ ಪರಂಪರೆಯ ಅರಿವು ಅಗತ್ಯ ಎಂದು ಪದವಿ ಪೂರ್ವ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕ ದತ್ತ ಪ್ರಸನ್ನ ಪಾಟೀಲ ಹೇಳಿದರು.
ಕೆಎಲ್‌ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಮಾಜವಿಜ್ಞಾನ ಸಂಘಗಳು ಹಾಗೂ ಇತಿಹಾಸ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಇತ್ತಿಚೇಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಯಾವುದೇ ಒಂದು ಐತಿಹಾಸಿಕ ಸ್ಥಳಕ್ಕೆ ಪ್ರವಾಸ ಕೈಗೂಳ್ಳಲು ಅದರ ಬಗೆಗಿನ. ಜಾಗೃತಿ ಇತಿಹಾಸ ಪ್ರಜ್ಞೆ ಹಾಗೂ ಪರಂಪರೆಯ ಅರಿವು ಅಗತ್ಯ. ಪ್ರವಾಸೋದ್ಯಮವು ಒಂದು ಉದ್ಯಮವಾಗಿ ಬೆಳೆಯುತ್ತಿದ್ದು, ಸರಕಾರದ ಪ್ರವಾಸೋದ್ಯಮದ ಆದಾಯಕ್ಕೂ ಮುಲವಾಗಿದೆ. ಬೆಳವಣಿಗೆಗೆ ಆಹಾರ, ವಿಹಾರ, ವೀಕ್ಷಣೆ, ಮಾಹಿತಿ, ವಸತಿ, ಉತ್ತಮ ಸಾರಿಗೆ ಸಂಪರ್ಕ ಮೂಲಭೂತ ಸೌಕರ್ಯಗಳು ಕೂಡಾ ಅವಶ್ಯಕವಾಗಿದೆ ಎಂದರು.
ಪ್ರಾಚಾರ್ಯ ಡಾ.ಎ.ವಿ ದೇವಾಂಗಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ಸುತ್ತು ಕೋಶ ಓದು ಗಾದೆ ಪ್ರವಾಸಿ ತಾಣಗಳ ಅಧ್ಯಯನ & ಪ್ರವಾಸವು ಮಾತಿಗೆ ಸಾಕ್ಷಿ ನುಡಿಯುತ್ತದೆ. ನಮ್ಮ ಭಾರತೀಯ ಸಂಸ್ಕçತಿ ಧರ್ಮ ಸಾಮರಸ್ಯದಿಂದ ಕೂಡಿದ್ದು ವಿವಿಧತೆಯಲ್ಲಿ ಏಕ್ಯತೆಯನ್ನು ಹೂಂದಿರುವಂತದ್ದು ಎಂದು ತಿಳಿಸಿದರು.
ನಿವೇದಿತಾ ಬುಳ್ಳಾಪ್ರಾರ್ಥಿಸಿದರು ಪ್ರೊ, ವೆಂಕಟೇಶ ಚಿನ್ನೂರ ಅತಿಥಿಯನ್ನು ಪರಿಚಯಿಸಿದರು ಇತಿಹಾಸ ಪ್ರಾಧ್ಯಾಪಕರು ಹೇಮಾನಾಯಕ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಕುಮಾರ ವಿನಾಯಕ ಕಟ್ಟಿಮನಿ ವಂದಿಸಿದರು. ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

loading...