ಈ ಸರ್ಕಾರ ಬಹಳ ದಿನ ಉಳಿಯೋದಿಲ್ಲ,

0
17
loading...

ಬೆಂಗಳೂರು:ನನ್ನ ಪ್ರಕಾರ ಈ ಸರ್ಕಾರ ಬಹಳ ದಿನ ಉಳಿಯೋದಿಲ್ಲ, ಸರ್ಕಾರದಲ್ಲಿ ವರ್ಗಾವಣೆ ವಸೂಲಿ, ಬಾಜಿ ದಂಧೆ ಹಾಗೂ ತುಘಲಕ್ ದರ್ಬಾರ್ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣಕ್ಕೆ ಆಗಮಿಸಿ ಶಾಸಕ ಮುರಗೇಶ್ ನಿರಾಣಿ ೫೨ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಈ ಸರ್ಕಾರ ಬದುಕಿದ್ದು ಸತ್ತಂತಾಗಿದೆ,ಸರ್ಕಾರದಲ್ಲಿ ವಸೂಲಿ ಬಾಜಿ ದಂಧೆ ನಡೆದಿದ್ದು,ಸಾಲಮನ್ನಾ ಬಗ್ಗೆ ಸಿಎಂಗೆ ಸ್ಪಷ್ಟತೆಯೇ ಇಲ್ಲ,ಅಲ್ಲದೇ ಈ ಸರ್ಕಾರ ಅಧಿಕಾರಕ್ಕೆ ಬಂದು ನೂರುದಿವಾಗಿದೆ.ಆದರೆ ಸಿಎಂ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ದಿನವಾದ್ರೂ ಪ್ರವಾಸ ಮಾಡಿದ್ದಾರಾ ಎಂದು ಕುಮಾರಸ್ವಾಮಿಗೆ ಪ್ರಶ್ನೆ ಮಾಡಿದರು.
ದಿನಕ್ಕೊಂದು ಹೇಳಿಕೆ ನೀಡ್ತಾ ಸಿಎಂ ಪ್ರಚಾರದಲ್ಲಿದ್ದಾರೆ ವಿನಃ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದ ಅವರು, ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರೆಂಬ ಹಗಲುಗನಸು ಕಾಣ್ತಿದ್ದಾರೆಂಬ ಸಿದ್ದರಾಮಯ್ಯ ಮಾತಿಗೆ ತಿರುಗೇಟು ನೀಡಿದ ಬಿಎಸ್‌ವೈ,ಸಿದ್ದರಾಮಯ್ಯ ಹಗಲು ಗನಸು ಕಾಣ್ತಿದ್ದಾರೋ, ಯಡಿಯೂರಪ್ಪ ಹಗಲುಗನಸು ಕಾಣ್ತಿದ್ದಾರೋ ಎಂದು ಸದ್ಯದಲ್ಲೆ ಗೊತ್ತಾಗಲಿದೆ ಎಂದರು.
ಸಿಎಂ ಕುಮಾರಸ್ವಾಮಿ ದೇವಸ್ಥಾನಗಳಿಗೆ ತೆರಳುತ್ತಿರೋದಕ್ಕೆ ನನ್ನ ಅಭ್ಯಂತರವಿಲ್ಲ,ಆದರೆ ಸಂಕಷ್ಟದಲ್ಲಿರುವ ರೈತರ,ಸಂತ್ರಸ್ಥರ ನೋವು ಕೇಳಬೇಕೆಂದು ಆಗ್ರಹಿಸಿದರು.
ಈ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ, ಪರಸ್ಪರ ಕಚ್ಚಾಟ ಏರ್ಪಟ್ಟಿದೆ.ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನ ಕೆಲವು ಶಾಸಕರಿಂದ ಮುಂದಿನ ಸಿಎಂ ತಾವೇ ಎಂದು ಹೇಳಿಕೆ ಕೊಡಿಸ್ತಿದ್ದಾರೆ. ಸರ್ಕಾರದಲ್ಲಿ ಕಚ್ಚಾಟ ಇರದಿದರೆ ಸಂಪುಟ ವಿಸ್ತರಣೆ ಮಾಡ್ತಿರೋದ್ಯಾಕೆ ಎಂದು ಪ್ರಶ್ನೆ ಮಾಡಿದರು.
ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರೇ ಹೇಳ್ತಿದ್ದಾರೆ. ಇನ್ನು ಸರ್ಕಾರದಿಂದ ಪ್ರಮುಖ ನಾಯಕರ ಫೋನ್ ಕದ್ದಾಲಿಕೆ ಆಗ್ತಿರೋದು ಸತ್ಯ, ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳದಿಂದ ಸಿದ್ದ÷್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಎಲ್ಲಿಂದಾದ್ರೂ ಸ್ಪರ್ಧಿಸಲಿ ನಮಗೇನು ವ್ಯತ್ಯಾಸವಾಗಲ್ಲ, ಅಲ್ಲದೇ ಮೋದಿಯವರ ವರ್ಚಸ್ಸು ಇನ್ನು ಹೆಚ್ಚಾಗಿದೆ, ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವನೆಯಲ್ಲಿ ರಾಜ್ಯದ ಶೇಕಡಾ ೫೦ಕ್ಕಿಂತ ಹೆಚ್ಚು ಕಡೆ ನಮ್ಮ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದ ಅವರು, ಇದೇ ವೇಳೆ ೫೩ನೇ ಹುಟ್ಟುಹಬ್ಬ ಆಚರಿಸಿಕೊಂಡ ಶಾಸಕ ಮುರಗೇಶ್ ನಿರಾಣಿಗೆ ಶುಭಾಶಯ ಕೋರಿದ್ರು.

loading...