ಉತ್ತಮ ನಾಗರಿಕರಾಗಲು ಗುರುವಿನ ಪಾತ್ರ ಅಪಾರ: ಪಾಟೀಲ

0
0
ನಾಲತವಾಡ: ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು, ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸುವ ಗುರು ನಿಜವಾಗಲು ಅದ್ಬುತ್ ಎಂದು ಸಮಾಜ ಸೇವಕ ಗಿರೀಶಗೌಡ ಪಾಟೀಲ ಹೇಳಿದರು.
ಪಟ್ಟಣದ ಶರಣ ವೀರೇಶ್ವರ ಮಹಾಮನೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ತಮಗೆ ಕಲಿಸಿದ ಗುರುಗಳು ಹಾಗೂ ನಿವೃತ್ತ ಶಿಕ್ಷಕರಿಗೆ ಗಿರೀಶಗೌಡ ಅಭಿಮಾನಿ ಬಂಗದಿಂದ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಅವಿನಾಭಾವ ಸಂಭಂದವಿದೆ. ಮಗು ಮೊದಲು ಶಾಲೆಗೆ ಹೊದಾಗ ಶಿಕ್ಷಕ ಹೇಳಿದ್ದನೆಲ್ಲ ನಂಬುತ್ತದೆ. ಮಗುವಿನ ಜಗತ್ತಿನಲ್ಲಿ ಶಿಕ್ಷಕನೇ ರೋಲ್ ಮಾಡೆಲ್ ತನ್ನ ಗುರುಗಳಿಗೆ ತಿಳಿಯದ ವಿಷಯವೇ ಇಲ್ಲ ಎಂದು ಭಾವಿಸಿಕೊಳ್ಳುತ್ತದೆ. ಎಲ್ಲ ವಿಷಯಗಳಲ್ಲೂ ಸಮಾನತೆ ಕಾಯ್ದುಕೊಂಡು ಆರೋಗ್ಯ ಪೂರ್ಣ ಸಮಾಜಕ್ಕಾಗಿ ಆರೋಗ್ಯ ಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಗುರುವಿನದು. ಈ ಹಂತದಲ್ಲಿ ನೀಡಿದ ಶಿಕ್ಷಣವೇ ಮಗುವನ್ನು ಜವಾಬದಾರಿಯುತ ಪ್ರಜೆಯಾಗಿ ಬೆಳೆಸುತ್ತಾರೆ. ನಮ್ಮಲ್ಲೆ ಶಿಕ್ಷಕರು ನಮಗೆ ಸಮಾಜದಲ್ಲಿ ಬಾಳುವ ದಾರಿ ಮತ್ತು ಉತ್ತಮ ನಾಗರಿಕನ್ನಾಗಿ ರೂಪಿಸಿದ್ದಾರೆ ಅವರಿಗೆ ಈ ವೇಳೆಯಲ್ಲಿ ಎಷ್ಟು ಹೊಗಳಿದರು ಸಾಕಾಗದು ಗುರು ಇಲ್ಲದೇ ವಿದ್ಯಾರ್ಥಿ ಸಾಧನೆ ಮಾಡಲು ಅಸಾಧ್ಯ ಎಂದರು.

loading...

ಸನ್ಮಾನ: ನಿವೃತ್ತ ಶಿಕ್ಷಕರಾದ ಎ.ಎಸ್.ಪಟ್ಟಣಶಟ್ಟಿ, ಸಿ.ಎಸ್.ಹಿರೇಮಠ, ಸಿ.ಎಸ್.ಸಜ್ಜನ, ಸಿ.ಎಸ್.ಸ್ಥಾವರಮಠ, ನಾಯ್ಕರ ಗುರುಗಳಿಗೆ ಸನ್ಮಾನಿಸಲಾಯಿತು. ನಿರೂಪಣೆ ಹಾಗೂ ವಂದನಾರ್ಪಣೆ ಸಂಗು ಮೆಟಿ ಮಾಡಿದರು. ಈ ವೇ¼ ಸಚಿನ ಪಾಟೀಲ, ಚನ್ನಪ್ಪಗೌಡ ಹಂಪನಗೌಡ, ವಿರೇಶ ಹಿರೇಗೌಡರ, ಜಗು ಜಾಲಹಳ್ಳಿ, ರುದ್ರು ಇಲಕಲ್ಲ್, ಶಿವು ಪಟ್ಟಣಶಟ್ಟಿ. ವಿರೇಶ ಸ್ಥಾವರಮಠ, ಅಂಬ್ರೆÃಶ ವಡಗೇರಿ, ಸುರುಶ ಕಾರಕೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

loading...