ಉರ್ದು ಪ್ರೌಢಶಾಲೆಗೆ ಬೀಗ ಹಾಕಿದ ಪ್ರಕರಣ

0
0
loading...

ಕನ್ನಡಮ್ಮ ವರದಿಯ ಫಲಶೃತಿ
ತೇರದಾಳ: ಸಮೀಪದ ಹನಗಂಡಿ ಗ್ರಾಮದ ಸರಕಾರಿ ಉರ್ದು ಪ್ರೌಢ ಶಾಲೆಗೆ ಶಿಕ್ಷಣ ಇಲಾಖೆಯ ಸಿಇಒ ಎಸ್‌.ಬಿ.ಬುರ್ಲಿ, ಸಿಆರ್‌ಪಿ ಎ.ಎನ್‌. ನದಾಫ ಶಾಲೆಗೆ ಭೇಟಿ ನೀಡಿ, ಪಾಲಕರ ಮನವೊಲಿಸುವುದರ ಮೂಲಕ ಸಮಸ್ಯೆ ತಿಳಿಯಾಯಿತು. ಆದರೆ ಪಾಲಕರು ಅಧಿಕಾರಿಗಳೊಂದಿಗೆ ಮಾತನಾಡಿ, ಮಂಗಳವಾರದಂದು ಮೇಲಾಧಿಕಾರಿಗಳು ಶಾಲೆಗೆ ಭೇಟಿ ಕೊಡದೆ ಇದ್ದರೆ ಮತ್ತೆ ಶಾಲೆಗೆ ಬೀಗ ಹಾಕುವುದಾಗಿ ಎಚ್ಚರಿಸಿದರು. ಶಾಲೆಯಲ್ಲಿನ ಈ ಪ್ರಕರಣ ಕುರಿತಾಗಿ ಹಾಗೂ ಬೀಗ ಜಡಿದು ಪಾಲಕರು ಪ್ರತಿಭಟಿಸಿದ್ದನ್ನು ಕುರಿತು ಕನ್ನಡಮ್ಮ ನಿನ್ನೆಯಷ್ಟೇ(ದಿ. 7ರಂದು) ‘ಶಾಲೆಗೆ ಬೀಗ ಜಡಿದ ಪಾಲಕರು: ಅವಧಿಗೂ ಮುನ್ನ ಮನೆಗೆ ಹೋದ ಮಕ್ಕಳು’ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚತ್ತುಕೊಂಡ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಯನ್ನು ತಿಳಿಗೊಳಿಸಿದರು. ಈ ಸಂದರ್ಭದಲ್ಲಿ ಮುಖ್ಯಗುರು ಎಸ್‌.ಜಿ.ಮುಲ್ಲಾ, ಆಡಳಿತಮಂಡಳಿ ಅಧ್ಯಕ್ಷ ಮತ್ತು ಸದಸ್ಯರು, ಪಾಲಕರು ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು ಪಾಲಕರ.

loading...