ಎಲ್‌ಐಸಿ ಸಂಸ್ಥೆಗೆ ೬೨ ರ ಸಂಭ್ರಮ

0
1
loading...

ಎಲ್‌ಐಸಿ ಸಂಸ್ಥೆಗೆ ೬೨ ರ ಸಂಭ್ರಮ
ಕನ್ನಡಮ್ಮ ಸುದ್ದಿ-ಬೆಳಗಾವಿ: ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಸಂಸ್ಥೆಯಾಗಿರುವ ಎಲ್‌ಐಸಿ ಕಂಪನಿಯು ಸೆಪ್ಟಂಬರ್ ೧ ಕ್ಕೆ ೬೨ ನೇಯ ವರ್ಷದ ಸಂಭ್ರವನ್ನು ಆಚರಿಸುತ್ತಿದೆ. ಖಾಸಗಿ ಕ್ಷೆÃತ್ರದ ವಿಮಾ ಸಂಸ್ಥೆಯೂ ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಎಲ್‌ಐಸಿ ಕಂಪನಿಯು ಜನರ ಮೆಚ್ಚುಗೆ ಪಾತ್ರವಾಗಿದೆ ಎಂದು ಹಿರಿಯ ಮಂಡಳ ಪ್ರಭಂದಕರಾದ ಪೂರ್ಣಿಮಾ ಗಾಯಕೊಂಡೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು.ದೇಶ ಅತೀ ಉತ್ತಮವಾಗಿ ೧೯೫೬ ರಲ್ಲಿ ಕೇವಲ ೫ ಕೋಟಿ ಬಂಡಲಾಳದಿಂದ ಆರಂಭಾವಾದ ಸಂಸ್ಥೆಯು ಇಂದಿಗೆ ೨೮.೪೫ ಲಕ್ಷ ಕೋಟಿ ಆಸ್ತಿಯನ್ನು ಹೊಂದಿದೆ ಗ್ರಾಹಕರ ಅನುಗುಣವಾಗಿ ಸುಮಾರು ೩೦ ವಿಮಾ ರಕ್ಷಣೆಯನ ಪಾಲಿಸಿಗಳನ್ನು ಹೊರತಂದಿದೆ. ಬೆಳಗಾವಿ ವಿಭಾಗವು ೧೯೯೩ ರಲ್ಲಿ ಪ್ರಾರಂಭವಾಗಿದ್ದು. ನಗದಲ್ಲಿಯೇ ೮ ವಿಮಾ ಶಾಖೆಗಳು ಕಾರ್ಯ ಆರಂಭಿಸಿವೆ.
ಆರ್ಥಿಕ ಮಟ್ಟದಲ್ಲಿ ೫ ಸಾವಿರ ಜನಸಂಖ್ಯೆ ಇರುವ ಹಳ್ಳಿಗಳಿಗೆ ೨೦೧೭-೧೮ ವರ್ಷದಲ್ಲಿ ೧೦೨ ವಿವಾ ಗ್ರಾಮ ಹಾಗೂ ೨ ವಿಮಾ ಶಾಲೆಗಳನ್ನು ಘೋಷಿಸಿ ಜನೋಪಯೋಗಿ ಕಾರ್ಯಗಳಿಗೆ ಆರ್ಥಿಕ ಸಹಾಯವನ್ನು ರೂ ೫೦ ಸಾವಿರದಿಂದ ೧ ಲಕ್ಷದವರೆಗೆ ಗ್ರಾಮಗಳ ಶೌಚಾಲಯಗಳ ನಿರ್ಮಣಕ್ಕೆ ನೀಡಲಾಗಿದೆ ಎಂದರು.
ಬಡತನ ನಿವಾರಣೆ, ಶಿಕ್ಷಣ ಕ್ಷೆÃತ್ರಕ್ಕೆ ಉತ್ತೆÃಜನ, ಆರೋಗ್ಯ ಸೇವೆ ಮತ್ತು ಇನ್ನಿತರ ಜನೋಪಯೋಗಿ ಕಾರ್ಯಗಳ ಉದ್ದೆÃಶವನ್ನಿಟ್ಟಕೊಂಡು ೨೦೦೬ ರಲ್ಲಿ ಎಲ್‌ಐಸಿ ಕಂಪನಿಯು ಗೋಲ್ಡನ್ ಬುಬಿಲಿ ಪೌಂಡೇಶನವನ್ನು ಘಟಪ್ರಭಾದಲ್ಲಿ ಸ್ಥಾಪಿಸಿ ಅದಕ್ಕೆ ಕರ್ನಾಟಕ ಹೆಲ್ತ್ ಸಂಸ್ಥೆಗೆ ಸುಸಜ್ಜಿತ ತುರ್ತು ಆರೋಗ್ಯ ಸೇವಾ ವಾಹನ ನೀಡರುತ್ತದೆ.
ಕೊಡಗು ನಿರಾಶ್ರಿತರಲ್ಲಿ ಮರಣ ಹೊಂದಿದವರಿಗೆ ತಲಾ ಎರಡು ಪಟ್ಟು ಕ್ಲಮ್ ಇನ್ಸೂರನ್ಸ್ ನೀಡಬೇಕೆಂದು ಕೇಂದ್ರದಿಂದ ಆದೇಶ ನೀಡಲಾಗಿದೆ. ಕೊಡಗಿನ ಸುತ್ತ ಮುತ್ತ ಪ್ರದೇಶ ಜನರನ್ನು ಪರಿಗಣಿಸಿ ಅವರ ತಕ್ಕ ಮಟ್ಟಿಗೆ ವಿಚಾರ ಮಾಡಿ ಎಲ್‌ಐಸಿ ಕಂಪಯಿಂದ ಪರಿಹಾರ ನೀಡಲಾಗಿವುದು ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಮಾರುಕಟ್ಟೆಯ ಪ್ರಬಂದಕರಾದ ಯಶವಂತ ಮುರಾಣಿ, ಸಚಿಜು ಮೊದಪ್ಪನ್ನವರ, ವ್ಹಿ ಪಿ ಗಾಯಕೊಂಡೆ ಹಾಗೂ ಉಪಸ್ಥಿತರಿದ್ದರು.

loading...