ಏಶೀಯನ್ ಗೇಮ್ಸ್ ನಲ್ಲಿ ಕಂಚು ಗೆದ್ದ ಹೆಮ್ಮೆಯ ಮಲಪ್ರಭಾ ಜಾಧವೆ ಅದ್ದೂರಿ ಸ್ವಾಗತ

0
0
loading...

ಏಶೀಯನ್ ಗೇಮ್ಸ್ ನಲ್ಲಿ ಕಂಚು ಗೆದ್ದ ಹೆಮ್ಮೆಯ ಮಲಪ್ರಭಾ ಜಾಧವೆ ಅದ್ದೂರಿ ಸ್ವಾಗತ

ಕನ್ನಡಮ್ಮ ಸುದ್ದಿ-ಬೆಳಗಾವಿ: ಇತ್ತಿಚ್ಚಿಗೆ ನಡೆದ ಏಶೀಯನ್ ಗೇಮ್ಸ್ ನಲ್ಲಿ ಜುಡು ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ರಾಷ್ಟ್ರಕ್ಕೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿರುವ ಕುಮಾರಿ ಮಲಪ್ರಭಾ ಜಾಧವ್ ಗೆ ಅದ್ದೂರಿ ಸ್ವಾಗತ ಸನ್ಮಾನ ಮಾಡಲಾಯಿತು.

ಇಂದು ಮುಂಜಾನೆ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಸನ್ಮಾನಸಲಾಯುತು.ಕುಮಾರಿ ಮಲಪ್ರಭಾ ಜಾಧವಗೆ ಪೋಲಿಸ ಕಮ್ಮೀಶನರ್ ಡಿಸಿ ರಾಜಪ್ಪ,ಉಪ ಆಯುಕ್ತ ಸಿಮಾ ಲಾಟಕರ್ ಸತ್ಕರಿಸಿ ಅಭಿನಂದನೆ ಸಲ್ಲಿಸಿದರು .

ಮಲಪ್ರಭಾ ಜಾಧವ ಮಾತನಾಡಿ ಹರ್ಷ ವ್ಯಕ್ತಪಡಿಸಿದರು.ತಮ್ಮ ಸಾಧನೆಗೆ ತರಬೇತುದಾರರ ಮಾರ್ಗದರ್ಶನ ಕಾರಣ ಎಂದರು.ಬರುವ ದಿನಗಳಲ್ಲಿ ಜುಡು ಅಕ್ಯಾಡಮಿ ಆರಂಭಿಸುವ ಯೋಚನೆಯಿದ್ದು ಆರ್ಥಿಕ ಸಹಾಯ ಮಾಡಬೇಕೆಂಬ ಮನವಿ ಮಾಡಿಕೊಂಡಳು .

ಸಮಾರಂಭದಲ್ಲಿ ಜಿಲ್ಲಾ ಅಪರ ಅಧಿಕಾರಿ ,ತಹಶಿಲ್ದಾರರ ,ಉಪ ವಿಭಾಗಾಧಿಕಾರಿ ಸೇರಿದಂತೆ ಇತರರು ಕುಟುಂಬಸ್ಥರು ಇದ್ದರು .

loading...